ETV Bharat / bharat

ವಿಶೇಷ ಲೇಖನ: ಎಲ್ಲ ರೋಗಗಳ ರಾಜ 'ಕ್ಯಾನ್ಸರ್‌' ಕಾಯಿಲೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ - ಕ್ಯಾನ್ಸರ್‌' ಕಾಯಿಲೆ ಕುರಿತು ಇಲ್ಲಿದೆ ನೋಡಿ ಮಹತ್ವದ ಮಾಹಿತಿ

ಜನರನ್ನು ಬಾಧಿಸುತ್ತಿರುವ ಅತ್ಯಂತ ಸಂಕೀರ್ಣವಾದ ಕಾಯಿಲೆಗಳಲ್ಲಿ ಕ್ಯಾನ್ಸರ್‌ ಒಂದಾಗಿದೆ. ಹಾಗಾಗಿ ಇದನ್ನು ಎಲ್ಲ ಕಾಯಿಲೆಗಳ ಚಕ್ರವರ್ತಿ ಎಂದು ಕರೆದಿದ್ದಾರೆ. ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ಕ್ಯಾನ್ಸರ್​ನಿಂದ ಮೃತಪಡುತ್ತಿದ್ದಾರೆ. ಕ್ಯಾನ್ಸರ್‌ ಬಗೆಗಿನ ಸರಳ ಮಾಹಿತಿ ಇಲ್ಲಿದೆ ನೋಡಿ...

cancer
cancer
author img

By

Published : Jan 20, 2021, 1:58 PM IST

ಕ್ಯಾನ್ಸರ್‌ ಒಂದು ಸಂಕೀರ್ಣ ಕಾಯಿಲೆ. ಇದನ್ನು ಅರ್ಥ ಮಾಡಿಕೊಳ್ಳುವುದೇ ಒಂದು ಕ್ಲಿಷ್ಟಕರ ಸಂಗತಿಯಾಗಿದೆ. ಏಕೆಂದರೆ, ಇತರ ಕಾಯಿಲೆಗಳಿಗೆ ಹೋಲಿಸಿದರೆ ಇದರ ಲಕ್ಷಣಗಳು, ಹರಡುವಿಕೆ ತೀರಾ ವಿಶಿಷ್ಟವಾದದ್ದು. ಮೂಲದಲ್ಲಿ ಕ್ಯಾನ್ಸರ್‌ ಕೋಶಗಳು ಅತ್ಯಂತ ಕ್ರಿಯಾಶೀಲವಾಗಿರುತ್ತವೆ. ಇವು ರಕ್ತ ಬೀಜಾಸುರನ ಸೃಷ್ಟಿಯಂತೆ ಎಲ್ಲೆಲ್ಲೂ ತನ್ನ ಅಸ್ತಿತ್ವವನ್ನು ಹರಡುವ ಕೋಶಗಳಾಗಿವೆ.

ಸಿದ್ದಾರ್ಥ ಮುಖರ್ಜಿ ಅವರು ಬರೆದ 'ಎಲ್ಲ ರೋಗಗಳ ರಾಜ: ಕ್ಯಾನ್ಸರ್‌ನ ಒಂದು ಆತ್ಮಚರಿತ್ರೆ' ಎಂಬ ಪುಸ್ತಕದಲ್ಲಿ ಅರ್ಬುದ ರೋಗ (ಕ್ಯಾನ್ಸರ್‌) ಜನರನ್ನು ಬಾಧಿಸುತ್ತಿರುವ ಅತ್ಯಂತ ಸಂಕೀರ್ಣವಾದ ಕಾಯಿಲೆಗಳಲ್ಲಿ ಒಂದಾಗಿದೆ. ಹಾಗಾಗಿ ಇದನ್ನು ಎಲ್ಲ ಕಾಯಿಲೆಗಳ ಚಕ್ರವರ್ತಿ ಎಂದು ಕರೆದಿದ್ದಾರೆ. ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ಕ್ಯಾನ್ಸರ್​ನಿಂದ ಮೃತಪಡುತ್ತಿದ್ದಾರೆ. ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ‌ಕ್ಷೇತ್ರಗಳಲ್ಲಿನ ಅಗಾಧ ಪ್ರಗತಿಯ ಹೊರತಾಗಿಯೂ ಈ ಕಾಯಿಲೆಯಿಂದ ಎಲ್ಲರನ್ನು ರಕ್ಷಿಸಬಲ್ಲ ಚಿಕಿತ್ಸೆಯನ್ನು ಪತ್ತೆ ಹಚ್ಚಲು ನಮಗಿನ್ನೂ ಸಾಧ್ಯವಾಗಿಲ್ಲ.

