ETV Bharat / bharat

ಈಶಾನ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ಜಪಾನ್ ಪಾತ್ರ: ಅಬೆ ನಾಯಕತ್ವ ನಂಬಿದೆ ಭಾರತ - ಈಶಾನ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ಭಾರತ, ಪ್ರಧಾನಿ ಅಬೆ ನಾಯಕತ್ವವನ್ನು ನಂಬಿ

ಇಂಡೋ-ಪೆಸಿಫಿಕ್ ನವದೆಹಲಿ ಮತ್ತು ಟೋಕಿಯೋ ನಡುವಿನ ಸಹಕಾರದ ಪ್ರಮುಖ ಕ್ಷೇತ್ರವಾಗಿದೆ ಮತ್ತು ಭಾರತದ ಈಶಾನ್ಯ ರಾಜ್ಯಗಳು ಇದರಲ್ಲಿ ಒಂದು ಪ್ರಮುಖ ಅಂಶವಾಗಿದೆ.

ಭಾರತ, ಪ್ರಧಾನಿ ಅಬೆ ನಾಯಕತ್ವವನ್ನು ನಂಬಿದೆ
ಭಾರತ, ಪ್ರಧಾನಿ ಅಬೆ ನಾಯಕತ್ವವನ್ನು ನಂಬಿದೆ
author img

By

Published : Aug 30, 2020, 8:48 AM IST

ನವದೆಹಲಿ: ಈಶಾನ್ಯ ರಾಜ್ಯಗಳ ಅಭಿವೃದ್ಧಿ ಯೋಜನೆಗಳಲ್ಲಿ ಭಾರತವು ವಿದೇಶಿ ಶಕ್ತಿಗಳ ಪಾಲ್ಗೊಳ್ಳುವಿಕೆಯನ್ನು ಬಯಸದಿದ್ದರೂ ಜಪಾನ್ ಸಹಕಾರವನ್ನು ಬಯಸುತ್ತದೆ. ಏಕೆಂದರೆ ಆರೋಗ್ಯದ ಕಾರಣಕ್ಕಾಗಿ ಈ ವಾರ ರಾಜೀನಾಮೆ ನೀಡಲು ಮುಂದಾಗಿರುವ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಮೇಲಿನ ಕೇಂದ್ರ ಸರ್ಕಾರದ ನಂಬಿಕೆಯೇ ಈಶಾನ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು ಎಂದು ಭಾರತದ ಮಾಜಿ ರಾಜತಾಂತ್ರಿಕರೊಬ್ಬರು ಹೇಳಿದರು.

"ಸಾಂಪ್ರದಾಯಿಕವಾಗಿ, ಈಶಾನ್ಯ ರಾಜ್ಯಗಳಲ್ಲಿ ವಿದೇಶಿ ಶಕ್ತಿಗಳ ಪಾಲ್ಗೊಳ್ಳುವಿಕೆ ಬಗ್ಗೆ ಭಾರತವು ಬಹಳ ಸೂಕ್ಷ್ಮತೆಯನ್ನು ಹೊಂದಿದೆ" ಎಂದು ಗೇಟ್‌ವೇ ಹೌಸ್ ಥಿಂಕ್ ಟ್ಯಾಂಕ್‌ನ ವಿಶೇಷ ಸಹೋದ್ಯೋಗಿ ಮತ್ತು ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ರಾಜೀವ್ ಭಾಟಿಯಾ 'ಈಟಿವಿ ಭಾರತ'ಗೆ ತಿಳಿಸಿದರು.

"ಆದರೆ ನವದೆಹಲಿ ವಾಸ್ತವವಾಗಿ ಈಶಾನ್ಯ ರಾಜ್ಯಗಳ ಅಭಿವೃದ್ಧಿಯಲ್ಲಿ ಜಪಾನ್‌ನ ಸಹಯೋಗವನ್ನು ಭಾರತ ಬಯಸುತ್ತದೆ" ಎಂದು ಇಂಡೋ-ಪೆಸಿಫಿಕ್ ವ್ಯವಹಾರಗಳ ಬಗ್ಗೆ ನಿಯಮಿತವಾಗಿ ಪ್ರತಿಕ್ರಿಯಿಸುವ ಭಾಟಿಯಾ ಹೇಳಿದರು. "ಇದು ಅಬೆ ನಾಯಕತ್ವದ ಮೇಲೆ ಭಾರತ ಇರಿಸಿರುವ ನಂಬಿಕೆಯ ಸ್ಪಷ್ಟ ಸೂಚಕವಾಗಿದೆ."

