ನವದೆಹಲಿ : ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಮಾತುಕತೆಯ ನಂತರ ವ್ಯಾಪಾರ ಮತ್ತು ಹೂಡಿಕೆ, ತೈಲ ಮತ್ತು ಅನಿಲ, ಸೈಬರ್ ಭದ್ರತೆ ಮತ್ತು ಮಾಹಿತಿ ತಂತ್ರಜ್ಞಾನದಂತಹ ವ್ಯಾಪಕ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಭಾರತ ಮತ್ತು ಬ್ರೆಜಿಲ್ ಶನಿವಾರ 15 ಒಪ್ಪಂದಗಳನ್ನು ಮಾಡಿಕೊಂಡಿವೆ.
ಎರಡು ಕಾರ್ಯತಂತ್ರದ ಪಾಲುದಾರರ ನಡುವಿನ ಸಂಬಂಧಗಳನ್ನು ಇನ್ನಷ್ಟು ವಿಸ್ತರಿಸಲು ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
-
Addressing the press with President @jairbolsonaro. Watch. https://t.co/4f4pJscRnq
— Narendra Modi (@narendramodi) January 25, 2020 " class="align-text-top noRightClick twitterSection" data="
">Addressing the press with President @jairbolsonaro. Watch. https://t.co/4f4pJscRnq
— Narendra Modi (@narendramodi) January 25, 2020Addressing the press with President @jairbolsonaro. Watch. https://t.co/4f4pJscRnq
— Narendra Modi (@narendramodi) January 25, 2020
ನಿಮ್ಮ ಭೇಟಿ ಭಾರತ ಮತ್ತು ಬ್ರೆಜಿಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ ಎಂದು ಮೋದಿ ಬೋಲ್ಸನಾರೊಗೆ ತಿಳಿಸಿದರು.
ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಬ್ರೆಜಿಲ್ ಅಮೂಲ್ಯ ಪಾಲುದಾರ ಎಂದು ಕರೆದ ಪ್ರಧಾನಿ, ಭೌಗೋಳಿಕ ಅಂತರದ ಹೊರತಾಗಿಯೂ ಎರಡೂ ದೇಶಗಳು ವಿವಿಧ ಜಾಗತಿಕ ವಿಷಯಗಳ ಬಗ್ಗೆ ಒಟ್ಟಾಗಿವೆ ಎಂದರು.
ಬೋಲ್ಸೊನಾರೊ ತಮ್ಮ ಪುತ್ರಿ ಲಾರಾ ಬೋಲ್ಸನಾರೊ, ಸೊಸೆ ಲೆಟಿಸಿಯಾ ಫಿರ್ಮೊ, ಎಂಟು ಮಂತ್ರಿಗಳು, ಬ್ರೆಜಿಲ್ ಸಂಸತ್ತಿನ ನಾಲ್ಕು ಸದಸ್ಯರು ಮತ್ತು ದೊಡ್ಡ ವ್ಯಾಪಾರ ನಿಯೋಗದೊಂದಿಗೆ ಶುಕ್ರವಾರ ಭಾರತಕ್ಕೆ ಆಗಮಿಸಿದ್ದರು.
ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಭಾನುವಾರ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.