ಕ್ಯಾನ್ಸರ್ ಎಂದರೇನು? ಎಂಬುದನ್ನು ಅರ್ಥಮಾಡಿಕೊಳ್ಳಲು ಮೊದಲಿಗೆ ನಮ್ಮ ದೇಹ ರಚನಾ ಕ್ರಮದ ಬಗ್ಗೆ ತಿಳಿದುಕೊಳ್ಳಬೇಕು. ಜೊತೆಗೆ ನಮ್ಮ ದೇಹದಲ್ಲಿರುವ ಜೀವಕೋಶಗಳೆಂದರೇನು? ಹಾಗೂ ಅವು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಜೀವಕೋಶಗಳೆಂದರೆ, ಒಂದು ಗೋಡೆಯಲ್ಲಿರುವ ಇಟ್ಟಿಗೆಯಂತೆ ನಮ್ಮ ದೇಹದ ಒಂದು ಸಣ್ಣ ಘಟಕವಾಗಿದೆ. ಈ ಜೀವಕೋಶಗಳು ನಮ್ಮ ದೇಹದಲ್ಲಿನ ನಾನಾ ಅಂಗಾಂಶಗಳು ಮತ್ತು ಅಂಗಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳು ನಮ್ಮ ದೇಹದ ಪ್ರತಿ ಅಂಗ - ಅಂಗಾಂಶಗಳೂ ವಿಭಿನ್ನ ರೀತಿಯಲ್ಲಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ನಮ್ಮ ದೇಹದ ಜೀವಧಾತುಗಳು (ಜೀನ್‌)ಗಳನ್ನು ವಿಭಿನ್ನವಾಗಿ ವ್ಯಕ್ತಪಡಿಸುವ ಮೂಲಕ ಈ ಜೀವಕೋಶಗಳು ಕಾರ್ಯನಿರ್ವಹಿಸುತ್ತವೆ. ದೇಹದ ಕೆಂಪು ರಕ್ತ ಕಣಗಳನ್ನು ಹೊರತುಪಡಿಸಿ ನಮ್ಮ ದೇಹದ ಪ್ರತಿಯೊಂದು ಜೀವ ಕೋಶವು ಡಿಎನ್‌ಎಯ ಕ್ರಿಯಾತ್ಮಕ ಭಾಗವಾದ 20000 - 25000 ಜೀನ್‌ಗಳನ್ನು ಹೊಂದಿರುತ್ತದೆ. ಪ್ರತಿ ಜೀನ್‌ನಲ್ಲಿ ಪ್ರೋಟೀನ್ ಅನ್ನು ಸಂಶ್ಲೇಷಿಸಲು ಕೋಡ್ ಅಥವಾ ಸೂಚನೆಗಳಿವೆ. ಮತ್ತು ಕಿಣ್ವಗಳು, ಗ್ರಾಹಕಗಳು, ಲಿಗಂಡ್ ಮುಂತಾದ ಪ್ರೋಟೀನ್‌ಗಳ ಸಂಕೀರ್ಣ ವ್ಯವಸ್ಥೆ. ಜೀವಕೋಶಕ್ಕೆ ಕ್ರಿಯಾತ್ಮಕ ಶಕ್ತಿ ನೀಡುತ್ತವೆ. ಆದರೆ ಈ ವ್ಯವಸ್ಥೆ ಬರೀ ಪ್ರೋಟೀನ್​ಗಳ ಕಾರ್ಯನಿರ್ವಹಣೆಯಲ್ಲಿ ಕೊನೆಗೊಳ್ಳುವುದಿಲ್ಲ.

ಈ ಪ್ರೋಟೀನ್‌ಗಳ ಕಾರ್ಯಗಳು ಹಲವಾರು ಚಯಾಪಚಯ ಪ್ರಕ್ರಿಯೆಗೆ ಮತ್ತು ಅವುಗಳ ಸಂಶ್ಲೇಷಣೆಗೆ ಕಾರಣವಾಗುತ್ತವೆ. ಪ್ರೋಟೀನ್‌ಗಳು ಮತ್ತು ಇತರ ಜೈವಿಕ ಅಣುಗಳ ಜೊತೆಗೆ ಈ ಚಯಾಪಚಯ ಕ್ರಿಯೆಗಳು ಜೀವಕೋಶದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ. ಇದಲ್ಲದೆ, ಸಾಮಾನ್ಯ ಕೋಶವು ನಿರ್ದಿಷ್ಟ ಸಂಖ್ಯೆಯ ಬಾರಿ ವಿಭಜಿಸಬಹುದು. ಕೋಶವು ಯಾವುದೇ ಒತ್ತಡದ ಪರಿಸರದಲ್ಲಿ ಪ್ರೇರೆಪಣೆ, ಸೂಚನೆ ಅಥವಾ ಸಿಗ್ನಲ್ ಅನ್ನು ಕಂಡುಕೊಂಡಾಗ, ಅದು ಸಂಕೀರ್ಣವಾದ ಪ್ರೋಟೀನ್ ಸಿಗ್ನಲಿಂಗ್ ಮತ್ತು ಮೆಟಾಬಾಲೈಟ್‌ಗಳ ಮೂಲಕ ಅದನ್ನು ಎದುರಿಸಲು ಪ್ರಯತ್ನಿಸುತ್ತದೆ. ಆದರೆ ಈ ಒತ್ತಡದ ಮಟ್ಟವು ಕೆಲವು ಮಿತಿಗಳನ್ನು ದಾಟಿದಾಗ ಅದು ಅಪೊಪ್ಟೋಸಿಸ್ (ಪ್ರೋಗ್ರಾಮ್ಡ್ ಡೆತ್) ಗೆ ಹೋಗಲು ಅಥವಾ ದೋಷವನ್ನು ಸರಿಪಡಿಸಲು ನಿರ್ಧರಿಸಬಹುದು.

