ETV Bharat / bharat

ಭಾರತೀಯರು ನಮ್ಮ ವಸ್ತುಗಳನ್ನು ಬಳಸುವುದು ಅನಿವಾರ್ಯ ಎನ್ನುತ್ತಿದೆ ಚೀನಾ!

author img

By

Published : Jul 1, 2020, 10:00 PM IST

ಚೀನಾ ವಸ್ತುಗಳ ಬಹಿಷ್ಕಾರ ಕರೆ ಅರ್ಥವಿಲ್ಲದ್ದು ಎಂದು ಕೆಲ ಪ್ರಮುಖ ಭಾರತೀಯ ಕೈಗಾರಿಕೋದ್ಯಮಿಗಳೇ ಹೇಳುತ್ತಿದ್ದಾರೆ ಎಂದು ಗ್ಲೋಬಲ್​ ಟೈಮ್ಸ್​ ತಿಳಿಸಿದೆ. ಆದರೆ ಹಾಗೆ ಹೇಳಿದ್ದು ಯಾರು ಎಂಬುದನ್ನು ಮಾತ್ರ ಅದು ಬಹಿರಂಗ ಪಡಿಸಿಲ್ಲ.

'BOYCOTT CHINA
'BOYCOTT CHINA

ಜೂನ್ 15 ರಂದು ಭಾರತ ಹಾಗೂ ಚೀನಾ ನಡುವಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಭಾರತದಲ್ಲಿ ತೀವ್ರ ರಾಷ್ಟ್ರೀಯವಾದ ತಲೆ ಎತ್ತಿದ್ದು, ಇದರಿಂದ ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಏನೇ ಆದರೂ ಸದ್ಯದ ಪರಿಸ್ಥಿತಿಯಲ್ಲಿ ಚೀನಾ ವಸ್ತುಗಳು, ಚೀನಾ ಬಂಡವಾಳ ಭಾರತಕ್ಕೆ ಅನಿವಾರ್ಯ ಎಂದು ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಗ್ಲೋಬಲ್ ಟೈಮ್ಸ್​ ವರದಿ ಮಾಡಿದೆ.

ಚೀನಾ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತದ ಆರ್ಥಿಕತೆಯ ನಾಲ್ಕು ಮುಖ್ಯ ಕ್ಷೇತ್ರಗಳನ್ನು ಗ್ಲೋಬಲ್ ಟೈಮ್ಸ್​ ಗುರುತಿಸಿದ್ದು, ಇವುಗಳಲ್ಲಿನ ಚೀನಾ ಪಾತ್ರವನ್ನು ಭಾರತ ನಿರಾಕರಿಸುವುದು ಸಾಧ್ಯವೇ ಇಲ್ಲ ಎಂದು ಗ್ಲೋಬಲ್ ಟೈಮ್ಸ್​ ಹೇಳಿದೆ. ಗ್ಲೋಬಲ್ ಟೈಮ್ಸ್​ ವರದಿಯಲ್ಲಿ ಹೇಳಲಾದ ನಾಲ್ಕು ಕ್ಷೇತ್ರಗಳ ಮಾಹಿತಿ ಇಲ್ಲಿದೆ (ಗ್ಲೋಬಲ್ ಟೈಮ್ಸ್​ ನಿಯತಕಾಲಿಕೆಯಲ್ಲಿ ವರದಿಯಾದ ಮಾಹಿತಿಗಳನ್ನೇ ಇಲ್ಲಿ ಉಲ್ಲೇಖಿಸಲಾಗಿದೆ):

