ETV Bharat / bharat

ಪೌಷ್ಠಿಕ ಯೋಜನೆ ಜಾರಿಯ ಮೇಲೆ ಪರಿಣಾಮಗಳೇನು ಗೊತ್ತಾ!? - ಅನುದಾನ ಬಳಸಿಕೊಳ್ಳುವಲ್ಲಿ ಅಸಮರ್ಥತೆ

ಸರಕಾರದ ಯೋಜನೆಗಳ ಜಾರಿಯಲ್ಲಿಯ ಅತಿ ಸಾಮಾನ್ಯ ಸಮಸ್ಯೆ ಎಂದರೆ ಅನುದಾನದ ಕೊರತೆ. ಸಾಕಷ್ಟು ಅನುದಾನವಿದ್ದರೂ, ಜಾರಿಗೊಳಿಸಬೇಕಾದ ಅಧಿಕಾರಿಗಳ ಉಪೇಕ್ಷೆಯಿಂದ ಅನುದಾನ ಬಳಕೆಯಾಗುವುದಿಲ್ಲ. ಇತ್ತೀಚೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು “ಪೋಷಣೆ ಅಭಿಯಾನ” ಯೋಜನೆಯನ್ನು ಸಮರೋಪಾದಿಯಲ್ಲಿ ಕಾರ್ಯಗತಗೊಳಿಸುವಂತೆ ಹಾಗೂ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಬಳಸುವಂತೆ ಸಂಬಂಧಿಸಿದ ರಾಜ್ಯಗಳನ್ನು ಆಗ್ರಹಿಸಿದಾಗ ಈ ವಿಷಯ ವಿವಾದದ ಕೇಂದ್ರವಾಯಿತು. ಈ ಕಲ್ಯಾಣ ಯೋಜನೆಯ ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸುವಲ್ಲಿ ರಾಜ್ಯಗಳು ಹಿಂದೆ ಬಿದ್ದಿವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ದೂರಿರುವುದು ಪರಿಸ್ಥಿತಿಯ ತೀವ್ರತೆಯನ್ನು ಬಿಂಬಿಸಿದೆ.

ಪೌಷ್ಠಿಕ ಯೋಜನೆ
author img

By

Published : Nov 14, 2019, 9:22 PM IST

ಪೋಷಣೆ ಅಭಿಯಾನವನ್ನು ಕೇವಲ ಹೆಸರಿಗೆ ಮಾತ್ರ ಜಾರಿಗೊಳಿಸಲಾಗಿದೆ ಹಾಗೂ ಪಶ್ಚಿಮ ಬಂಗಾಳ, ಹರಿಯಾಣ, ಪಂಜಾಬ್‌, ಕೇರಳ, ಒಡಿಶಾ ಮತ್ತು ಗೋವಾ ರಾಜ್ಯಗಳು ಈ ವಿಷಯದಲ್ಲಿ ಸಾಕಷ್ಟು ಹಿಂದಿವೆ. ಕೇಂದ್ರ ಸರ್ಕಾರ ಈ ಯೋಜನೆಗೆ ಇದುವರೆಗೆ ರೂ. 3,769 ಕೋಟಿ ಅನುದಾನ ನೀಡಿದ್ದರೂ ಕೇವಲ ರೂ. 1,058 (ಶೇಕಡಾ 33) ಮಾತ್ರ ಬಳಕೆಯಾಗಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಗೋವಾ ರಾಜ್ಯಗಳು ಯೋಜನೆಗೆ ಚಾಲನೆ ಸಹ ನೀಡಿಲ್ಲ. ಕರ್ನಾಟಕ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಅನುದಾನದ ಕೇವಲ ಶೇಕಡಾ ಒಂದು ಭಾಗವನ್ನು ಮಾತ್ರ ವೆಚ್ಚ ಮಾಡಲಾಗಿದೆ. ಇನ್ನು, ಹರಿಯಾಣ ಮತ್ತು ಕೇರಳ ರಾಜ್ಯಗಳ ಅನುದಾನದ ಬಳಕೆಯ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ.

ಕೇಂದ್ರದ ಜೊತೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸರಕಾರ ಸದರಿ ಯೋಜನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಕೂಡಾ ಮುಂದಾಗಿಲ್ಲ. ಯೋಜನೆಯನ್ನು ಏಕೆ ಜಾರಿಗೊಳಿಸಿಲ್ಲ ಎಂಬುದಕ್ಕೆ ವಿವರಣೆ ನೀಡಿರುವ ರಾಜ್ಯದ ಸಚಿವ ಶಶಿ ಪಾಂಜಾ, ಪೋಷಣೆಗೆ ಸಂಬಂಧಿಸಿದ ತಮ್ಮ ರಾಜ್ಯದ ಯೋಜನೆ ಕೇಂದ್ರದ ಯೋಜನೆಗಿಂತ ಹೆಚ್ಚು ವಿಸ್ತೃತವಾಗಿದೆ ಎಂದಿದ್ದಾರೆ.