ಈ ಸಂದರ್ಭದಲ್ಲಿ ಜೀವಕೋಶಗಳ ಹಲವು ಕೆಲಸಗಳಿಗೆ ಅಡೆತಡೆಗಳು ಉಂಟಾಗಬಹುದು. ಯಾವುದೇ ವ್ಯವಸ್ಥೆಯಂತೆ ಜೀವಕೋಶಗಳ ವ್ಯವಸ್ಥೆ ಕೂಡ ದೋಷದಿಂದ ಮುಕ್ತವಾಗಿಲ್ಲ. ಅದು ಸ್ವಲ್ಪ ಬದಲಾವಣೆಗಳಿಗೆ ಒಳಗಾಗುತ್ತಿರುತ್ತದೆ. ಜೊತೆಗೆ ಅದು ಅತಿ ಸೂಕ್ಷ್ಮವಾಗಿರುತ್ತದೆ. ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದಂತೆ ಈ ಜೀವಕೋಶಗಳ ಅಸಹಜ ಕ್ರಿಯೆಯನ್ನು ಗಣನೆಗೆ ತೆಗೆದುಕೊಂಡಾಗ, ಅದು ಜೀನ್‌ಗಳನ್ನು ಅವಲಂಬಿಸಿರುತ್ತದೆ. ಜೀವನ ವ್ಯವಸ್ಥೆಯ ಯಾವುದೇ ಒಂದು ಪ್ರಕ್ರಿಯೆ, ಸ್ಥಳೀಯ ಪರಿಸರ ಮತ್ತು ವಂಶವಾಹಿಗಳ ನಡುವಿನ ಪರಸ್ಪರ ಕ್ರಿಯೆಗೆ ಸಂಬಂಧಿಸಿರುತ್ತದೆ. ಆದ್ದರಿಂದ, ಜೀನ್‌ನಲ್ಲಿನ ಬದಲಾವಣೆ (ರೂಪಾಂತರ) ಹೊಗೆ, ಮದ್ಯ, ತಂಬಾಕು ಮತ್ತು ಕೀಟನಾಶಕಗಳಂತಹ ಪರಿಸರದಲ್ಲಿ ಇರುವ ಅಂಶಗಳಿಂದ ಉಂಟಾಗಬಹುದು ಅಥವಾ ವಿಭಜನೆಯ ಸಂದರ್ಭದಲ್ಲಿ ಅದು ತಪ್ಪಾಗಬಹುದು.

ಓರ್ವ ವ್ಯಕ್ತಿ ಆರೋಗ್ಯಕರವಾಗಿದ್ದ ಸಂದರ್ಭದಲ್ಲಿ ಒಂದು ಕೋಶವು ನಿರ್ದಿಷ್ಟ ಸಂಖ್ಯೆಯಲ್ಲಿ ವಿಭಜಿಸಬಹುದು ಎಂದು ನಮಗೆ ತಿಳಿದಿದೆ. ಆದರೆ ಒಂದು ಕ್ಯಾನ್ಸರ್ ಕೋಶವು ಅನಿರ್ದಿಷ್ಟ ಪ್ರಮಾಣದಲ್ಲಿ ವಿಭಜನೆಗೊಳ್ಳಬಹುದು. ಈ ವಿಭಜನೆ ಸಾಮಾನ್ಯವಾಗಿ ಜೀವಕೋಶಗಳ ಒಂದು ರಾಶಿಯನ್ನು ಉಂಟುಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಕ್ಯಾನ್ಸರ್‌ ಗಡ್ಡೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಕ್ಯಾನ್ಸರ್‌ ಗಡ್ಡೆಗಳೆಂದರೆ, ನಮ್ಮ ಸಾಮಾನ್ಯ ಜೀವಕೋಶಗಳ ಜೀನ್‌ಗಳಲ್ಲಿ ಎದುರಾಗುವ ದೋಷ ಎನ್ನುಬಹುದು.

