ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿರುವ ಮಸೀದಿಗಳು ಮತ್ತು ಮದರಸಾಗಳಲ್ಲಿ ಕೋವಿಡ್ ಸೋಂಕಿತರ ಕ್ವಾರಂಟೈನ್‌ಗೆ ಅವಕಾಶ ನೀಡಬೇಕು ಎಂದು ಅಲ್ಲಿನ ಇಮಾಮ್ ಸಂಘಟನೆ ಮಸೀದಿಗಳ ಮುಖ್ಯಸ್ಥರಲ್ಲಿ ಮನವಿ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿನ 2,600 ಮಸೀದಿ ಹಾಗೂ ಮದರಸಾಗಳನ್ನು ರಾಜ್ಯ ಸರ್ಕಾರದ ಅಧೀನಕ್ಕೆ ನೀಡಿ ಅಲ್ಲಿ ಕ್ವಾರಂಟೈನ್ ಸೆಂಟರ್ ಮಾಡಲು ಅವಕಾಶ ನೀಡಬೇಕು ಎಂದು ಸಂಘಟನೆ ಮುಖ್ಯಸ್ಥ ಯಾಹಿನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕ್ವಾರಂಟೈನ್ ಸೆಂಟರ್‌ಗಳನ್ನು ತೆರೆಯಲು ಸ್ಥಳಾವಕಾಶದ ತೊಂದರೆಯುಂಟಾಗಿದೆ. ನಾವು ಇಂಥ ಸಂದರ್ಭದಲ್ಲಿ ಮಾನವೀಯ ನಿಲುವು ತಾಳಬೇಕಿದೆ. ಈ ಮೂಲಕ ಅನೇಕರಿಗೆ ಸಹಾಯ ಮಾಡಿದಂತಾಗುತ್ತದೆ. ಒಂದೊಂದು ಮಸೀದಿಯಲ್ಲಿ ಸುಮಾರು 50 ಜನರಿಗೆ ಉಳಿದುಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.