ETV Bharat / bharat

ಕಾಲಾಪಾನಿ ಮೇಲಿನ ನೇಪಾಳದ ಆರೋಪವನ್ನು ತಳ್ಳಿಹಾಕಿದ ಭಾರತ - ಕಾಲಾಪಾನಿ ಮತ್ತು ಲಿಪು ಲೇಖ್‌ನಲ್ಲಿನ ಭೂಪ್ರದೇಶ

ತೀಕ್ಷ್ಣವಾದ ರಾಜತಾಂತ್ರಿಕ ಮುಖಾಮುಖಿಗೆ ಕಾರಣವಾಗುವ ಕಾಲಾಪಾನಿ ಮೇಲಿನ ನೇಪಾಳದ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಕಾಲಾಪಾನಿಯ ಪ್ರದೇಶವನ್ನು ತಪ್ಪಾಗಿ ಸೇರಿಸಲಾಗಿರುವ ರಾಜಕೀಯ ನಕ್ಷೆಗಳನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ ಎಂಬ ನೇಪಾಳದ ಹೇಳಿಕೆಯನ್ನು ತಿರಸ್ಕರಿಸಿದೆ.

ಕಾಲಾಪಾನಿ ಮೇಲಿನ ನೇಪಾಳದ ಆರೋಪವನ್ನು  ತಳ್ಳಿಹಾಕಿದ ಭಾರತ
author img

By

Published : Nov 8, 2019, 9:24 PM IST

ನವದೆಹಲಿ:ತೀಕ್ಷ್ಣವಾದ ರಾಜತಾಂತ್ರಿಕ ಮುಖಾಮುಖಿಗೆ ಕಾರಣವಾಗುವ ಕಾಲಾಪಾನಿ ಮೇಲಿನ ನೇಪಾಳದ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಇಂದು ಕಾಲಾಪಾನಿಯ ಪ್ರದೇಶವನ್ನು ತಪ್ಪಾಗಿ ಸೇರಿಸಲಾಗಿರುವ ರಾಜಕೀಯ ನಕ್ಷೆಗಳನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ ಎಂಬ ನೇಪಾಳದ ಹೇಳಿಕೆಯನ್ನು ತಿರಸ್ಕರಿಸಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಸಂಘಟಿಸಿ ಮತ್ತು ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಗೃಹ ಸಚಿವಾಲಯವು ಭಾನುವಾರ ಹೊಸ ರಾಜಕೀಯ ನಕ್ಷೆಗಳನ್ನು ಬಿಡುಗಡೆ ಮಾಡಿತ್ತು. ಈ ನಕ್ಷೆಯಲ್ಲಿನ ಕಾಲಾಪಾನಿ ಮತ್ತು ಲಿಪು ಲೇಖ್‌ನಲ್ಲಿನ ಭೂಪ್ರದೇಶಗಳನ್ನು ಕಠ್ಮಂಡು ತನ್ನದೆಂದು ಹೇಳಿದೆ.

india dismissed nepals charge on kalapani
ಕಾಲಾಪಾನಿ ಮೇಲಿನ ನೇಪಾಳದ ಆರೋಪವನ್ನು ತಳ್ಳಿಹಾಕಿದ ಭಾರತ

ಈ ಕ್ರಮದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಎದ್ದ ಕೂಗು ಮತ್ತು ಆಕ್ರೋಶವನ್ನು ಅನುಸರಿಸಿ ನೇಪಾಳ ವಿದೇಶಾಂಗ ಸಚಿವಾಲಯವು ಮಂಗಳವಾರ ಔಪಚಾರಿಕ ಹೇಳಿಕೆಯಲ್ಲಿ ‘ಕಾಲಾಪಾನಿ ನೇಪಾಳದ ಭೂಪ್ರದೇಶದ ಭಾಗವಾಗಿರುವ ಬಗ್ಗೆ ನೇಪಾಳ ಸರ್ಕಾರಕ್ಕೆ ಸ್ಪಷ್ಟತೆಯಿದ್ದು,ವಿದೇಶಾಂಗ ಕಾರ್ಯದರ್ಶಿ ಮಟ್ಟದ ಜಂಟಿ ಸಭೆಯಲ್ಲಿ, ನೇಪಾಳ ಮತ್ತು ಭಾರತದ ನಡುವೆ ಬಾಕಿ ಇರುವ ಗಡಿ ಸಂಬಂಧಿತ ಸಮಸ್ಯೆಗಳ ಕುರಿತು ಸಮಾಲೋಚಿಸಿ ಪರಿಹರಿಸುವ ಜವಾಬ್ದಾರಿಯನ್ನು ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ ಮತ್ತು ನೇಪಾಳ ಸರ್ಕಾರ ತನ್ನ ಅಂತರರಾಷ್ಟ್ರೀಯ ಗಡಿಗಳನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಎರಡು ನೆರೆಯ ರಾಷ್ಟ್ರಗಳ ನಡುವಿನ ಗಡಿ ಸಮಸ್ಯೆಗಳನ್ನು ಐತಿಹಾಸಿಕ ದಾಖಲೆಗಳು ಮತ್ತು ದೃಢವಾದ ಸಾಕ್ಷ್ಯಗಳ ಆಧಾರದ ಮೇಲೆ ರಾಜತಾಂತ್ರಿಕವಾಗಿ ಪರಿಹರಿಸಬೇಕು ಎಂಬ ನಿಲುವಿನ ಮೇಲೆ ದೃಢವಾಗಿದೆ.’ ಎಂದು ನೇಪಾಳ ಹೇಳಿದೆ.