ನಮಗೆ ತಿಳಿದಿರುವಂತೆ ಪ್ರತಿ ಕೋಶದಲ್ಲಿ 20000 - 25000 ವಂಶವಾಹಿಗಳಿರುತ್ತವೆ. ಆದರೆ ಕ್ಯಾನ್ಸರ್‌ ಗೆಡ್ಡೆಗಳಲ್ಲಿ ಇಂತಹ ವಂಶವಾಹಿನಿಗಳು ಬದಲಾಗಿರುವುದು ಕಂಡು ಬರುತ್ತದೆ. ನಾನಾ ಅಂಶಗಳ ಕಾರಣಕ್ಕಾಗಿ ವಿಭಿನ್ನ ರೀತಿಯ ಕ್ಯಾನ್ಸರ್ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಧೂಮಪಾನಿಗಳಲ್ಲಿ, ತಂಬಾಕು ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಬಹುದು. ಯಕೃತ್ತಿನ ಕ್ಯಾನ್ಸರ್ ಸಾಮಾನ್ಯವಾಗಿ ಮದ್ಯಸಾರ- ಆಲ್ಕೋಹಾಲ್ ನಿಂದ ಉಂಟಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯನ್ನು ಕ್ಯಾನ್ಸರ್‌ ಎಂದು ಸರಳವಾಗಿ ವಿಶ್ಲೇಷಿಸಬಹುದು.

ಇದು ಕ್ಯಾನ್ಸರ್‌ ಬಗೆಗಿನ ಸರಳ ಮಾಹಿತಿ. ಹಾಗಾದರೆ ಇದರಿಂದ ಸಂಪೂರ್ಣವಾಗಿ ಗುಣಮುಖ ಏಕೆ ಸಾಧ್ಯವಿಲ್ಲ? ಇದು ಸದಾ ಎಲ್ಲರ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಕ್ಯಾನ್ಸರ್​ಗೆ ಈಗ ಹಲವಾರು ಚಿಕಿತ್ಸೆಗಳು ಲಭ್ಯವಿವೆ. ಆದರೆ ಕಿಮೋಥೆರಪಿ ಸೇರಿದಂತೆ ಯಾವುದೇ ಒಂದು ನಿರ್ದಿಷ್ಟ ಚಿಕಿತ್ಸೆಯು 100 ಪ್ರತಿಶತ ಪರಿಣಾಮಕಾರಿಯಾಗಿಲ್ಲ. ಈ ಕ್ಯಾನ್ಸರ್‌ ಔಷಧಿ-ಚಿಕಿತ್ಸೆಗಳ ವಿಶೇಷತೆ ಎಂದರೆ, ಅವುಗಳು, ಪ್ರತಿ ರೋಗಿಗಳಲ್ಲಿ, ಒಬ್ಬರಿಂದ ಇನ್ನೊಬ್ಬರಿಗೆ ನಾನಾ ಪರಿಣಾಮವನ್ನು ಬೀರುತ್ತಿರುತ್ತವೆ. ಪ್ರತಿ ವ್ಯಕ್ತಿಯೂ ಜೈವಿಕವಾಗಿ ಮತ್ತೊಬ್ಬರಿಗಿಂತ ಭಿನ್ನ. ಹೀಗಾಗಿ ಕ್ಯಾನ್ಸರ್ ಒಂದೇ ರೀತಿಯ ರೋಗವಾದರೂ ಸಹ, ಒಬ್ಬ ರೋಗಿಗಿಂತ ಇನ್ನೊಬ್ಬರಿಗೆ ಔಷಧದ ಪರಿಣಾಮ ಬೀರುವುದು ವಿಭಿನ್ನವಾಗಿರುತ್ತದೆ.

