ETV Bharat / bharat

ಭಾರತ - ಆಸ್ಟ್ರೇಲಿಯಾಗಳ ನಡುವೆ  ರಕ್ಷಣಾ ಸಹಕಾರ ವೃದ್ಧಿಯಾಗುವ ನಿರೀಕ್ಷೆ - ಪ್ರಧಾನ ಮಂತ್ರಿ ನರೇಂದ್ರ ಮೋದಿ

ನರೇಂದ್ರ ಮೋದಿ ಮತ್ತು ಸ್ಕಾಟ್ ಮಾರಿಸನ್ ನಡುವೆ ಇಂದು ನಡೆದ ಮೊದಲ ಶೃಂಗಸಭೆಯ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ರಕ್ಷಣಾ ಸಹಕಾರ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಉಭಯ ದೇಶಗಳು ತಿಳಿಸಿವೆ.

india australia
india australia
author img

By

Published : Jun 4, 2020, 7:54 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ನಡುವೆ ಇಂದು ನಡೆದ ಮೊದಲ ಶೃಂಗಸಭೆಯು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜಿಸುವ ಬದ್ಧತೆ ಪುನರುಚ್ಚರಿಸಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕಡಲ ಸಹಕಾರ ಮತ್ತು ಮ್ಯೂಚುವಲ್ ಲಾಜಿಸ್ಟಿಕ್ಸ್ ಬೆಂಬಲ ವ್ಯವಸ್ಥೆ ಇಂಡೋ - ಪೆಸಿಫಿಕ್ ಕಾರ್ಯತಂತ್ರದ ಮೇಲೆ ಕೇಂದ್ರೀಕೃತವಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಶೀಲತೆ ಮತ್ತು ಹಿಂದೂ ಮಹಾಸಾಗರ ಪ್ರದೇಶ ಮತ್ತು ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಚೀನಾದ ಕಾರ್ಯಾಚರಣೆಯ ಮೇಲೆ ಕಣ್ಣಿಟ್ಟಿರುವ ಎರಡು ದೇಶಗಳು ಈ ಕುರಿತು ರಕ್ಷಣಾ ಪಡೆಗಳ ಪರಸ್ಪರ ಸಹಕಾರ ನೀಡಲು ತೀರ್ಮಾನಿಸಿದವು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಮಗ್ರ ಕಾರ್ಯತಂತ್ರದಲ್ಲಿ ಸಹಭಾಗಿತ್ವ ಇರಲಿದೆ ಎಂದು ಉಭಯ ದೇಶಗಳು ತಿಳಿಸಿವೆ. ಇದು ಭಾರತ-ಆಸ್ಟ್ರೇಲಿಯಾ ರಕ್ಷಣಾ ಸಹಕಾರವನ್ನು ಹೆಚ್ಚು ಅರ್ಥಪೂರ್ಣವಾಗಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.