ಬಹುತೇಕ ಇಂಥದೇ ಪರಿಸ್ಥಿತಿ ಬಿಜೆಪಿ ಆಡಳಿತದಲ್ಲಿರುವ ಗೋವಾ ರಾಜ್ಯದಲ್ಲಿಯೂ ಇದೆ. ಸೂಕ್ತ ಕ್ಷೇತ್ರ ಸಿಬ್ಬಂದಿಯ ಕೊರತೆಯಿಂದಾಗಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಗೋವಾ ಸರಕಾರದ ಸಂಬಂಧಿತ ಅಧಿಕಾರಿ ದೀಪಾಲಿ ನಾಯಕ್ ಹೇಳಿದ್ದಾರೆ. ಸ್ಮಾರ್ಟ್‌ ಫೋನ್‌ಗಳನ್ನು ಮತ್ತು ಸಾಧನಗಳನ್ನು ಹೊಂದುವಲ್ಲಿ ವಿಳಂಬದಿಂದಾಗಿ ಅನುದಾನ ಬಳಕೆ ಕನಿಷ್ಠ ಪ್ರಮಾಣದಲ್ಲಿದೆ ಎಂಬ ಕಾರಣಗಳನ್ನು ಅವರು ನೀಡಿದ್ದಾರೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಪರಿಸ್ಥಿತಿ ಕೊಂಚ ಉತ್ತಮವಾಗಿದೆ. ಸದ್ಯದ ಪ್ರಗತಿಯ ಗತಿ ನೋಡಿದರೆ ಯೋಜನೆ ಹಿಂದುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹಲವಾರು ಸಮೀಕ್ಷೆಗಳ ವರದಿಗಳು ಸ್ಪಷ್ಟಪಡಿಸಿವೆ. ಅಂತಾರಾಷ್ಟ್ರೀಯ ವೈದ್ಯಕೀಯ ಪತ್ರಿಕೆ ಲಾನ್ಸೆಟ್‌ ತನ್ನ ಸಮೀಕ್ಷೆಯಲ್ಲಿ ಈ ಕುರಿತು ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಮಹಿಳೆಯರು ಮತ್ತು ಮಕ್ಕಳಲ್ಲಿ ಕಡಿಮೆ ತೂಕ, ಜನನ ಸಂದರ್ಭದಲ್ಲಿ ಕಡಿಮೆ ತೂಕ ಹಾಗೂ ರಕ್ತಹೀನತೆಯಂತಹ ದೋಷಗಳನ್ನು ನಿಯಂತ್ರಿಸದಿದ್ದರೆ, ಪೋಷಣೆ ಅಭಿಯಾನದ ಗುರಿಗಳನ್ನು 2022ರ ಹೊತ್ತಿಗೆ ತಲುಪುವುದು ಸಾಧ್ಯವಾಗದು ಎಂದು ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಕೂಡಾ ಇಂಥದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಯೋಜನೆಗಳಿದ್ದಾಗ್ಯೂ ಮತ್ತು ಶಿಶುಗಳು, ಗರ್ಭಿಣಿಯರು ಹಾಗೂ ಹಾಲು ಕುಡಿಯುವ ಆರು ವರ್ಷದೊಳಗಿನ ಮಕ್ಕಳ ಪೌಷ್ಠಿಕ ಮಟ್ಟದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವಂತಿದ್ದರೂ, ಸಾಕಷ್ಟು ಪ್ರಮಾಣದ ಪೋಷಕಾಂಶಗಳ ಸರಬರಾಜಿಗೆ ಸಂಬಂಧಿಸಿದ ಸಮಸ್ಯೆಗಳು ಹಲವಾರು ರಾಜ್ಯಗಳನ್ನು ಈಗಲೂ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿವೆ. ಪೌಷ್ಠಿಕಾಂಶಗಳಿಗೆ ಸಂಬಂಧಿಸಿದ ಇತರೆಲ್ಲ ಯೋಜನೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಪೋಷಣೆ ಅಭಿಯಾನ ಉದ್ಘಾಟನೆಯಾಗಿದ್ದು 2018ರಲ್ಲಿ. ವಿವಿಧ ಸಚಿವಾಲಯಗಳೊಂದಿಗೆ ಸಮನ್ವಯವಾಗಿ ಕೆಲಸ ಮಾಡುವ ರೀತಿ ಅದನ್ನು ರೂಪಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಪೋಷಕಾಂಶ ಕೊರತೆಯನ್ನು 2022ರ ಹೊತ್ತಿಗೆ ಸಮಗ್ರವಾಗಿ ತೊಡೆದುಹಾಕುವುದು ಯೋಜನೆಯ ಮುಖ್ಯ ಧ್ಯೇಯ. ಈ ಕುರಿತು ಎಲ್ಲಾ ರಾಜ್ಯಗಳಿಗೆ ಗುರಿಯನ್ನು ನಿಗದಿಪಡಿಸಿರುವ ನೀತಿ ಆಯೋಗ, ಈ ಯೋಜನೆಯ ಲಾಭ ಬಳಸಿಕೊಂಡು ಬೆಳವಣಿಗೆಗೆ ಸಂಬಂಧಿಸಿದಂತೆ ಶೇಕಡಾ ಎರಡು, ಎತ್ತರದ ಕೊರತೆ ಶೇಕಡಾ ಎರಡು, ಶಿಶುಗಳು, ಮಹಿಳೆಯರು ಮತ್ತು ಹದಿವಯಸ್ಕರಲ್ಲಿಯ ರಕ್ತಹೀನತೆ ಶೇಕಡಾ ಮೂರು ಹಾಗೂ ಹುಟ್ಟುವಾಗಿನ ತೂಕದ ಕೊರತೆ ಶೇಕಡಾ ಎರಡರಷ್ಟು ಪ್ರಮಾಣ ಪ್ರತಿ ವರ್ಷ ಕಡಿಮೆಯಾಗಬೇಕೆಂದು ವಿಧಿಸಿದೆ.