ಕೆಳ ಮಧ್ಯಮ ವರ್ಗದವರಿಗೂ ತಲುಪಿದ ಚೀನಾ ವಸ್ತುಗಳು

ಟೆಲಿಕಾಂ, ಎಲೆಕ್ಟ್ರಾನಿಕ್ಸ್​ ಹಾಗೂ ಆಟಿಕೆಗಳು ಸೇರಿದಂತೆ ಹಲವಾರು ಚೀನಾ ಉತ್ಪನ್ನಗಳು ಭಾರತದ ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಅನಿವಾರ್ಯವಾಗಿವೆ. ಇಂಥ ಸಮಯದಲ್ಲಿ ಚೀನಾ ವಸ್ತುಗಳಿಗೆ ಪರ್ಯಾಯ ಹುಡುಕುವುದು ಭಾರತೀಯ ಮಾರುಕಟ್ಟೆಗೇ ಸವಾಲಾಗಲಿದೆ. ಸಾಮಾನ್ಯ ಭಾರತೀಯನೊಬ್ಬ ಚೀನಾ ವಸ್ತುಗಳ ಬಳಕೆಯನ್ನು ನಿಲ್ಲಿಸಲಾರ. ಅದರಲ್ಲೂ ದೀರ್ಘಾವಧಿಯವರೆಗೆ ಚೀನಾ ವಸ್ತುಗಳನ್ನು ಆತ ಬಳಸದೇ ಇರಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯ ಭಾರತೀಯರು ಚೀನಾ ನಿರ್ಮಿತ ಶಿಯೋಮಿ ಫೋನ್ ಕೊಳ್ಳದಿರುವಂತೆ ವಾತಾವರಣ ನಿರ್ಮಾಣ ಮಾಡಿದಲ್ಲಿ, ಅವರು ಅದೇ ಫೀಚರ್​ಗಳಿರುವ ದುಬಾರಿ ಐಫೋನ್ ಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅಂಥವರು ಫೋನ್ ಕೊಳ್ಳುವುದನ್ನೇ ಮುಂದೆ ಹಾಕಬೇಕಾಗುತ್ತದೆ. ಮೊದಲೇ ಕೋವಿಡ್​-19 ಬಿಕ್ಕಟ್ಟಿನಿಂದ ಬಳಲುತ್ತಿರುವ ಭಾರತದ ಅರ್ಥವ್ಯವಸ್ಥೆಗೆ ಇದರಿಂದ ಭಾರಿ ಹೊಡೆತ ಬೀಳಲಿದೆ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ 2024 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯಾಗುವ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ ಎಂದು ಗ್ಲೋಬಲ್ ಟೈಮ್ಸ್​ ತನ್ನ ವರದಿಯಲ್ಲಿ ಹೇಳಿದೆ.

ಭಾರತದ ಹಲವಾರು ಕ್ಷೇತ್ರಗಳಿಗೆ ಚೀನಾ ಉಪಕರಣಗಳು ಅನಿವಾರ್ಯ

ಚೀನಾ ವಸ್ತುಗಳ ಬಹಿಷ್ಕಾರ ಕರೆ ಅರ್ಥವಿಲ್ಲದ್ದು ಎಂದು ಕೆಲ ಪ್ರಮುಖ ಭಾರತೀಯ ಕೈಗಾರಿಕೋದ್ಯಮಿಗಳೇ ಹೇಳುತ್ತಿದ್ದಾರೆ ಎಂದು ಗ್ಲೋಬಲ್​ ಟೈಮ್ಸ್​ ತಿಳಿಸಿದೆ. ಆದರೆ ಹಾಗೆ ಹೇಳಿದ್ದು ಯಾರು ಎಂಬುದನ್ನು ಮಾತ್ರ ಅದು ಬಹಿರಂಗ ಪಡಿಸಿಲ್ಲ.