ಆದರೆ ಇಂದು ನವದೆಹಲಿ ನೇಪಾಳದ ದೂರನ್ನು ತಳ್ಳಿಹಾಕಿ ಹೊಸ ನಕ್ಷೆಗಳು ಸರಿಯಾಗಿವೆ ಎಂದು ಹೇಳಿದೆ. “ನಮ್ಮ ನಕ್ಷೆ ನಿಖರವಾಗಿ ಭಾರತದ ಸಾರ್ವಭೌಮ ಪ್ರದೇಶವನ್ನು ಚಿತ್ರಿಸುತ್ತದೆ. ಹೊಸ ನಕ್ಷೆಯಲ್ಲಿ ಯಾವುದೇ ರೀತಿಯಲ್ಲಿ ನೇಪಾಳದೊಂದಿಗಿನ ನಮ್ಮ ಗಡಿಯನ್ನು ಪರಿಷ್ಕರಿಸಲಾಗಿಲ್ಲ, ಅಸ್ತಿತ್ವದಲ್ಲಿರುವ ಆಡಳಿತ ವ್ಯವಸ್ಥೆಯಲ್ಲಿ ನೇಪಾಳದೊಂದಿಗೆ ಗಡಿ ವಿವರಣೆಯ ಪ್ರಯತ್ನ ನಡೆಯುತ್ತಿದೆ. ನಮ್ಮ ನಿಕಟ ಮತ್ತು ಸ್ನೇಹಪರ ದ್ವಿಪಕ್ಷೀಯ ಸಂಬಂಧಗಳ ಉತ್ಸಾಹದಲ್ಲಿ ಸಂವಾದದ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ”ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಕಾಲಾಪಾನಿ, ಲಿಪು ಲೇಖ್ ಮತ್ತು ಲಿಂಫುಯಾಧಾರಾ ತನ್ನ ಪ್ರದೇಶದ ಭಾಗವಾಗಿದೆ ಮತ್ತು ನೇಪಾಳವು ತನ್ನ ಸಮೀಕ್ಷಾ ಇಲಾಖೆ ಹೊರಡಿಸಿದ ನಕ್ಷೆಗಳಲ್ಲಿ ಹಿಮಾಲಯ ಪ್ರಾಂತ್ಯದ ಭಾಗವಾಗಿ ತೋರಿಸಲ್ಪಟ್ಟಿದೆ ಎಂದು ಹೇಳುತ್ತದೆ. ಇದು ನೇಪಾಳಕ್ಕೆ ಸೂಕ್ಷ್ಮ ರಾಜಕೀಯ ವಿಷಯವಾಗಿ ಉಳಿದಿದೆ. ಎಂಇಎ ಇಂದು ಒಂದು ದೇಶವನ್ನು ಅಥವಾ ಯಾವುದೇ ವ್ಯಕ್ತಿಯನ್ನು ಹೆಸರಿಸದೆ ‘ಪಟ್ಟಭದ್ರ ಹಿತಾಸಕ್ತಿಗಳು’ ಈ ವಿಷಯದಲ್ಲಿ ವಿಭಜನೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದೆ.

"ಅದೇ ಸಮಯದಲ್ಲಿ, ನಮ್ಮ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಎರಡೂ ದೇಶಗಳು ಎಚ್ಚರ ವಹಿಸಬೇಕು" ಎಂದು ರವೀಶ್ ಕುಮಾರ್ ಟೀಕಿಸಿದ್ದಾರೆ.