ಇಂಡೋ-ಪೆಸಿಫಿಕ್ ನವದೆಹಲಿ ಮತ್ತು ಟೋಕಿಯೊ ನಡುವಿನ ಸಹಕಾರದ ಪ್ರಮುಖ ಕ್ಷೇತ್ರವಾಗಿದೆ ಮತ್ತು ಭಾರತದ ಈಶಾನ್ಯ ರಾಜ್ಯಗಳು ಇದರಲ್ಲಿ ಒಂದು ಪ್ರಮುಖ ಅಂಶವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಪಾನ್ ಅನ್ನು ಭಾರತದ ಈಶಾನ್ಯ ರಾಜ್ಯಗಳ ನೀತಿಯ ಮೂಲಾಧಾರವೆಂದು ವಿವರಿಸುವುದರೊಂದಿಗೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಅಭಿವೃದ್ಧಿಗೆ ಹೆಚ್ಚು ಸುದೃಢವಾಗಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿರುವುದರಿಂದ, ಈಶಾನ್ಯ ರಾಜ್ಯಗಳು ಈ ಪ್ರಕ್ರಿಯೆಯ ಪ್ರಮುಖ ಕೊಂಡಿಯಾಗಿ ಹೊರಹೊಮ್ಮಿದೆ.

ಇಂಡೋ-ಪೆಸಿಫಿಕ್ ಪ್ರದೇಶವು ಜಪಾನ್‌ನ ಪೂರ್ವ ಕರಾವಳಿಯಿಂದ ಆಫ್ರಿಕಾದ ಪೂರ್ವ ಕರಾವಳಿಯವರೆಗೆ ವ್ಯಾಪಿಸಿದೆ. 10 ರಾಷ್ಟ್ರಗಳ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) ಪ್ರಾದೇಶಿಕ ಬಣವು ಈ ಪ್ರದೇಶದ ಶಾಂತಿ ಸಮೃದ್ಧಿಗಾಗಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಭಾರತ ಮತ್ತು ಜಪಾನ್ ಎರಡೂ ದೇಶಗಳು ಒಪ್ಪಿಕೊಳ್ಳುತ್ತವೆ.

2018 ರಲ್ಲಿ ಟೋಕಿಯೊದಲ್ಲಿ ಮೋದಿ ಮತ್ತು ಅಬೆ ನಡುವಿನ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ನಂತರ ಹೊರಡಿಸಲಾದ ಭಾರತ-ಜಪಾನ್ ವಿಷನ್ ಹೇಳಿಕೆಯ ಪ್ರಕಾರ, ಎರಡೂ ಕಡೆಯವರು "ಮುಕ್ತ ಮತ್ತು ಸ್ವತಂತ್ರ ಇಂಡೋ-ಪೆಸಿಫಿಕ್ ಪ್ರದೇಶದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ".

"ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) ಐಕ್ಯತೆ ಮತ್ತು ಕೇಂದ್ರೀಯತೆಯು ಇಂಡೋ-ಪೆಸಿಫಿಕ್ ಪರಿಕಲ್ಪನೆಯ ಹೃದಯಭಾಗದಲ್ಲಿದೆ ಎಂದು ಉಭಯ ನಾಯಕರು ದೃಢ ಪಡಿಸಿದ್ದಾರೆ, ಇದು ಎಲ್ಲರನ್ನೂ ಒಳಗೊಳ್ಳುತ್ತದೆ ಮತ್ತು ಮುಕ್ತವಾಗಿದೆ" ಎಂದು ಅದು ಹೇಳಿದೆ.

ಈಶಾನ್ಯ ರಾಜ್ಯಗಳ ನೀತಿಯಲ್ಲಿ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಸಂಬಂಧ‌ಗಳನ್ನು, ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್)ದೊಂದಿಗೆ ಹಂಚಿಕೊಂಡಿದೆ.

ಈ ಹಿನ್ನಲೆಯಲ್ಲಿ ಆಗ್ನೇಯ ದೇಶಗಳೊಂದಿಗಿನ ತಮ್ಮ ಸಂಬಂಧವನ್ನು ಸುಧಾರಿಸಲು ನವದೆಹಲಿಯು ಜಪಾನ್ ದೇಶವನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳುತ್ತಿದೆ ಎಂಬ ಸೂಚಕವಾಗಿದೆ‌.