ಎಲ್ಲರ ಮನಸ್ಸಿನಲ್ಲಿ ಸುಳಿದಾಡುವ ಇನ್ನೊಂದು ಪ್ರಶ್ನೆಯೆಂದರೆ, ಕ್ಯಾನ್ಸರ್‌ ನಮ್ಮ ದೇಹದಲ್ಲಿ ಯಾವ ಹಂತದಲ್ಲಿದೆ ಎನ್ನುವುದು? ಈ ನಿರ್ದಿಷ್ಟ ಹಂತಗಳಾವುವು? ಎಂಬುದು. ಕ್ಯಾನ್ಸರ್‌ನ ಹಂತಗಳನ್ನು 1, 2, 3 ಮತ್ತು 4 ನೇ ಹಂತಗಳಾಗಿ ವಿಂಗಡಿಸಲಾಗಿದೆ ಎಂದು ನಾವು ಕೇಳಲ್ಪಟ್ಟಿದ್ದೇವೆ. ಈ ಹಂತಗಳು ಯಾವುವು ಮತ್ತು ಮುಂದುವರಿದ ಅಥವಾ 3 ಮತ್ತು 4 ನೇ ಹಂತದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡಲು ಏಕೆ ಕಷ್ಟ ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಸಾಮಾನ್ಯವಾಗಿ ಒಂದು ಕ್ಯಾನ್ಸರ್‌ ಗಡ್ಡೆಯಲ್ಲಿನ ಜೀವಕೋಶಗಳು ಅನಿರ್ದಿಷ್ಟ ಪ್ರಮಾಣದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿವೆ ಎಂಬುದನ್ನು ನಾವು ಮೊದಲೇ ತಿಳಿದುಕೊಂಡಿದ್ದೇವೆ. ಈ ಗಡ್ಡೆಗಳ ಕೋಶಗಳು ನಮ್ಮ ದೇಹದ ಒಂದು ನಿರ್ದಿಷ್ಟ ಭಾಗದಲ್ಲಿ ಅಭಿವೃದ್ಧಿಹೊಂದಲಾರಂಭಿಸುತ್ತವೆ. ಅವುಗಳು ಆರಂಭದಲ್ಲಿ ದ್ರವ್ಯರಾಶಿ (ಮಾಸ್‌) ರೂಪದಲ್ಲಿರುತ್ತವೆ. ಅವುಗಳ ಸಾಂದ್ರತೆ ಹಾಗೂ ಪ್ರಮಾಣ ತೀರಾ ಚಿಕ್ಕದಾಗಿರುತ್ತದೆ ಹಾಗೂ ಅವುಗಳು ಸುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲದಿದ್ದರೆ ಅವುಗಳನ್ನು ಕ್ಯಾನ್ಸರ್‌ನ 1ನೇ ಹಂತ ಎಂದು ಕರೆಯಲಾಗುತ್ತದೆ. ಇದನ್ನು ತೆಗೆದುಹಾಕಿ, ಅಲ್ಲಿದ್ದ ಮಾಸ್‌ ಅನ್ನು ನಾಶಪಡಿಸಿದರೆ, ಕ್ಯಾನ್ಸರ್‌ ಹರಡುವುದನ್ನು ತಪ್ಪಿಸಲು ಸುಲಭವಾಗಿ ಸಾಧ್ಯವಾಗುತ್ತದೆ. ಆದರೆ ಉಳಿದ ಹಂತಗಳಲ್ಲಿ ಇದು ಬೇರೆನೆ ತೆರನಾಗಿರುತ್ತದೆ. ಈ ಹಂತಗಳಲ್ಲಿ ಈ ಮಾಸ್‌ ಒಂದು ನಿರ್ದಿಷ್ಟ ಆಕಾರದಲ್ಲಿ, ತನ್ನ ಹತ್ತಿರದ ಅಂಗಾಂಗಳ ಮೇಲೂ ಹರಡಿಕೊಂಡಿರುತ್ತವೆ. ಅಲ್ಲಿ ಅವುಗಳು ದೇಹದ ಅಂಗಾಂಶ-ಅಂಗಗಳ ಮೇಲೆ ದಾಳಿ ಮಾಡಿರುತ್ತವೆ. ಇದನ್ನು ಕ್ಯಾನ್ಸರ್‌ನ 2 ಮತ್ತು 3 ನೇ ಹಂತ ಎಂದು ಕರೆಯುತ್ತೇವೆ. ಇನ್ನು 4 ನೇ ಹಂತದಲ್ಲಿ ಕ್ಯಾನ್ಸರ್ ಕೋಶಗಳು ದೇಹದ ವಿವಿಧ ಅಂಗಗಳನ್ನು ತಮ್ಮ ವಸಾಹತುವನ್ನಾಗಿ ಮಾಡಲು ಆರಂಭಿಸಿರುತ್ತವೆ. ಉದಾಹರಣೆಗೆ ಸ್ತನ ಕ್ಯಾನ್ಸರ್‌ ಮೆದುಳಿನಲ್ಲಿ ಹರಡುವುದು.

ಈಗ ಲಭ್ಯವಿರುವ ವೈದ್ಯಕೀಯ ಚಿಕಿತ್ಸಾ ಕ್ರಮದ ಮೂಲಕ, ಮೊದಲನೆ ಹಂತದ ಕ್ಯಾನ್ಸರ್‌ ಹಾಗೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಸ್ಥಳೀಕರಿಸಲ್ಪಟ್ಟ ಮಾಸ್‌ಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಆದರೆ, ಈ ಕ್ಯಾನ್ಸರ್‌ ಗಡ್ಡೆಗಳು ದೇಹದ ವಿವಿಧ ಭಾಗಗಳಿಗೆ ಹರಡಿದ್ದರೆ ಅವುಗಳನ್ನು ತೆಗೆದುಹಾಕಲು ಕಷ್ಟ ಸಾಧ್ಯ. ಅತ್ಯಂತ ಮುಂದುವರಿದ ಹಂತದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಕಷ್ಟ ಸಾಧ್ಯ. ಈಗ ಕ್ಯಾನ್ಸರ್ ಚಿಕಿತ್ಸೆಯು ವಿಕಿರಣ ಚಿಕಿತ್ಸೆ, ಕಿಮೋಥೆರಪಿ, ಶಸ್ತ್ರಚಿಕಿತ್ಸೆ ಹೀಗೆ, ಹಲವು ವೈದ್ಯಕೀಯ ಉಪಕ್ರಮಗಳನ್ನು ಹೊಂದಿದೆ.