ಇಂತಹ 27 ಮಹತ್ವಕಾಂಕ್ಷೆಯ ಜಿಲ್ಲೆಗಳಲ್ಲಿ ಯೋಜನೆ ಜಾರಿ ಕುರಿತು ನೀತಿ ಆಯೋಗ ಸಮೀಕ್ಷೆ ನಡೆಸಿದಾಗ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಅಂಗನವಾಡಿಗಳಲ್ಲಿ ಶೇಕಡಾ 78ರಷ್ಟು ಗರ್ಭಿಣಿಯರು ಹಾಗೂ ಹಾಲೂಡಿಸುವ ತಾಯಂದಿರು ದಾಖಲು ಮಾಡಿಕೊಂಡಿದ್ದರೂ ಕೇವಲ ಶೇಕಡಾ 46ರಷ್ಟು ಜನರಿಗೆ ಮಾತ್ರ ಪೌಷ್ಠಿಕ ಅಹಾರ ದೊರಕಿತ್ತು. ಪ್ರಧಾನಮಂತ್ರಿಗಳ ಮಾತೃ ವಂದನಾ ಯೋಜನೆಯಡಿ 25 ದಿನಗಳಿಗೆ ಆಹಾರ ವಸ್ತುಗಳನ್ನು ನೀಡಬೇಕಿದ್ದರೂ, ವಾಸ್ತವವಾಗಿ ನಿಗದಿತ ಗುರಿಯ ಅರ್ಧದಷ್ಟು ದಿನಗಳಿಗೆ ಮಾತ್ರ ಅವನ್ನು ಸರಬರಾಜು ಮಾಡಲಾಗುತ್ತಿದೆ. ದೇಶದ ಎಲ್ಲಾ ಅಂಗನವಾಡಿಗಳನ್ನು 2021ರ ಹೊತ್ತಿಗೆ ಡಿಜಿಟಲೀಕರಣಗೊಳಿಸುವ ಗುರಿ ಕೇಂದ್ರ ಸರಕಾರದ್ದಾಗಿದೆ.

ಸ್ಮಾರ್ಟ್‌ ಫೋನ್‌ಗಳ ಮೂಲಕ ಪೋಷಣೆ ಅಭಿಯಾನದ ವಾಸ್ತವ ಚಿತ್ರಣವನ್ನು ತಿಳಿದುಕೊಳ್ಳಲೂ ಅದು ಯೋಜನೆಯನ್ನು ಹೊಂದಿದೆ. ಅಂಕಿ ಅಂಶಗಳ ಪ್ರಕಾರ, ದೇಶದ 26 ರಾಜ್ಯಗಳ 285 ಜಿಲ್ಲೆಗಳ 4,84,901 ಅಂಗನವಾಡಿಗಳಲ್ಲಿ ಮಾತ್ರ ಫಲಾನುಭವಿಗಳ ಮಾಹಿತಿ ನಿರಂತರವಾಗಿ ದಾಖಲಾಗುತ್ತಿದೆ. ದೇಶಾದ್ಯಂತ ಇರುವ 14 ಲಕ್ಷ ಅಂಗನವಾಡಿಗಳ ಪೈಕಿ ಸ್ಮಾರ್ಟ್‌ ಫೋನ್‌ಗಳನ್ನು ಹೊಂದಿರುವ ಕೇಂದ್ರಗಳ ಪ್ರಮಾಣ ಕೇವಲ ಶೇಕಡಾ 27.6 ಹಾಗೂ ಎತ್ತರ ಅಳೆಯುವ ಯಂತ್ರಗಳು, ಬೆಳವಣಿಗೆ ದಾಖಲಿಸುವ ಹಾಗೂ ತೂಕ ಅಳೆಯುವ ಯಂತ್ರಗಳಿರುವುದು ಕೇವಲ ಶೇಕಡಾ 3.5ರಷ್ಟು ಕೇಂದ್ರಗಳಲ್ಲಿ ಮಾತ್ರ. ಅಂದಾಜು 6.28 ಲಕ್ಷ ಸ್ಮಾರ್ಟ್‌ ಫೋನ್‌ಗಳನ್ನು ಅಂಗನವಾಡಿ ಕೇಂದ್ರಗಳಿಗಾಗಿ ಸಂಗ್ರಹಿಸಲಾಗಿದ್ದು, ಇನ್ನೂ 4.95 ಲಕ್ಷ ಸ್ಮಾರ್ಟ್‌ ಫೋನ್‌ಗಳನ್ನು ಸೇರ್ಪಡೆ ಮಾಡಲಾಗುವುದು.

ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಂತೂ ಇದುವರೆಗೆ ಸ್ಮಾರ್ಟ್‌ ಫೋನ್‌ ಹೊಂದುವ ಗೊಡವೆಗೇ ಹೋಗಿಲ್ಲ. ತಾಯಂದಿರು ಮತ್ತು ಮಕ್ಕಳ ಆರೋಗ್ಯ ಮಾಹಿತಿ ಸೂಕ್ತವಾಗಿ ದಾಖಲಾಗದಿರುವುದು, ಸ್ಮಾರ್ಟ್‌ ಫೋನ್‌ಗಳನ್ನು ಸಂಪೂರ್ಣವಾಗಿ ಬಳಕೆ ಮಾಡದಿರುವುದು ಹಾಗೂ ದಾಖಲಾಗಿರುವ ಮಾಹಿತಿ ವಾಸ್ತವಾಂಶಗಳನ್ನು ಆಧರಿಸಿದೆಯೇ ಎಂಬುದನ್ನು ಪರೀಕ್ಷಿಸದಿರುವುದನ್ನು ನೀತಿ ಆಯೋಗ ಗುರುತಿಸಿದೆ. ಪೋಷಣೆ ಅಭಿಯಾನದಲ್ಲಿ 14 ಲಕ್ಷ ನಕಲಿ ಫಲಾನುಭವಿಗಳಿವೆ ಎಂಬುದನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಸಿಬ್ಬಂದಿಯ ಕೊರತೆ ಇರುವುದನ್ನೂ ನೀತಿ ಆಯೋಗ ಗುರುತಿಸಿದೆ.

ಯೋಜನಾ ನಿರ್ದೇಶಕರು ಹಾಗೂ ಮಹಿಳಾ ಮೇಲ್ವಿಚಾರಕ ಹುದ್ದೆಗಳಲ್ಲಿ ಶೇಕಡಾ 25ರಷ್ಟು ಕೊರತೆ ಇದೆ. ಮಾತೃ ವಂದನಾ ಯೋಜನೆಯಂತಹ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲೆ ಹಂತದಲ್ಲಿ ಇನ್ನೂ ಸಾಕಷ್ಟು ಹುದ್ದೆಗಳು ಖಾಲಿ ಇವೆ. ವಾಸ್ತವಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡೇ, ಈ ಎಲ್ಲಾ ದೋಷಗಳ ಸಹಿತ ಈ ಯೋಜನೆಯನ್ನು ಜಾರಿಗೊಳಿಸುವುದು ಹೇಗೆ? ಎಂದು ನಮಗೆ ನಾವೇ ಕೇಳಿಕೊಳ್ಳಬೇಕಿದೆ.

ಪ್ರಾಥಮಿಕವಾಗಿ, ಅನುದಾನ ಬಳಕೆಯಾಗದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದ್ದು, ಇದಕ್ಕೆ ಸಂಬಂಧಿಸಿದ ಖಚಿತ ವಾಸ್ತವಾಂಶಗಳು ಹಾಗೂ ವಾಸ್ತವ ಏನಿದೆ ಎಂಬುದು ಸರಕಾರಗಳಿಗೆ ಗೊತ್ತಿದೆ. ಈ ಕುರಿತಂತೆ ಜನರಲ್ಲಿ ಜಾಗೃತಿಯನ್ನೂ ಹೆಚ್ಚಿಸಬೇಕಿದೆ. ಇದನ್ನು ನಾವು ಪರಿಪೂರ್ಣವಾಗಿ ಮಾಡುವುದು ಸಾಧ್ಯವಾದರೆ, ಸೂಕ್ತ ವ್ಯಕ್ತಿಗಳಿಗೆ ಪೌಷ್ಠಿಕ ಆಹಾರವನ್ನು ಸರಬರಾಜು ಮಾಡುವ ಯೋಜನೆಯನ್ನು ನಾವು ರಕ್ಷಿಸಬಲ್ಲೆವು. ನಿಗದಿತ ಗುರಿಯನ್ನು ಸರಿಯಾದ ಸಮಯದಲ್ಲಿ ತಲುಪಬೇಕೆಂದರೆ, ಪೋಷಣೆ ಅಭಿಯಾನ ಜಾರಿಯ ಗತಿಯನ್ನು ನಾವು ಹಿಗ್ಗಿಸಲೇಬೇಕು. ಅಪೌಷ್ಠಿಕ ಭವಿಷ್ಯದ ತಲೆಮಾರಿನಿಂದ ನಾವು ಶಕ್ತ ದೇಶವನ್ನು ನಿರ್ಮಿಸುವುದು ಸಾಧ್ಯವಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಮನಗಾಣಬೇಕಿದೆ.

