ETV Bharat / bharat

ದೇಶದಲ್ಲಿ 5 ಲಕ್ಷ ದಾಟಿದ ಕೊರೊನಾ... ಮಹಾರಾಷ್ಟ್ರದಲ್ಲಿಂದು ದಾಖಲೆಯ 5 ಸಾವಿರ ಕೇಸ್​! - ಭಾರತದಲ್ಲಿ ಕೋವಿಡ್​

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣ ದಾಖಲೆಯ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಒಟ್ಟು ಸೋಂಕಿತ ಪ್ರಕರಣ 5 ಲಕ್ಷದ ಗಡಿ ದಾಟಿದೆ.

India Crosses 5 Lakh Coronavirus Cases
India Crosses 5 Lakh Coronavirus Cases
author img

By

Published : Jun 26, 2020, 9:10 PM IST

ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್​ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಇದೀಗ ಐದು ಲಕ್ಷ ಗಡಿ ದಾಟಿದೆ. ಇಂದು ಕೂಡ 17 ಸಾವಿರಕ್ಕೂ ಅಧಿಕ ಕೇಸ್​ ದೇಶದಲ್ಲಿ ಹೊಸದಾಗಿ ದಾಖಲಾಗಿವೆ.

ಮಹಾರಾಷ್ಟ್ರದಲ್ಲೇ ಇಂದು ಬರೋಬ್ಬರಿ 5,024 ಸಾವಿರ ಕೋವಿಡ್​ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,52,765 ಆಗಿದೆ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲೂ ದಾಖಲೆ ಪ್ರಮಾಣದ ಕೊರೊನಾ ಪ್ರಕರಣ ದಾಖಲಾಗಿವೆ.

ದೆಹಲಿಯಲ್ಲಿಂದು 3,460 ಹೊಸ ಕೇಸ್​ ಕಾಣಿಸಿಕೊಂಡಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 77,240 ಆಗಿದೆ. ಗುಜರಾತ್​​ನಲ್ಲಿ 580 ಪ್ರಕರಣ ಕಾಣಿಸಿಕೊಂಡಿವೆ. ಕರ್ನಾಟಕದಲ್ಲೂ 445 ಕೇಸ್​ ಇಂದು ಸಿಕ್ಕಿದ್ದು, ಪಶ್ಚಿಮ ಬಂಗಾಳದಲ್ಲಿ 542 ಪ್ರಕರಣ ಕಾಣಿಸಿಕೊಂಡಿವೆ.ಇನ್ನು ತಮಿಳುನಾಡಿನಲ್ಲಿ ಇಂದೇ 3 ಸಾವಿರಕ್ಕೂ ಹೆಚ್ಚು ಕೇಸ್​ ದಾಖಲಾಗಿವೆ.

ಸದ್ಯ ಭಾರತದಲ್ಲಿ 1ಲಕ್ಷ 95 ಸಾವಿರಕ್ಕೂ ಅಧಿಕ ಆ್ಯಕ್ಟಿವ್​ ಕೇಸ್​ಗಳಿದ್ದು, 16 ಸಾವಿರ ಜನರು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. ಸದ್ಯ ಭಾರತ ಪ್ರಪಂಚದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಅಮೆರಿಕ, ಬ್ರೇಜಿಲ್​ ಹಾಗೂ ರಷ್ಯಾ ಕ್ರಮವಾಗಿ ಮೂರು ಸ್ಥಾನದಲ್ಲಿವೆ. ಇನ್ನು ಪ್ರಪಂಚದಾದ್ಯಂತ ಒಟ್ಟು ಕೋವಿಡ್​ ಸಂಖ್ಯೆ 1 ಕೋಟಿ ದಾಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.