ತಜ್ಞರ ಪ್ರಕಾರ ಕ್ಯಾನ್ಸರ್ ಎಂಬುದು ಮನುಷ್ಯರಿಗೆ ಬರುವ ಕಾಯಿಲೆಗಳಲ್ಲಿ ಒಂದಾಗಿದ್ದರೂ ಇದು ಆರೋಗ್ಯ ವೃತ್ತಿಪರರನ್ನು, ಶಸ್ತ್ರಚಿಕಿತ್ಸಕರನ್ನು ಮತ್ತು ವೈದ್ಯರನ್ನು ಸಮಾನವಾಗಿ ಚಕಿತಗೊಳಿಸಿರುವುದು ಒಂದು ಸಂಗತಿ. ಇದೊಂದು ಕಾಯಿಲೆಯಾಗಿದ್ದರೂ ಇದಕ್ಕೆ ಓರ್ವ ವ್ಯಕ್ತಿಯಿಂದ ಚಿಕಿತ್ಸೆ ನೀಡಲು ಅಸಾಧ್ಯ. ಇದು ವ್ಯಕ್ತಿಗತ ಚಿಕಿತ್ಸೆಗಳ ಮಿತಿಯನ್ನು ಎತ್ತಿ ತೋರಿಸಿರುವ ಒಂದು ಕಾಯಿಲೆ. ಪರಿಣಾಮ, ವಿಶ್ವದೆಲ್ಲೆಡೆಯ ಆರೋಗ್ಯ ಚಿಕಿತ್ಸಾ ತಜ್ಞರು, ಪರಸ್ಪರ ಸಹಕಾರ-ಸಂಶೋಧನೆ ಮಾಡುವಂತೆ ಪ್ರೇರೇಪಿಸಿದೆ. ಒಬ್ಬ ಕ್ಯಾನ್ಸರ್‌ ರೋಗಿಗೆ ಒಬ್ಬನೇ ವೈದ್ಯ ಚಿಕಿತ್ಸೆ ನೀಡುವ ದಿನಗಳಿಂದು ಇಲ್ಲ. ಬದಲಿಗೆ ಆ ರೋಗಿಯ ಬಗ್ಗೆ ಅರ್ಬುದ ರೋಗತಜ್ಞ ಅದೆಷ್ಟೋ ದೂರದಲ್ಲಿರುವ ತಜ್ಞರೊಡನೆ ಸಮಾಲೋಚಿಸಿ, ಬಹು-ಶಿಸ್ತಿನ ರೋಗ ಚಿಕಿತ್ಸಾ ಸಮಿತಿಯ ಸಲಹೆಯೊಂದಿಗೆ, ಚಿಕಿತ್ಸೆ ನೀಡುತ್ತಾನೆ. ಸಾಮಾನ್ಯ ವೈದ್ಯ, ಶಸ್ತ್ರಚಿಕಿತ್ಸಕ, ಕಿಮೋ-ಥೆರಪಿಸ್ಟ್, ರೇಡಿಯೊಥೆರಪಿಸ್ಟ್ ಹೀಗೆ ಎಲ್ಲರೂ ಜೊತೆಗೆ ಸೇರಿ ಅತ್ಯಾಧುನಿಕ ಚಿಕಿತ್ಸಾ ಕೇಂದ್ರಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ. ಕ್ಯಾನ್ಸರ್‌ ವಿರುದ್ಧ ಹೋರಾಡಬಲ್ಲ ದೇಹದೊಳಗಿರುವ ನೈಸರ್ಗಿಕ ಅಂಶಗಳನ್ನು ರೋಗನಿರೋಧಕ ತಜ್ಞರು ಪತ್ತೆ ಹಚ್ಚಿ ರೋಗಿಗಳಿಗೆ ನೆರವು ನೀಡುತ್ತಾರೆ.

ಕೋವಿಡ್‌ 19ರ ಕಾರಣಕ್ಕಾಗಿ, ಕ್ಯಾನ್ಸರ್‌ ಸಂಶೋಧನಾ ನಿಧಿಗಳಿಗೆ ಹಣಕಾಸಿನ ನೆರವು ಕಡಿಮೆಯಾಗಿದೆ. ಆದರೆ ತಜ್ಞರ ನಡುವಣ ಹೆಚ್ಚುತ್ತಿರುವ ಸಹಕಾರದ ಕಾರಣದಿಂದ ಸಂಶೋಧನೆಗಳು ದೊಡ್ಡ ಪ್ರಮಾಣದಲ್ಲಿ ಮುಂದುವರಿದಿವೆ. ವಿಶ್ವದ ಪ್ರಮುಖ ಕ್ಯಾನ್ಸರ್‌ ತಜ್ಞರು ಈಗ ಜೊತೆ ಜೊತೆಯಾಗಿ ಸಂಶೋಧನೆ ಕೈಗೊಳ್ಳುವ ಮೂಲಕ, ಈ ರೋಗದ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಕ್ಯಾನ್ಸರ್‌ ರೋಗ ಹರಡುವಿಕೆ, ಲಕ್ಷಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ.