-ಶ್ರೀನಿವಾಸ ದರೆಗೋಣಿ

---------- Forwarded message ---------
From: Chamaraj Savadi <chamarajs@gmail.com>
Date: Thu, Nov 14, 2019 at 6:57 PM
Subject: Inability in utilizing the funds-Kannada
To: Ravi S <ravi.s@etvbharat.com>, <englishdesk@etvbharat.com>

ಅನುದಾನ ಬಳಕೆಯಲ್ಲಿಯ ಅಸಮರ್ಥತೆ ಮತ್ತು ಹಗುರವಾಗಿ ಪರಿಗಣಿಸುವ ನೀತಿಯಿಂದ ಪೌಷ್ಠಿಕ ಯೋಜನೆ ಜಾರಿಯ ಮೇಲೆ ಪರಿಣಾಮ

ಸರಕಾರದ ಯೋಜನೆಗಳ ಜಾರಿಯಲ್ಲಿಯ ಅತಿ ಸಾಮಾನ್ಯ ಸಮಸ್ಯೆ ಎಂದರೆ ಅನುದಾನದ ಕೊರತೆ. ಸಾಕಷ್ಟು ಅನುದಾನವಿದ್ದರೂ, ಜಾರಿಗೊಳಿಸಬೇಕಾದ ಅಧಿಕಾರಿಗಳ ಉಪೇಕ್ಷೆಯಿಂದ ಅನುದಾನ ಬಳಕೆಯಾಗುವುದಿಲ್ಲ. ಇತ್ತೀಚೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು “ಪೋಷಣೆ ಅಭಿಯಾನ” ಯೋಜನೆಯನ್ನು ಸಮರೋಪಾದಿಯಲ್ಲಿ ಕಾರ್ಯಗತಗೊಳಿಸುವಂತೆ ಹಾಗೂ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಬಳಸುವಂತೆ ಸಂಬಂಧಿಸಿದ ರಾಜ್ಯಗಳನ್ನು ಆಗ್ರಹಿಸಿದಾಗ ಈ ವಿಷಯ ವಿವಾದದ ಕೇಂದ್ರವಾಯಿತು. ಈ ಕಲ್ಯಾಣ ಯೋಜನೆಯ ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸುವಲ್ಲಿ ರಾಜ್ಯಗಳು ಹಿಂದೆ ಬಿದ್ದಿವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ದೂರಿರುವುದು ಪರಿಸ್ಥಿತಿಯ ತೀವ್ರತೆಯನ್ನು ಬಿಂಬಿಸಿದೆ. ಪೋಷಣೆ ಅಭಿಯಾನವನ್ನು ಕೇವಲ ಹೆಸರಿಗೆ ಮಾತ್ರ ಜಾರಿಗೊಳಿಸಲಾಗಿದೆ ಹಾಗೂ ಪಶ್ಚಿಮ ಬಂಗಾಳ, ಹರಿಯಾಣ, ಪಂಜಾಬ್‌, ಕೇರಳ, ಒಡಿಶಾ ಮತ್ತು ಗೋವಾ ರಾಜ್ಯಗಳು ಈ ವಿಷಯದಲ್ಲಿ ಸಾಕಷ್ಟು ಹಿಂದಿವೆ. ಕೇಂದ್ರ ಸರ್ಕಾರ ಈ ಯೋಜನೆಗೆ ಇದುವರೆಗೆ ರೂ. ೩,೭೬೯ ಕೋಟಿ ಅನುದಾನ ನೀಡಿದ್ದರೂ ಕೇವಲ ರೂ. ೧,೦೫೮ (ಶೇಕಡಾ ೩೩) ಮಾತ್ರ ಬಳಕೆಯಾಗಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಗೋವಾ ರಾಜ್ಯಗಳು ಯೋಜನೆಗೆ ಚಾಲನೆ ಸಹ ನೀಡಿಲ್ಲ. ಕರ್ನಾಟಕ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಅನುದಾನದ ಕೇವಲ ಶೇಕಡಾ ಒಂದು ಭಾಗವನ್ನು ಮಾತ್ರ ವೆಚ್ಚ ಮಾಡಲಾಗಿದೆ. ಇನ್ನು, ಹರಿಯಾಣ ಮತ್ತು ಕೇರಳ ರಾಜ್ಯಗಳ ಅನುದಾನದ ಬಳಕೆಯ ಪ್ರಮಾಣ ಶೇಕಡಾ ೧೦ಕ್ಕಿಂತ ಕಡಿಮೆ.

