ETV Bharat / bharat

ಕೊರೊನಾ ನಂತರವೂ ಬದಲಾಗದಿದ್ರೆ ಪಾಕಿಸ್ತಾನಕ್ಕೆ ಹೇಗೆ ಬುದ್ಧಿ ಕಲಿಸಬೇಕಂತ ಗೊತ್ತಿದೆ: ರಾಮ್​ ಮಾಧವ್ - India knows how to handle countries like Pakistan

ಕೊರೊನಾದ ಸಂಧಿಗ್ದ ಪರಿಸ್ಥಿತಿಯಲ್ಲಿ ಇಡೀ ಜಗತ್ತು ಇರಬೇಕಾದರೆ ಪಾಕಿಸ್ತಾನ ಮಾತ್ರ ತನ್ನ ಭಾರತ ವಿರೋಧಿ ನಿಲುವಿನಲ್ಲೇ ಇದೆ. ಕೊರೊನಾದ ಬಳಿಕವೂ ಸಂಬಂಧ ಸುಧಾರಿಸಲು ಬಯಸುವುದಿಲ್ಲವಾದರೆ ಅವರಿಗೆ ಹೇಗೆ ಬುದ್ದಿ ಕಳಿಸಬೇಕು ಎಂದು ಭಾರತಕ್ಕೆ ಗೊತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

India knows how to handle countries like Pakistan: Ram Madhav
ಪಾಕಿಸ್ತಾನದಂತಹ ದೇಶಗಳನ್ನು ಹೇಗೆ ನಿಭಾಯಿಸಬೇಕೆಂದು ಭಾರತಕ್ಕೆ ಗೊತ್ತಿದೆ
author img

By

Published : May 4, 2020, 9:20 AM IST

ನವದೆಹಲಿ: ಕೋವಿಡ್​ ಮಹಾಮಾರಿ ದೂರವಾದ ಬಳಿಕ ಜಗತ್ತು ಬದಲಾಗಲಿದೆ. ಪಾಕಿಸ್ತಾನದಂತಹ ರಾಷ್ಟ್ರಗಳು ಭಯೋತ್ಪಾದನೆಗೆ ಬೆಂಬಲಿಸುವ ತನ್ನ ಕ್ರಮವನ್ನು ಬದಲಾಯಿಸಬಹುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

ತಬ್ಲಿಘಿ​ ಜಮಾತ್​ ಕಾರ್ಯಕ್ರಮದಿಂದ ಕೊರೊನಾ ಹರಡಿದ ಬಳಿಕ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೇಳಿ ಬಂದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ಸಮುದಾಯದ ಒಂದು ಗುಂಪಿನ ಕೆಲ ಸದಸ್ಯರು ಮಾಡಿದ ತಪ್ಪಿಗಾಗಿ ಇಡೀ ಸಮುದಾವನ್ನು ದೂಷಿಸೂವುದು ನ್ಯಾಯವಲ್ಲ. ಇದು ಇಡೀ ಸಮುದಾಯಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಮಾಡುತ್ತದೆ ಎಂದರು.

ಇನ್ನು ಭಾರತದಲ್ಲಿ ಇಸ್ಲಾಮೋಫೋಬಿಯಾ ನಡೆಯುತ್ತಿದೆ ಎಂಬ ಆರೋಪವನ್ನು ತಿರಸ್ಕರಿಸಿದ ರಾಮ್ ಮಾಧವ್, ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಸಮುದಾಯಗಳ ಬೆಂಬಲ ಪಡೆದು ಮುನ್ನುಗ್ಗುತ್ತಿದ್ದಾರೆ. ಮೋದಿ-ಫೋಬಿಯಾದಿಂದ ಬಳಲುತ್ತಿರುವ ಕೆಲವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಕೊರೊನಾ ಪರಿಣಾಮದಿಂದಾಗಿ ಜಾಗತಿಕ ಕಾರ್ಪೋರೇಟ್​ ದೈತ್ಯಗಳು ಚೀನಾ ಬಿಟ್ಟು ಭಾರದತ್ತ ಬರಲಿವೆ ಎಂದ ಮಾಧವ್, ಕೊರೊನಾದ ಸಂಧಿಗ್ದ ಪರಿಸ್ಥಿತಿಯಲ್ಲಿ ಇಡೀ ಜಗತ್ತು ಇರಬೇಕಾದರೆ ಪಾಕಿಸ್ತಾನ ಮಾತ್ರ ತನ್ನ ಭಾರತ ವಿರೋಧಿ ನಿಲುವಿನಲ್ಲೇ ಇದೆ. ಕೊರೊನಾದ ಬಳಿಕವೂ ಸಂಬಂಧ ಸುಧಾರಿಸಲು ಬಯಸುವುದಿಲ್ಲವಾದರೆ ಅವರಿಗೆ ಹೇಗೆ ಬುದ್ದಿ ಕಳಿಸಬೇಕು ಎಂದು ಭಾರತಕ್ಕೆ ಗೊತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.