ETV Bharat / bharat

ಮುರಿದ ಕುರ್ಚಿ ನೀಡಿದ್ದಾರೆಂದು ಕೋರ್ಟ್​​ನಲ್ಲೇ ರೇಗಾಡಿದ ಪ್ರಗ್ಯಾ! - undefined

ನ್ಯಾಷನಲ್​ ಇನ್​ವೆಸ್ಟಿಗೇಷನ್ ಕೋರ್ಟ್​ಗೆ ಹಾಜರಾಗಿದ್ದ ಪ್ರಗ್ಯಾರನ್ನು ಜಡ್ಜ್​ ವಿ.ಎಸ್​ ಪದಾಲ್ಕರ್​ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಪ್ರಗ್ಯಾ ಕೂರಲು ನೀಡಲಾಗಿದ್ದ ಕುರ್ಚಿ ಮುರಿದಿತ್ತು ಹಾಗೂ ಧೂಳುಮಯವಾಗಿತ್ತು ಎಂದು ಅವರು ಜಡ್ಜ್​ ಎದುರೇ ವಕೀಲರ ಮೇಲೆ ರೇಗಾಡಿದರು ಎನ್ನಲಾಗಿದೆ.

Pragya Thakur
author img

By

Published : Jun 8, 2019, 9:38 AM IST

ಮುಂಬೈ: 2008ರ ಮಾಲೇಗಾಂವ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್​ ವಿಚಾರಣೆ ಸಂಬಂಧ ನಿನ್ನೆ ಮುಂಬೈ ಕೋರ್ಟ್​ಗೆ ಹಾಜರಾದ ವೇಳೆ ಸರಿಯಾಗಿ ವರ್ತಿಸಲಿಲ್ಲ ಎಂದು ಹೇಳಲಾಗಿದೆ.

ನ್ಯಾಷನಲ್​ ಇನ್​ವೆಸ್ಟಿಗೇಷನ್ ಕೋರ್ಟ್​ಗೆ ಹಾಜರಾಗಿದ್ದ ಪ್ರಗ್ಯಾರನ್ನು ಜಡ್ಜ್​ ವಿ.ಎಸ್​ ಪದಾಲ್ಕರ್​ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಪ್ರಗ್ಯಾ ಕೂರಲು ನೀಡಲಾಗಿದ್ದ ಕುರ್ಚಿ ಮುರಿದಿತ್ತು ಹಾಗೂ ಧೂಳುಮಯವಾಗಿತ್ತು ಎಂದು ಅವರು ಜಡ್ಜ್​ ಎದುರೇ ವಕೀಲರ ಮೇಲೆ ರೇಗಾಡಿದರು ಎನ್ನಲಾಗಿದೆ.

ವಿಚಾರಣೆ ಆರಂಭವದಾಗ ಜಡ್ಜ್​, ಸ್ಫೋಟ ನಡೆದ ನಂತರ 116 ಸಾಕ್ಷಿಗಳನ್ನು ಪರೀಕ್ಷಿಸಲಾಗಿದೆ. ನಿಮಗೆ 2008 ಸೆಪ್ಟೆಂಬರ್​ 29ರಂದು ನಡೆದ ಸ್ಫೋಟದ ಬಗ್ಗೆ ಏನಾದರೂ ಗೊತ್ತೇ? ಎಂದರು. ಇದಕ್ಕೆ ಪ್ರಗ್ಯಾ ನನಗೇನೂ ಗೊತ್ತಿಲ್ಲ ಎಂದು ಹೇಳಿದರು.

ಇದೇ ವೇಳೆ ವಾದ ಮಂಡಿಸುತ್ತಿದ್ದ ವಕೀಲರ ವಿರುದ್ಧ ಪ್ರಗ್ಯಾ ಹರಿಹಾಯ್ದರು. ತಾನು ಕೂರಲು ಮುರಿದ, ಧೂಳಿರುವ ಕುರ್ಚಿ ನೀಡಿದ್ದೀರಿ. ಕೋರ್ಟ್​ಗೆ ಕರೆದಾಗ ಸರಿಯಾದ ಕುರ್ಚಿ ನೀಡೋಕಾಗಲ್ವಾ ಎಂದು ರೇಗಾಡಿದರು ಎನ್ನಲಾಗಿದೆ.

ಪ್ರಗ್ಯಾ ಪರ ವಕೀಲ ರಂಜಿತ್​ ಸಂಗ್ಲೆ ಹೇಳಿದಂತೆ, ಮಾನವೀಯತೆ ಆಧಾರದಲ್ಲಿ ಆರೋಪಿಗೆ ಕೂರಲು ಅವಕಾಶ ನೀಡಬೇಕು ಎಂಬುದರ ಬಗ್ಗೆ ಧ್ಬನಿ ಎತ್ತುತ್ತೇನೆ ಎಂದು ಪ್ರಗ್ಯಾ ಹೇಳಿದರು.

ನಾನು ಅವರಿಗೆ ಒಳ್ಳೆಯ ಸೌಲಭ್ಯ ನೀಡಿದೆವು. ಕುರ್ಚಿ ಸರಿಯಿಲ್ಲ ಎಂದರೆ ಜಡ್ಜ್​ ಗಮನಕ್ಕೆ ತರಬಹುದಿತ್ತು. ಆರೋಪಿಯನ್ನು ಕಟಕಟೆಯಲ್ಲಿ ನಿಲ್ಲಿಸುವ ಬದಲು ಕೂರಿಸಿದ್ದೇ ಜಡ್ಜ್​ ಔದಾರ್ಯ ಎಂದು ಎನ್​ಐಎ ವಕೀಲ ಅವಿನಾಶ್​ ರಸಲ್​ ಹೇಳಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಗ್ಯಾ, ಕೋರ್ಟ್​ ಕಟ್ಟಪ್ಪಣೆ ಮೇರೆಗೆ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.

Intro:Body:

Pragya Thakur

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.