ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಡಳಿತಾರೂಢ ಪಕ್ಷವಾಗಿದ್ದುಕೊಂಡೂ ಲೋಕಸಭೆ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆಲ್ಲಲಾಗದ ಆಮ್ ಆದ್ಮಿ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ.
ಆಪ್ನ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲಲು ಎರಡು ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಪಕ್ಷದ ಕಾರ್ಯಕರ್ತರಿಗಾಗಿ ಈ ಬಗ್ಗೆ ಪತ್ರ ಬರೆದು, ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
-
AAP National Convenor @ArvindKejriwal writes letter to all volunteers. 👇👇 pic.twitter.com/KI0twBr9YX
— AAP (@AamAadmiParty) May 29, 2019 " class="align-text-top noRightClick twitterSection" data="
">AAP National Convenor @ArvindKejriwal writes letter to all volunteers. 👇👇 pic.twitter.com/KI0twBr9YX
— AAP (@AamAadmiParty) May 29, 2019AAP National Convenor @ArvindKejriwal writes letter to all volunteers. 👇👇 pic.twitter.com/KI0twBr9YX
— AAP (@AamAadmiParty) May 29, 2019
ಎರಡು ಪುಟಗಳ ಅವರ ಪತ್ರದಲ್ಲಿ ಉಲ್ಲೇಖಿಸಿರುವ ಎರಡು ಪ್ರಮುಖ ಕಾರಣಗಳೆಂದರೆ, ದೇಶದಲ್ಲಿ ಮೇಲುಗೈ ಸಾಧಿಸಿದ ಪರಿಸ್ಥಿತಿಯೇ ದೆಹಲಿ ಮೇಲೂ ಪ್ರಭಾವ ಬೀರಿತು. ಹಾಗೂ ಈ ಮಹಾಸಮರ ಮೋದಿ ಹಾಗೂ ರಾಹುಲ್ರ ನಡುವೆ ಎಂದು ಭಾವಿಸಿದ ಜನರು, ಅದರಂತೆಯೇ ಮತದಾನ ಮಾಡಿದರು ಎಂದು ವಿವರಿಸಿದ್ದಾರೆ.
ಇದೆಲ್ಲದಕ್ಕಿಂತ, ಈ ಚುನಾವಣೆಯಲ್ಲಿ ಜನತೆ ಏಕೆ ಆಪ್ಗೆ ಮತದಾನ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲಾಗಲಿಲ್ಲ ಎಂದೂ ಬರೆದುಕೊಂಡಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರನ್ನು ಎಚ್ಚರಿಸಿರುವ ಅವರು, ಖಂಡಿತ ಜನರು ಆಪ್ಗೆ ಅತ್ಯುತ್ಸಾಹದಿಂದ ಮತದಾನ ಮಾಡಲಿದ್ದಾರೆ. ಭ್ರಷ್ಟಾಚಾರ ಮುಕ್ತ ಆಂದೋಲನದಿಂದ ನಾವು ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ, ಕಾರ್ಯಕರ್ತರಿಗೆ ಧನ್ಯವಾದ ಸಹ ಹೇಳಿದ್ದಾರೆ.