ಭಾರತದ ಸ್ಮಾರ್ಟ್​ ಫೋನ್​, ಸೋಲಾರ್​ ಉಪಕರಣ ಹಾಗೂ ಆಟೊಮೊಬೈಲ್​ ಉದ್ಯಮಗಳು ಚೀನಾ ಉಪಕರಣಗಳನ್ನೇ ಅವಲಂಬಿಸಿವೆ. ಸ್ಕ್ರೀನ್, ಮದರ್ ಬೋರ್ಡ್​, ಕ್ಯಾಮೆರಾ ಮುಂತಾದ ಪ್ರಮುಖ ಉಪಕರಣಗಳು ಭಾರತದಲ್ಲಿ ತಯಾರಾಗುವುದೇ ಇಲ್ಲ. ಇನ್ನು ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪಾಲು ಶೇ 72 ರಷ್ಟಿದೆ ಎಂದು ಸ್ಥಳೀಯ ಮಾಧ್ಯಮ ಎಕನಾಮಿಕ್ಸ್​ ಟೈಮ್ಸ್​ ವರದಿ ಮಾಡಿದೆ ಎಂದು ಗ್ಲೋಬಲ್ ಟೈಮ್ಸ್​ ಹೇಳಿಕೊಂಡಿದೆ.

ಭಾರತದ ಔಷಧ ತಯಾರಿಕಾ ಕ್ಷೇತ್ರಕ್ಕೆ ಪೆಟ್ಟು

ಔಷಧ ತಯಾರಿಕೆಗೆ ಅಗತ್ಯವಾಗಿ ಬೇಕಾದ ಎಪಿಐ ವಸ್ತುಗಳಿಗೆ ಭಾರತ ಚೀನಾವನ್ನೇ ಅವಲಂಬಿಸಿದೆ. ಚೀನಾದ ಎಪಿಐ ವಸ್ತುಗಳನ್ನು ನಿಷೇಧಿಸಿದಲ್ಲಿ ಭಾರತಕ್ಕೆ ಬೇರೆ ಪರ್ಯಾಯವೇ ಇಲ್ಲ. ಎಪಿಐ ರಾಸಾಯನಿಕಗಳನ್ನು ಸ್ಥಳೀಯವಾಗಿ ತಯಾರಿಸಲು ಭಾರತ ಸರ್ಕಾರ ಕೆಲ ಉತ್ತೇಜನಾ ಕ್ರಮಗಳನ್ನು ಘೋಷಿಸಿದೆ. ಆದರೆ ಇದಕ್ಕೆ ಬೇಕಾದ ಅಗತ್ಯ ತಾಂತ್ರಿಕತೆ, ನೀರು ಹಾಗೂ ವಿದ್ಯುಚ್ಛಕ್ತಿ ಲಭ್ಯತೆ ಭಾರತದಲ್ಲಿ ಇಲ್ಲ ಎಂದು ಗ್ಲೋಬಲ್ ಟೈಮ್ಸ್​ ಅಭಿಪ್ರಾಯಪಟ್ಟಿದೆ.

ಭಾರತೀಯ ಸ್ಟಾರ್ಟಪ್​​ಗಳ ಮೇಲೆ ಪ್ರತಿಕೂಲ ಪರಿಣಾಮ

ಬಹುತೇಕ ಭಾರತೀಯ ಸ್ಟಾರ್ಟಪ್ ಕಂಪನಿಗಳು ಚೀನಾ ಬಂಡವಾಳ ಹಾಗೂ ತಾಂತ್ರಿಕತೆಯನ್ನೇ ನೆಚ್ಚಿಕೊಂಡಿವೆ. ಹೀಗಾಗಿ ಚೀನಾ ವಿರುದ್ಧದ ಯಾವುದೇ ಬಹಿಷ್ಕಾರವು ಇವುಗಳಿಗೆ ಮಾರಕವಾಗಲಿದೆ. ಈಗ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 75 ಕ್ಕೂ ಹೆಚ್ಚು ಮುಂಚೂಣಿಯ ಇ-ಕಾಮರ್ಸ್, ಹಣಕಾಸು ತಂತ್ರಜ್ಞಾನ, ಸೋಶಿಯಲ್ ಮೀಡಿಯಾ ಹಾಗೂ ಲಾಜಿಸ್ಟಿಕ್ಸ್​ ಸ್ಟಾರ್ಟಪ್​ ಕಂಪನಿಗಳು ಚೀನಾ ಬಂಡವಾಳದ ಮೇಲೆ ನಿಂತಿವೆ ಎಂದು ಗ್ಲೋಬಲ್ ಟೈಮ್ಸ್​ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.