ಮೋದಿ ಮತ್ತು ಅಬೆ ವಿಶೇಷ ಸ್ನೇಹವನ್ನು ಹಂಚಿಕೊಂಡಿದ್ದಾರೆ ಮತ್ತು 2012-20 ರ ಅವಧಿಯನ್ನು ಭಾರತ-ಜಪಾನ್ ಸಂಬಂಧಗಳ ಸುವರ್ಣ ಯುಗ ಎಂದು ಭಾಟಿಯಾ ಹೇಳಿದ್ದಾರೆ.

2014 ರಲ್ಲಿ ಮೋದಿಯವರ ಟೋಕಿಯೊ ಭೇಟಿಯ ಸಂದರ್ಭದಲ್ಲಿ ಭಾರತ-ಜಪಾನ್ ಸಂಬಂಧಕ್ಕೆ 'ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವ'ಕ್ಕೆ ಮೂರು ಅಂಶಗಳಿವೆ ಎಂದು ಅವರು ವಿವರಿಸಿದರು. ದ್ವಿಪಕ್ಷೀಯ ಆರ್ಥಿಕ ಸಂಬಂಧಗಳು, ಈಶಾನ್ಯ ರಾಜ್ಯಗಳ ಮೇಲೆ ವಿಶೇಷ ಗಮನ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ಎದುರಿಸುವುದು.

"ಈಶಾನ್ಯ ರಾಜ್ಯಗಳ ಮೇಲೆ ಗಮನ ಕೆಂದ್ರೀಕರಿಸಲು ಎರಡು ಅಂಶಗಳಿವೆ - ಮೊದಲನೆಯದು ಅಭಿವೃದ್ಧಿ ಯೋಜನೆಗಳು ಮತ್ತು ಎರಡನೆಯದು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಯೋಜನೆಗಳು" ಎಂದು ಭಾಟಿಯಾ ಹೇಳಿದರು. "ಐತಿಹಾಸಿಕ ಕಾರಣಗಳಿಗಾಗಿ ಜಪಾನ್ ಈಶಾನ್ಯ ರಾಜ್ಯಗಳ ಜೊತೆಗೆ ವಿಶೇಷ ಸಂಬಂಧವನ್ನು ಹೊಂದಿದೆ " ಎಂದು ಅವರು ತಿಳಿಸಿದರು.

ಜಪಾನ್ ಕೆಲವು ಸಮಯದಿಂದ ಈಶಾನ್ಯ ರಾಜ್ಯಗಳ ಅಭಿವೃದ್ಧಗಾಗಿ ಕೆಲಸ ಮಾಡುತ್ತಿದ್ದರೂ, 2017 ರ ಡಿಸೆಂಬರ್‌ನಲ್ಲಿ ಭಾರತ-ಜಪಾನ್ ಈಶಾನ್ಯ ರಾಜ್ಯಗಳ ನೀತಿ ವೇದಿಕೆ ಅನ್ನು ಪ್ರಾರಂಭಿಸುವುದರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಚೈತನ್ಯ ತುಂಬಿದವು. ಈ ವೇದಿಕೆಯು ಭಾರತ-ಜಪಾನ್ ಸಹಯೋಗಕ್ಕೆ ಒಂದು ಹೊಸ ಆಯಾಮ ನೀಡಿತು. ಇದು ಇಂಡೊ- ಪೆಸಿಪಿಕ್ ಕಾರ್ಯತಂತ್ರಕ್ಕೆ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ದೆಹಲಿಯ ಈಶಾನ್ಯ ರಾಜ್ಯಗಳ ನೀತಿ ಆರ್ಥಿಕ ಆಧುನೀಕರಣಕ್ಕಾಗಿ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಿದೆ‌. ಇದರಲ್ಲಿ ಸಂಪರ್ಕ, ಅಭಿವೃದ್ಧಿ ಮೂಲಸೌಕರ್ಯ, ಕೈಗಾರಿಕಾ ಸಂಪರ್ಕಗಳು ಮತ್ತು ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕ್ರೀಡಾ-ಸಂಬಂಧಿತ ಚಟುವಟಿಕೆಗಳ ಮೂಲಕ ಪರಸ್ಪರ ನಾಗರೀಕ ಸಂಪರ್ಕಗಳನ್ನು ಹೆಚ್ಚಿಸುವುದು ಸೇರಿದೆ.

