ರಾಂಚಿ(ಜಾರ್ಖಂಡ್): ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮನೆಗೆ ತೆರಳಿದ್ದ ಜಾರ್ಖಂಡ್ ಮೂಲದ ಕಾರ್ಮಿಕರು ಮತ್ತೆ ತಮ್ಮ ರಾಜ್ಯದಿಂದ ಕರ್ನಾಟಕಕ್ಕೆ ವಾಪಸ್ ಆಗಿದ್ದಾರೆ.
ಜಾರ್ಖಂಡ್ನ 7 ಜನ ಕಾರ್ಮಿಕರು ವಿಜಯಪುರದ ಕ್ರಷರ್ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ನಿಯಮಗಳು ಸಡಿಲವಾಗಿ ಮತ್ತೆ ಕೆಲಸ ಕಾರ್ಯಗಳು ಪ್ರಾರಂಭವಾಗುತ್ತಿದ್ದಂತೆ ವೃತ್ತಿಪರ ಕಾರ್ಮಿಕರಿಗೆ ಕರೆ ಮಾಡಿ ವಿಮಾನದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಕಾರ್ಮಿಕನೋರ್ವ, ಕಳೆದ 2 ತಿಂಗಳಿಂದ ಕೆಲಸವಿಲ್ಲದೆ ಸಾಕಷ್ಟು ಕಷ್ಟವಾಗಿತ್ತು. ಆದರೀಗ ನಾವು ಕಲಿತ ಕೆಲಸ ನಮ್ಮ ಕೈಹಿಡಿದಿದೆ. ಕ್ರಷರ್ ಮಾಲೀಕರು ನಮಗೆ ಕರೆ ಮಾಡಿ ಕೆಲಸಕ್ಕೆ ಬರುವಂತೆ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನಾವು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೇವೆ ಎಂದಿದ್ದಾರೆ.
7 ಜನ ಕಾರ್ಮಿಕರು ರಾಂಚಿ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ರಸ್ತೆ ಮಾರ್ಗದಲ್ಲಿ ವಿಯಯಪುರ ತಲುಪಿದ್ದಾರೆ. ಲಾಕ್ಡೌನಿಂದ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಮನೆ ಸೇರುವಂತಾಗಿತ್ತು. ನಿಯಮಗಳಲ್ಲಿ ಕೊಂಚ ಸಡಿಲಿಕೆಯಾದ ನಂತರ ಮತ್ತೆ ಕೆಲಸಕ್ಕೆ ಮರಳುವಂತಾಗಿದೆ.