ಈ ಹಿನ್ನೆಲೆಯಲ್ಲಿ ರೋಗಿಯಿಂದ ರೋಗಿಗೆ ಪ್ರತ್ಯೇಕವಾದ, ವೈಯಕ್ತಿಕ ಚಿಕಿತ್ಸಾ ಕ್ರಮ ಹಾಗೂ ಔಷಧಗಳು, ರೋಗದ ವಿರುದ್ಧದ ಹೋರಾಟದಲ್ಲಿ ಬಹುದೊಡ್ಡ ಸಾಧನೆಗೆ ಕಾರಣವಾಗುತ್ತಿದೆ. ಇದನ್ನು ಈಗ ಎಲ್ಲೆಡೆ ಪ್ರಯತ್ನಿಸಲಾಗುತ್ತಿದೆ. ವ್ಯಕ್ತಿಯ ಜೀನ್‌ ನಕಾಶೆ ತಯಾರಿ ಮೂಲಕ, ಅವರು ಯಾವ ಕಾರಣಕ್ಕಾಗಿ ಕ್ಯಾನ್ಸರ್‌ಗೆ ತುತ್ತಾದರು ಹಾಗೂ ಅದನ್ನು ಹೇಗೆ ಗುಣಪಡಿಸಬಹುದು ಎಂಬುದನ್ನು ಪತ್ತೆ ಹಚ್ಚುವಲ್ಲಿ ನಮ್ಮ ತಜ್ಞರು ಯಶಸ್ವಿಯಾಗುತ್ತಿದ್ದಾರೆ. ಇದು ಸಾಧ್ಯವಾಗುತ್ತಿರುವುದರಿಂದ ಕ್ಯಾನ್ಸರ್‌ ರೋಗದ ಚಿಕಿತ್ಸೆ ಈಗ ಹಿಂದೆಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ಈ ನಡುವೆ ಕ್ಯಾನ್ಸರ್‌ ರೋಗದ ಹೋರಾಟದಲ್ಲಿ ನವ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸುತ್ತಿವೆ. ಪ್ರೋಟಾನ್ ಲೇಸರ್ ಚಿಕಿತ್ಸೆಯಂತಹ ತಂತ್ರಜ್ಞಾನಗಳು ಕ್ಯಾನ್ಸರ್ ಗೆಡೆಯನ್ನು ನಿಖರವಾಗಿ ನಾಶಮಾಡುವಲ್ಲಿ ಯಶಸ್ವಿಯಾಗಿವೆ. ಇವು ಹತ್ತಿರದ ಆರೋಗ್ಯಕಾರಿ ಕೋಶಗಳ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಉಪ-ಮಿಲಿಮೀಟರ್ ನಿಖರತೆಯೊಂದಿಗೆ ಕ್ಯಾನ್ಸರ್‌ ಗೆಡ್ಡೆಗಳ ಕೋಶಗಳನ್ನು ಗುರಿಯಾಗಿಸಿ ಕೆಲಸ ನಿರ್ವಹಿಸುತ್ತವೆ. ಇದರರ್ಥ ಇಂತಹ ವಿಕಿರಣ ಚಿಕಿತ್ಸೆಯು ಮೆದುಳು, ಕಣ್ಣುಗಳು ಮತ್ತು ಪುರುಷ ಜನನೇಂದ್ರಿಯ ಅಂಗ (ಪ್ರಾಸ್ಟೇಟ್‌ ಕ್ಯಾನ್ಸರ್‌) ಚಿಕಿತ್ಸೆಗಳಲ್ಲಿ ಬಹುಮುಖ್ಯ ಸುಧಾರಣೆ ತಂದುಕೊಡುವ ಸಾಧ್ಯತೆ ಇದೆ. ಶಸ್ತ್ರಚಿಕಿತ್ಸೆಯನ್ನು ಇದು ಇಲ್ಲವಾಗಿಸುವುದರಿಂದ ಚಿಕಿತ್ಸೆಯ ಬಳಿಕದ ಆರೋಗ್ಯ ಹಾಗೂ ಜೀವನ ಮಟ್ಟ ಸಾಮಾನ್ಯವಾಗಿರುವಂತೆ ಇದು ಮಾಡಲಿದೆ.