ಕೇಂದ್ರದ ಜೊತೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸರಕಾರ ಸದರಿ ಯೋಜನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಕೂಡಾ ಮುಂದಾಗಿಲ್ಲ. ಯೋಜನೆಯನ್ನು ಏಕೆ ಜಾರಿಗೊಳಿಸಿಲ್ಲ ಎಂಬುದಕ್ಕೆ ವಿವರಣೆ ನೀಡಿರುವ ರಾಜ್ಯದ ಸಚಿವ ಶಶಿ ಪಾಂಜಾ, ಪೋಷಣೆಗೆ ಸಂಬಂಧಿಸಿದ ತಮ್ಮ ರಾಜ್ಯದ ಯೋಜನೆ ಕೇಂದ್ರದ ಯೋಜನೆಗಿಂತ ಹೆಚ್ಚು ವಿಸ್ತೃತವಾಗಿದೆ ಎಂದಿದ್ದಾರೆ. ಬಹುತೇಕ ಇಂಥದೇ ಪರಿಸ್ಥಿತಿ ಬಿಜೆಪಿ ಆಡಳಿತದಲ್ಲಿರುವ ಗೋವಾ ರಾಜ್ಯದಲ್ಲಿಯೂ ಇದೆ. ಸೂಕ್ತ ಕ್ಷೇತ್ರ ಸಿಬ್ಬಂದಿಯ ಕೊರತೆಯಿಂದಾಗಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಗೋವಾ ಸರಕಾರದ ಸಂಬಂಧಿತ ಅಧಿಕಾರಿ ದೀಪಾಲಿ ನಾಯಕ್ ಹೇಳಿದ್ದಾರೆ. ಸ್ಮಾರ್ಟ್‌ ಫೋನ್‌ಗಳನ್ನು ಮತ್ತು ಸಾಧನಗಳನ್ನು ಹೊಂದುವಲ್ಲಿಯ ವಿಳಂಬದಿಂದಾಗಿ ಅನುದಾನ ಬಳಕೆ ಕನಿಷ್ಠ ಪ್ರಮಾಣದಲ್ಲಿದೆ ಎಂಬ ಕಾರಣಗಳನ್ನು ಅವರು ನೀಡಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಪರಿಸ್ಥಿತಿ ಕೊಂಚ ಉತ್ತಮವಾಗಿದೆ. ಸದ್ಯದ ಪ್ರಗತಿಯ ಗತಿ ನೋಡಿದರೆ ಯೋಜನೆ ಹಿಂದುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹಲವಾರು ಸಮೀಕ್ಷೆಗಳ ವರದಿಗಳು ಸ್ಪಷ್ಟಪಡಿಸಿವೆ. ಅಂತಾರಾಷ್ಟ್ರೀಯ ವೈದ್ಯಕೀಯ ಪತ್ರಿಕೆ ಲಾನ್ಸೆಟ್‌ ತನ್ನ ಸಮೀಕ್ಷೆಯಲ್ಲಿ ಈ ಕುರಿತು ಭಾರತಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಮಹಿಳೆಯರು ಮತ್ತು ಮಕ್ಕಳಲ್ಲಿ ಕಡಿಮೆ ತೂಕ, ಜನನ ಸಂದರ್ಭದಲ್ಲಿ ಕಡಿಮೆ ತೂಕ ಹಾಗೂ ರಕ್ತಹೀನತೆಯಂತಹ ದೋಷಗಳನ್ನು ನಿಯಂತ್ರಿಸದಿದ್ದರೆ, ಪೋಷಣೆ ಅಭಿಯಾನದ ಗುರಿಗಳನ್ನು ೨೦೨೨ರ ಹೊತ್ತಿಗೆ ತಲುಪುವುದು ಸಾಧ್ಯವಾಗದು ಎಂದು ಹೇಳಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಕೂಡಾ ಇಂಥದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ದೊಡ್ಡ ಸಂಖ್ಯೆಯ ಯೋಜನೆಗಳಿದ್ದಾಗ್ಯೂ ಮತ್ತು ಶಿಶುಗಳು, ಗರ್ಭಿಣಿಯರು ಹಾಗೂ ಹಾಲು ಕುಡಿಯುವ ಆರು ವರ್ಷದೊಳಗಿನ ಮಕ್ಕಳ ಪೌಷ್ಠಿಕ ಮಟ್ಟದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವಂತಿದ್ದರೂ, ಸಾಕಷ್ಟು ಪ್ರಮಾಣದ ಪೋಷಕಾಂಶಗಳ ಸರಬರಾಜಿಗೆ ಸಂಬಂಧಿಸಿದ ಸಮಸ್ಯೆಗಳು ಹಲವಾರು ರಾಜ್ಯಗಳನ್ನು ಈಗಲೂ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿವೆ. ಪೌಷ್ಠಿಕಾಂಶಗಳಿಗೆ ಸಂಬಂಧಿಸಿದ ಇತರೆಲ್ಲ ಯೋಜನೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಪೋಷಣೆ ಅಭಿಯಾನ ಉದ್ಘಾಟನೆಯಾಗಿದ್ದು ೨೦೧೮ರಲ್ಲಿ. ವಿವಿಧ ಸಚಿವಾಲಯಗಳೊಂದಿಗೆ ಸಮನ್ವಯವಾಗಿ ಕೆಲಸ ಮಾಡುವ ರೀತಿ ಅದನ್ನು ರೂಪಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಪೋಷಕಾಂಶ ಕೊರತೆಯನ್ನು ೨೦೨೨ರ ಹೊತ್ತಿಗೆ ಸಮಗ್ರವಾಗಿ ತೊಡೆದುಹಾಕುವುದು ಯೋಜನೆಯ ಮುಖ್ಯ ಧ್ಯೇಯ. ಈ ಕುರಿತು ಎಲ್ಲಾ ರಾಜ್ಯಗಳಿಗೆ ಗುರಿಯನ್ನು ನಿಗದಿಪಡಿಸಿರುವ ನೀತಿ ಆಯೋಗ, ಈ ಯೋಜನೆಯ ಲಾಭ ಬಳಸಿಕೊಂಡು ಬೆಳವಣಿಗೆಗೆ ಸಂಬಂಧಿಸಿದಂತೆ ಶೇಕಡಾ ಎರಡು, ಎತ್ತರದ ಕೊರತೆ ಶೇಕಡಾ ಎರಡು, ಶಿಶುಗಳು, ಮಹಿಳೆಯರು ಮತ್ತು ಹದಿವಯಸ್ಕರಲ್ಲಿಯ ರಕ್ತಹೀನತೆ ಶೇಕಡಾ ಮೂರು ಹಾಗೂ ಹುಟ್ಟುವಾಗಿನ ತೂಕದ ಕೊರತೆ ಶೇಕಡಾ ಎರಡರಷ್ಟು ಪ್ರಮಾಣ ಪ್ರತಿ ವರ್ಷ ಕಡಿಮೆಯಾಗಬೇಕೆಂದು ವಿಧಿಸಿದೆ. ಇಂತಹ ೨೭ ಮಹತ್ವಕಾಂಕ್ಷೆಯ ಜಿಲ್ಲೆಗಳಲ್ಲಿ ಯೋಜನೆ ಜಾರಿ ಕುರಿತು ನೀತಿ ಆಯೋಗ ಸಮೀಕ್ಷೆ ನಡೆಸಿದಾಗ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಅಂಗನವಾಡಿಗಳಲ್ಲಿ ಶೇಕಡಾ ೭೮ರಷ್ಟು ಗರ್ಭಿಣಿಯರು ಹಾಗೂ ಹಾಲೂಡಿಸುವ ತಾಯಂದಿರು ದಾಖಲು ಮಾಡಿಕೊಂಡಿದ್ದರೂ ಕೇವಲ ಶೇಕಡಾ ೪೬ರಷ್ಟು ಜನರಿಗೆ ಮಾತ್ರ ಪೌಷ್ಠಿಕ ಅಹಾರ ದೊರಕಿತ್ತು. ಪ್ರಧಾನಮಂತ್ರಿಗಳ ಮಾತೃ ವಂದನಾ ಯೋಜನೆಯಡಿ ೨೫ ದಿನಗಳಿಗೆ ಆಹಾರ ವಸ್ತುಗಳನ್ನು ನೀಡಬೇಕಿದ್ದರೂ, ವಾಸ್ತವವಾಗಿ ನಿಗದಿತ ಗುರಿಯ ಅರ್ಧದಷ್ಟು ದಿನಗಳಿಗೆ ಮಾತ್ರ ಅವನ್ನು ಸರಬರಾಜು ಮಾಡಲಾಗುತ್ತಿದೆ. ದೇಶದ ಎಲ್ಲಾ ಅಂಗನವಾಡಿಗಳನ್ನು ೨೦೨೧ರ ಹೊತ್ತಿಗೆ ಡಿಜಿಟಲೀಕರಣಗೊಳಿಸುವ ಗುರಿ ಕೇಂದ್ರ ಸರಕಾರದ್ದಾಗಿದೆ. ಸ್ಮಾರ್ಟ್‌ ಫೋನ್‌ಗಳ ಮೂಲಕ ಪೋಷಣೆ ಅಭಿಯಾನದ ವಾಸ್ತವ ಚಿತ್ರಣವನ್ನು ತಿಳಿದುಕೊಳ್ಳಲೂ ಅದು ಯೋಜನೆಯನ್ನು ಹೊಂದಿದೆ. ಅಂಕಿಅಂಶಗಳ ಪ್ರಕಾರ, ದೇಶದ ೨೬ ರಾಜ್ಯಗಳ ೨೮೫ ಜಿಲ್ಲೆಗಳ ೪,೮೪,೯೦೧ ಅಂಗನವಾಡಿಗಳಲ್ಲಿ ಮಾತ್ರ ಫಲಾನುಭವಿಗಳ ಮಾಹಿತಿ ನಿರಂತರವಾಗಿ ದಾಖಲಾಗುತ್ತಿದೆ. ದೇಶಾದ್ಯಂತ ಇರುವ ೧೪ ಲಕ್ಷ ಅಂಗನವಾಡಿಗಳ ಪೈಕಿ ಸ್ಮಾರ್ಟ್‌ ಫೋನ್‌ಗಳನ್ನು ಹೊಂದಿರುವ ಕೇಂದ್ರಗಳ ಪ್ರಮಾಣ ಕೇವಲ ಶೇಕಡಾ ೨೭.೬ ಹಾಗೂ ಎತ್ತರ ಅಳೆಯುವ ಯಂತ್ರಗಳು, ಬೆಳವಣಿಗೆ ದಾಖಲಿಸುವ ಹಾಗೂ ತೂಕ ಅಳೆಯುವ ಯಂತ್ರಗಳಿರುವುದು ಕೇವಲ ಶೇಕಡಾ ೩೫ರಷ್ಟು ಕೇಂದ್ರಗಳಲ್ಲಿ ಮಾತ್ರ. ಅಂದಾಜು ೬.೨೮ ಲಕ್ಷ ಸ್ಮಾರ್ಟ್‌ ಫೋನ್‌ಗಳನ್ನು ಅಂಗನವಾಡಿ ಕೇಂದ್ರಗಳಿಗಾಗಿ ಸಂಗ್ರಹಿಸಲಾಗಿದ್ದು, ಇನ್ನೂ ೪.