ಜಪಾನ್ ಸಹಕರಿಸಲಿರುವ ಪ್ರಮುಖ ಯೋಜನೆಗಳಲ್ಲಿ ಗುವಾಹಟಿ ನೀರು ಸರಬರಾಜು ಯೋಜನೆ ಮತ್ತು ಅಸ್ಸಾಂನ ಗುವಾಹಟಿ ಒಳಚರಂಡಿ ಯೋಜನೆ, ಈಶಾನ್ಯ ರಸ್ತೆ ಸಂಪರ್ಕ ಸುಧಾರಣೆ ಅಸ್ಸೋಂ ಮತ್ತು ಮೇಘಾಲಯದಲ್ಲಿ ಹರಡಿರುವ ಯೋಜನೆ, ಮೇಘಾಲಯದಲ್ಲಿ ಈಶಾನ್ಯ ನೆಟ್‌ವರ್ಕ್ ಸಂಪರ್ಕ ಸುಧಾರಣಾ ಯೋಜನೆ, ಸಿಕ್ಕಿಂನಲ್ಲಿ ಜೀವವೈವಿಧ್ಯ ಸಂರಕ್ಷಣೆ ಮತ್ತು ಅರಣ್ಯ ನಿರ್ವಹಣಾ ಯೋಜನೆ, ತ್ರಿಪುರಾದಲ್ಲಿ ನಡೆಯುತ್ತಿರುವ ಸುಸ್ಥಿರ ಅರಣ್ಯ ನಿರ್ವಹಣಾ ಯೋಜನೆ, ಮಿಜೋರಾಂನಲ್ಲಿ ಕೈಗೆತ್ತಿಕೊಂಡಿರುವ ಸುಸ್ಥಿರ ಕೃಷಿ ಮತ್ತು ನೀರಾವರಿಗಾಗಿ ತಾಂತ್ರಿಕ ಸಹಕಾರ ಯೋಜನೆ ಮತ್ತು ನಾಗಾಲ್ಯಾಂಡ್‌ನಲ್ಲಿ ಅರಣ್ಯ ನಿರ್ವಹಣಾ ಯೋಜನೆಗಳು ಒಳಗೊಂಡಿವೆ.

ಭಾರತದ ಈಶಾನ್ಯ ರಾಜ್ಯಗಳ ನೀತಿ ಅಡಿಯಲ್ಲಿ ಸಂಪರ್ಕ ಜಾಲವು ಒಂದು ಪ್ರಮುಖ ವಲಯವಾಗಿರುವುದರಿಂದ, ನವದೆಹಲಿಯು ಈಶಾನ್ಯ ರಾಜ್ಯಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಜಪಾನ್‌ನ ಮುಕ್ತ ಮತ್ತು ಸ್ವತಂತ್ರ ಇಂಡೋ-ಪೆಸಿಫಿಕ್ ಕಾರ್ಯತಂತ್ರವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸರಕು ಮತ್ತು ಸೇವೆಗಳ ಅಡೆತಡೆಯಿಲ್ಲದ ಚಲನೆಗೆ ಅವಕಾಶ ಕಲ್ಪಿಸುತ್ತದೆ‌. ಈ ಮುಕ್ತ ಸಂಚಾರವು ಪೂರ್ವ ಆಫ್ರಿಕಾದಿಂದ ದಕ್ಷಿಣ ಏಷ್ಯಾದವರೆಗೆ, ಅಲ್ಲಿಂದ ಆಗ್ನೇಯ ಏಷ್ಯಾದವರೆಗೆ ಹಾಗೂ ಅಲ್ಲಿಂದ ಪಶ್ಚಿಮ ಪೆಸಿಫಿಕ್ ಮಹಾಸಾಗರ ಪ್ರದೇಶ ಮತ್ತು ಜಪಾನ್ವರೆಗೆ ಒಳಗೊಂಡಿದೆ‌.