ಈ ವಿಷಯವು ಈಗಾಗಲೇ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ಮತ್ತು ನೇಪಾಳದ ಪ್ರಮುಖ ನಾಗರಿಕರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮುಂಚೂಣಿಯಲ್ಲಿದೆ. ಮಂಗಳವಾರ ಕಠ್ಮಂಡುವಿನ ಔಪಚಾರಿಕ ಆಕ್ಷೇಪಣೆಯನ್ನು ಅನುಸರಿಸಿ, ನೇಪಾಳಿ ಕಾಂಗ್ರೆಸ್ ಮುಖಂಡ ಗಗನ್ ಥಾಪಾ ಅವರು ಟ್ವೀಟ್ ನಲ್ಲಿ ವಿದೇಶಾಂಗ ಸಚಿವ ಗಯಾವಲಿ ಅವರನ್ನು ಈ ವಿಷಯದ ಬಗ್ಗೆ ರಾಜಕೀಯ ಶಕ್ತಿಗಳ ಮೇಲೆ ಏಕತೆಯನ್ನು ಕೋರಬೇಕೆಂದು ಕೇಳಿಕೊಂಡರು ಮತ್ತು ಪ್ರಧಾನಿ ಒಲಿ ಅವರು ಭಾರತೀಯ ಸರ್ಕಾರದ 'ಏಕಪಕ್ಷೀಯ ಕ್ರಮ' ಎಂದು ಕರೆದಿದ್ದನ್ನು ವಿರೋಧಿಸಿ ಎಲ್ಲರನ್ನೂ ಒಟ್ಟುಗೂಡಿಸುತ್ತಾರೆ ಎಂದು ಆಶಿಸಿದ್ದಾರೆ.

  • हिजो गरेको गल्ती सच्याऊ र काठमाडौँलाई बस्न योग्य सहर बनाऔँ।खुला ठाउँ हाम्रो लागि मात्र होइन आउँदो पुस्ताका लागि पनि हो,टुँडिखेल खुला राखौँ।
    म त भोलि टुँडिखेल जादैछु,तपाईँ नि ? #OccupyTundikhel pic.twitter.com/dM8zRFmDmy

    — Gagan Thapa (@thapagk) November 8, 2019 " class="align-text-top noRightClick twitterSection" data=" ">

ಕೆಲವು ಭಾಗಗಳಲ್ಲಿ ‘ಬ್ಯಾಕ್ ಆಫ್ ಇಂಡಿಯಾ’ ಮತ್ತು ‘ಗೋ ಬ್ಯಾಕ್ ಇಂಡಿಯಾ’ ಎಂದು ಬರೆದಿರುವ ಪೋಸ್ಟರ್‌ಗಳು ಮತ್ತು ಫಲಕಗಳನ್ನು ಹೊತ್ತುಕೊಂಡು ಬೀದಿಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನೇಪಾಳದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಲೇಖಕ ಸುಜೀವ್ ಶಾಖ್ಯ ಅವರು ಇದು 2015 ರ ಆರ್ಥಿಕ ದಿಗ್ಬಂಧನಕ್ಕೆ ಹೋಲುವ ಘರ್ಷಣೆಗೆ ಮತ್ತೊಮ್ಮೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. "ನೇಪಾಳದೊಂದಿಗಿನ ಪ್ರಸ್ತುತ ಗಡಿ ಸಮಸ್ಯೆಯನ್ನು ಭಾರತವು ಚಾತುರ್ಯದಿಂದ ನಿಭಾಯಿಸದಿದ್ದರೆ, ಅದು ತನ್ನ ನಿಯಂತ್ರಣದಿಂದ ಹೊರಗುಳಿಯುವ ಪರಿಸ್ಥಿತಿಗೆ ಇಳಿಸುತ್ತದೆ. 2015 ರ ಭಾರತೀಯ ದಿಗ್ಬಂಧನವು ಇಡೀ ಪೀಳಿಗೆಯ ನೇಪಾಳಿಗಳನ್ನು ದೂರವಿಟ್ಟಿದೆ ಮತ್ತು ನೇಪಾಳಿಗಳ ನೆನಪುಗಳು ಇನ್ನೂ ತಾಜಾವಾಗಿವೆ. ಹಿಂದಿನದರಿಂದ ಪಾಠ ಕಲಿಯಿರಿ ”ಎಂದು ಸುಜೀವ್ ಶಾಖ್ಯ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Intro:Body:

delhi

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.