ಇದು ಕ್ಯಾನ್ಸರ್‌ ವಿರುದ್ಧದ ಹೋರಾಟದ ಮುಖ್ಯಭಾಗ. ಆದರೆ ಮನುಷ್ಯನ ಕ್ಯಾನ್ಸರ್‌ ವಿರುದ್ಧದ ಹೋರಾಟಕ್ಕೆ ಇನ್ನೊಂದು ಅಧ್ಯಾಯವಿದೆ. ಏಕೆಂದರೆ, ಕ್ಯಾನ್ಸರ್‌ ರೋಗಿಗಳ ಎದುರಿಸುವ ಒತ್ತಡಗಳು ಒಂದೆಡರಲ್ಲ. ಯಾವುದೇ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ, ಚಿಕಿತ್ಸೆ ಪಡೆದು ಬದುಕುಳಿದರೆ ಅಂತವರ ಹೋರಾಟವು ದೈಹಿಕವಾಗಿ ಎಷ್ಟು ನೋವಿನಿಂದ ಕೂಡಿರುತ್ತದೆಯೋ ಅಷ್ಟೇ ಮಾನಸಿಕ ತುಮುಲಗಳನ್ನು ಅವರು ಎದುರಿಸಿರುತ್ತಾರೆ. ಕ್ಯಾನ್ಸರ್‌ ರೋಗದಿಂದ ಸಾವಿನ ಭಯ, ಚಿಕಿತ್ಸೆಯ ದುಷ್ಪರಿಣಾಮಗಳ ಬಗ್ಗೆ ಆತಂಕ, ರೋಗದ ಕಳಂಕ, ಚಿಕಿತ್ಸೆಯ ವೆಚ್ಚ, ಮತ್ತು ಶಾಶ್ವತವಾಗಿ ಕುಟುಂಬಕ್ಕೆ ಹೊರೆಯಾಗುವ ಆಲೋಚನೆ ಕ್ಯಾನ್ಸರ್ ರೋಗಿಯ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುತ್ತದೆ. ಇದು ನಮ್ಮಲ್ಲಿ ಕ್ಯಾನ್ಸರ್‌ ರೋಗದ ವಿರುದ್ಧ ದೊಡ್ಡ ಪ್ರಮಾಣದ ಭೀತಿ ಉಂಟಾಗಲು ಕಾರಣ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ತಜ್ಞರು ಪತ್ತೆ ಅನುಸರಿಬೇಕಿದೆ.

ಈಗಿನ ಕ್ಯಾನ್ಸರ್ ಚಿಕಿತ್ಸೆಯ ಪ್ರಯಾಸಕರ ಪ್ರಯಾಣವನ್ನು ಸರಿಪಡಿಸಬೇಕೇಂದರೆ, ನಾನಾ ಪರಿಹಾರೋಪಾಯಗಳನ್ನು ಕಂಡುಹಿಡಿಯಬೇಕು. ಅವುಗಳೆಂದರೆ, ಚಿಕಿತ್ಸೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರುವುದಾಗಿದೆ. ಮೌಲ್ಯವರ್ಧಿತ ಆರೋಗ್ಯ ಆರೈಕೆ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದು ಚಿಕಿತ್ಸೆ ಹಾಗೂ ಅದರ ಫಲಿತಾಂಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು. ಆರೋಗ್ಯ ಸಲಹೆಗಾರ, ಆರೈಕೆದಾರ, ತರಬೇತುದಾರ, ವೈದ್ಯಕೀಯ ಸಲಹೆಗಾರ, ಪೌಷ್ಟಿಕತಜ್ಞರಿಂದ ಹಿಡಿದು ಓರ್ವ ರೋಗಿಗೆ ಸಮಗ್ರ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕಿದೆ. ಇದು ಕ್ಯಾನ್ಸರ್‌ ಬಗ್ಗೆ ರೋಗಿಗಳ ಅರಿವನ್ನು ಹೆಚ್ಚಿಸುವುದರ ಜೊತೆಗೆ, ಅವರಿಗೆ, ಈ ರೋಗದ ವಿರುದ್ಧದ ಹೋರಾಟದಲ್ಲಿ ಅಗತ್ಯವಾದ ಮಾನಸಿಕ ಸೈರ್ಯವನ್ನು ಒದಗಿಸುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅನೋವಾ ಹೆಲ್ತ್ ಕೇರ್ ನಿಂದ ಈ ಅಂಶ ಸಾಬೀತಾಗಿದೆ. ಇದು ವಿಮಾ ಸಂಸ್ಥೆಗಳಿಗೆ ಹಾಗೂ ತಮ್ಮ ಜೇಬಿನಿಂದಲೇ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ವೆಚ್ಚ ಮಾಡುವವರಿಗೆ ಕೂಡ ಲಾಭದಾಯಕ. ಏಕೆಂದರೆ, ಚಿಕಿತ್ಸೆಯ ಮುಂದಿನ ಹಂತಗಳಲ್ಲಿ ಇದು ಖರ್ಚನ್ನು ಕಡಿಮೆಗೊಳಿಸುತ್ತದೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯಬೇಕಿವೆ.

ಲೇಖಕರು:

1) ಪಿಯೂಷ್ ಪ್ರಸಾದ್, ರಿಸರ್ಚ್‌ ಫೆಲೋ (ಸಂಶೋಧನಾ ವಿದ್ಯಾರ್ಥಿ)

ಸರ್ ಗಂಗಾ ರಾಮ್ ಆಸ್ಪತ್ರೆ

2) ಡಾ.ನದೀಮ್ ಅಹ್ಮದ್, ಆರೋಗ್ಯ ಸಲಹೆಗಾರ ಮತ್ತು ತುರ್ತು ವೈದ್ಯಕೀಯ ಚಿಕಿತ್ಸಾ ತಜ್ಞ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.