ನವದೆಹಲಿ: 2017ರಲ್ಲಿ ಕಾಶ್ಮೀರದ ಲೆಥ್ಪೊರದಲ್ಲಿ ಸಿಆರ್ಪಿಎಫ್ ಯೋಧರ ಕ್ಯಾಂಪ್ನೊಳಗೆ ನುಗ್ಗಿ ಗುಂಡಿನ ಮಳೆಗರೆದಿದ್ದ ಪ್ರಕರಣದ ಮಾಸ್ಟರ್ ಮೈಂಡ್ ನಾಸಿರ್ ಅಹ್ಮದ್ ತಂತ್ರೆಯನ್ನು ಭಾರತಕ್ಕೆ ಗಡಿ ಪಾರು ಮಾಡಲು ದುಬೈ ಸರ್ಕಾರ ಒಪ್ಪಿದೆ.
ಸಿಆರ್ಪಿಎಫ್ ಯೋಧರು ನಿದ್ರಿಸುವಾಗ ಕ್ಯಾಂಪ್ನೊಳಗೆ ನುಗ್ಗಿದ್ದ ಉಗ್ರರು ಯೋಧರ ಮೇಲೆ ಮನಸ್ಸೋ ಇಚ್ಛೆ ಗುಂಡಿನ ಮಳೆಗರೆದಿದ್ದರು. ಈ ವೇಳೆ ಐವರು ಸೈನಿಕರು ಹುತಾತ್ಮರಾಗಿದ್ದರು. ಡಿಸೆಂಬರ್ 30 ಮತ್ತು 31ರಂದು ನಡೆದ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿದ್ದ ಮೂವರು ಜೈಷೆ ಉಗ್ರರನ್ನು ಭಾರತೀಯ ಯೋಧರು ಕೊಂದಿದ್ದರು.
ಜೈಷೆ ಉಗ್ರ ಸಂಘಟನೆಯ ದಕ್ಷಿಣ ಕಾಶ್ಮೀರದ ಕಮಾಂಡರ್ ಆಗಿ ನಾಸಿರ್ ಕಾರ್ಯನಿರ್ವಹಿಸುತ್ತಿದ್ದ. ಲಾಥೆಪೊರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಸಿರ್ ಸಹೋದರ ನೂರ್ ತಂತ್ರೆಯನ್ನು ವಿಶೇಷ ವಿಮಾನದ ಮೂಲಕ ದೆಹಲಿಗೆ ಕರೆತರಲಾಗಿದ್ದು, ಎನ್ಐಎ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.