೯೫ ಲಕ್ಷ ಸ್ಮಾರ್ಟ್‌ ಫೋನ್‌ಗಳನ್ನು ಸೇರ್ಪಡೆ ಮಾಡಲಾಗುವುದು. ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಂತೂ ಇದುವರೆಗೆ ಸ್ಮಾರ್ಟ್‌ ಫೋನ್‌ ಹೊಂದುವ ಗೊಡವೆಗೇ ಹೋಗಿಲ್ಲ. ತಾಯಂದಿರು ಮತ್ತು ಮಕ್ಕಳ ಆರೋಗ್ಯ ಮಾಹಿತಿ ಸೂಕ್ತವಾಗಿ ದಾಖಲಾಗದಿರುವುದು, ಸ್ಮಾರ್ಟ್‌ ಫೋನ್‌ಗಳನ್ನು ಸಂಪೂರ್ಣವಾಗಿ ಬಳಕೆ ಮಾಡದಿರುವುದು ಹಾಗೂ ದಾಖಲಾಗಿರುವ ಮಾಹಿತಿ ವಾಸ್ತವಾಂಶಗಳನ್ನು ಆಧರಿಸಿದೆಯೇ ಎಂಬುದನ್ನು ಪರೀಕ್ಷಿಸದಿರುವುದನ್ನು ನೀತಿ ಆಯೋಗ ಗುರುತಿಸಿದೆ. ಪೋಷಣೆ ಅಭಿಯಾನದಲ್ಲಿ ೧೪ ಲಕ್ಷ ನಕಲಿ ಫಲಾನುಭವಿಗಳಿವೆ ಎಂಬುದನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಸಿಬ್ಬಂದಿಯ ಕೊರತೆ ಇರುವುದನ್ನೂ ನೀತಿ ಆಯೋಗ ಗುರುತಿಸಿದೆ. ಯೋಜನಾ ನಿರ್ದೇಶಕರು ಹಾಗೂ ಮಹಿಳಾ ಮೇಲ್ವಿಚಾರಕ ಹುದ್ದೆಗಳಲ್ಲಿ ಶೇಕಡಾ ೨೫ರಷ್ಟು ಕೊರತೆ ಇದೆ. ಮಾತೃ ವಂದನಾ ಯೋಜನೆಯಂತಹ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲೆ ಹಂತದಲ್ಲಿ ಇನ್ನೂ ಸಾಕಷ್ಟು ಹುದ್ದೆಗಳು ಖಾಲಿ ಇವೆ. ವಾಸ್ತವಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡೇ, “ಈ ಎಲ್ಲಾ ದೋಷಗಳ ಸಹಿತ ಈ ಯೋಜನೆಯನ್ನು ಜಾರಿಗೊಳಿಸುವುದು ಹೇಗೆ?” ಎಂದು ನಮಗೆ ನಾವೇ ಕೇಳಿಕೊಳ್ಳಬೇಕಿದೆ. ಪ್ರಾಥಮಿಕವಾಗಿ, ಅನುದಾನ ಬಳಕೆಯಾಗದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದ್ದು, ಇದಕ್ಕೆ ಸಂಬಂಧಿಸಿದ ಖಚಿತ ವಾಸ್ತವಾಂಶಗಳು ಹಾಗೂ ವಾಸ್ತವ ಏನಿದೆ ಎಂಬುದು ಸರಕಾರಗಳಿಗೆ ಗೊತ್ತಿದೆ. ಈ ಕುರಿತಂತೆ ಜನರಲ್ಲಿ ಜಾಗೃತಿಯನ್ನೂ ಹೆಚ್ಚಿಸಬೇಕಿದೆ. “ಇದನ್ನು ನಾವು ಪರಿಪೂರ್ಣವಾಗಿ ಮಾಡುವುದು ಸಾಧ್ಯವಾದರೆ, ಸೂಕ್ತ ವ್ಯಕ್ತಿಗಳಿಗೆ ಪೌಷ್ಠಿಕ ಆಹಾರವನ್ನು ಸರಬರಾಜು ಮಾಡುವ ಯೋಜನೆಯನ್ನು ನಾವು ರಕ್ಷಿಸಬಲ್ಲೆವು. ನಿಗದಿತ ಗುರಿಯನ್ನು ಸರಿಯಾದ ಸಮಯದಲ್ಲಿ ತಲುಪಬೇಕೆಂದರೆ, ಪೋಷಣೆ ಅಭಿಯಾನ ಜಾರಿಯ ಗತಿಯನ್ನು ನಾವು ಹಿಗ್ಗಿಸಲೇಬೇಕು. ಅಪೌಷ್ಠಿಕ ಭವಿಷ್ಯದ ತಲೆಮಾರಿನಿಂದ ನಾವು ಶಕ್ತ ದೇಶವನ್ನು ನಿರ್ಮಿಸುವುದು ಸಾಧ್ಯವಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಮನಗಾಣಬೇಕಿದೆ”.

- ಶ್ರೀನಿವಾಸ ದರೆಗೋಣಿ

--------------

- Chamaraj Savadi

Freelance Journalist / Translator / Content Writer
ETV Bharat Logo

Copyright © 2025 Ushodaya Enterprises Pvt. Ltd., All Rights Reserved.