ಈಗ, ಭಾರತದ ಈಶಾನ್ಯ ರಾಜ್ಯಗಳವಲಯವು ಟೋಕಿಯೊದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ, ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ವು ಸಾಗರೋತ್ತರ ಅಭಿವೃದ್ಧಿ ನೆರವು (ಒಡಿಎ) ಸಾಲವನ್ನು 25,483 ಮಿಲಿಯನ್ ಯೆನ್ (ಸುಮಾರು 1,570 ಕೋಟಿ ರೂ.) ನೀಡುತ್ತದೆ. ಈ ಆರ್ಥಿಕ ನೆರವಿನಲ್ಲಿ ಅಸ್ಸೋಂನ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ಸೇತುವೆ ನಿರ್ಮಿಸಲಾಗಿದೆ. ಇದು ಭಾರತದ ಅತಿ ಉದ್ದದ ಸೇತುವೆ ಅಂದರೆ ಉತ್ತರ ದಂಡೆಯ ಅಸ್ಸೋಂನ ಧುಬ್ರಿ ಮತ್ತು ದಕ್ಷಿಣ ದಂಡೆಯ ಮೇಘಾಲಯದ ಫುಲ್ಬರಿಯನ್ನು ಸಂಪರ್ಕಿಸುವ 19.3 ಕಿ.ಮೀ ರಷ್ಟು ಇದ್ದು ಜಪಾನ್ ಸಹಯೋಗಕ್ಕಾಗಿ ಗುರುತಿಸಿರುವ ಈಶಾನ್ಯ ರಸ್ತೆ ಸಂಪರ್ಕ ಜಾಲ ಸುಧಾರಣಾ ಯೋಜನೆಯಡಿ ಬರುತ್ತದೆ.

ಭಾಟಿಯಾ ಪ್ರಕಾರ, ಉಭಯ ದೇಶಗಳ ನಾಗರಿಕರ ನಡುವೆ ಸಂಬಂಧವನ್ನು ಹೆಚ್ಚಿಸಲು ಸರಳ ನಿಯಮಗಳನ್ನು ಯೋಜಿಸಲಾಗುತ್ತಿದೆ. ಜಪಾನಿನ ಪ್ರವಾಸಿಗರು ಈಶಾನ್ಯ ರಾಜ್ಯಗಳ ಕಡೆಗೆ ಅದರ ನೈಸರ್ಗಿಕ ಆಕರ್ಷಣೀಯ ತಾಣಗಳು, ಬೌದ್ಧ ಧರ್ಮದ ಪ್ರೇಕ್ಷಣೀಯ ಸ್ಥಳಗಳು, ಮತ್ತು ಎರಡನೆಯ ಮಹಾಯುದ್ಧದ ಸ್ಪಷ್ಟವಾದ ಪರಿಕಲ್ಪನೆ ನೀಡುವ ಸ್ಥಳಗಳು ಜಪಾನೀಯರನ್ನು ಆಕರ್ಷಿಸುತ್ತದೆ. ಜಪಾನೀಯರು ಹೆಚ್ಚು ಇಷ್ಟ ಪಡುವ ಚೆರ್ರಿ ಹೂವನ್ನು ಮೇಘಾಲಯ ರಾಜ್ಯದಲ್ಲಿ ಬೆಳೆಯಲಾಗುತ್ತದೆ.

2006-07ರಲ್ಲಿ ಜಪಾನ್ ಪ್ರಧಾನ ಮಂತ್ರಿಯಾಗಿದ್ದಾಗ ಅಬೆ ಅವರು ಇಂಡೋ-ಪೆಸಿಫಿಕ್ ಪ್ರದೇಶದ ಕಲ್ಪನೆಯನ್ನು ತಂದರು ಎಂದು ಭಾಟಿಯಾ ಹೇಳಿದ್ದಾರೆ. ಜಪಾನ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದೊಂದಿಗೆ ಭಾರತವು ಇಂಡೋ-ಪೆಸಿಫಿಕ್​​ನಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂಪರ್ಕಕ್ಕಾಗಿ ಕೆಲಸ ಮಾಡುತ್ತಿರುವ ಚತುರ್ ರಾಷ್ಟ್ರಗಳ ಒಂದು ಭಾಗವಾಗಿದೆ. ಈ ಪ್ರದೇಶದಲ್ಲಿ ಚೀನಾ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಎದುರಿಸುತ್ತಿದೆ.

"ದೊಡ್ಡ ಮಟ್ಟದಲ್ಲಿ ಭಾರತ-ಜಪಾನ್ ಸಹಯೋಗದ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕಾಗಿ ಶಿಂಜೊ ಅಬೆ ಅವರನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುವುದು" ಎಂದು ಭಾಟಿಯಾ ಹೇಳಿದರು.

-ಅರೂನಿಮ್ ಭುಯಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.