ETV Bharat / bharat

ನಾನು ಸಹ ವೋಕಲ್​ ಫಾರ್ ಲೋಕಲ್​​ ಅಭಿಯಾನಕ್ಕೆ ಜೈಜೋಡಿಸುತ್ತೇನೆ: ಬಾಬಾ ರಾಮ್​​ದೇವ್​ - ಭಾರತವು ಕೃಷಿ, ಆರೋಗ್ಯ, ಶಿಕ್ಷಣ, ಸಂಶೋಧನೆ, ಉತ್ಪಾದನೆ,

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಎಂದೇ ಹೇಳಲಾಗುತ್ತಿರುವ ಆತ್ಮ ನಿರ್ಭರ್ ಭಾರತ್​ಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇದೀಗ ಈ ಯೋಜನೆಯನ್ನು ಯಶಸ್ವಿಗೊಳಿಸಲು ಯೋಗ ಗುರು ಬಾಬಾ ರಾಮ್​ದೇವ್ ಸಹ ಕರೆ ಕೊಟ್ಟಿದ್ದಾರೆ. ನಾನು ಸಹ ವೋಕಲ್​ ಫಾರ್ ಲೋಕಲ್​​​ ಅಭಿಯಾನದೊಂದಿಗೆ ಕೈಜೋಡಿಸುತ್ತೇನೆ ಎಂದಿದ್ದಾರೆ.

Ramdev
ಬಾಬಾ ರಾಮ್​​ದೇವ್​
author img

By

Published : Nov 18, 2020, 9:10 AM IST

ಹರಿದ್ವಾರ (ಉತ್ತರಾಖಂಡ್): ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ದೇಶದ ಜನತೆಗೆ ಕರೆ ನೀಡಿದ್ದ ವೋಕಲ್ ಫಾರ್ ಲೋಕಲ್​ ಅಭಿಯಾನದ ಪರವಾಗಿ ಮಾತನಾಡಿರುವ ಯೋಗ ಗುರು ಬಾಬಾ ರಾಮ್​ದೇವ್, ಆತ್ಮ ನಿರ್ಭರ ಭಾರತದಿಂದ ದೇಶದ ಎಲ್ಲಾ ವಯದಲ್ಲೂ ಸ್ವಾವಲಂಬಿಯಾಗುವುದು ಖಚಿತ ಎಂದಿದ್ದಾರೆ.

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ದೇಶವು ಸ್ವದೇಶಿ, ಯೋಗ, ರಾಷ್ಟ್ರೀಯತೆ ಮತ್ತು ಸ್ವಾವಲಂಬನೆಯನ್ನು ಪ್ರತಿಬಿಂಬಿಸುವ ಪ್ರಧಾನ ಮಂತ್ರಿಯನ್ನು ಹೊಂದಿದ್ದು, ಸ್ವದೇಶಿ ಕಲ್ಪನೆಗೆ ಅವರು ನಾಂದಿಯಾಗಿದ್ದಾರೆ. ಆದರ್ಶ ಭಾರತಕ್ಕೆ ಅವರೇ ಸ್ಫೂರ್ತಿಯಾಗಿದ್ದಾರೆ ಎಂದು ಬಾಬಾ ಬಣ್ಣಿಸಿದ್ದಾರೆ.

ವೋಕಲ್ ಫಾರ್ ಲೋಕಲ್ ಮೂಲಕ ಆತ್ಮ ನಿರ್ಭರ್​ ಭಾರತ ಸಾಕಾರಗೊಳಿಸಿ ಸ್ವಾವಲಂಬನೆಯನ್ನು ಉತ್ತೇಜಿಸಲು ಎಲ್ಲಾ ಧಾರ್ಮಿಕ ಗುರುಗಳನ್ನು ಮೋದಿ ಸಂದರ್ಶಿಸಿದ್ದರು. ಈ ಹಿನ್ನೆಲೆ ಬಾಬಾ ರಾಮ್​ದೇವ್ ಸಹ ಆತ್ಮ ನಿರ್ಭರ್​ ಭಾರತಕ್ಕೆ ಧ್ವನಿಯಾಗಿದ್ದಾರೆ.

ನಾನು ಅನೇಕ ಗುರುಗಳು ಆಚಾರ್ಯರ ಜೊತೆಯಲ್ಲಿ ಸಂಪರ್ಕದಲ್ಲಿದ್ದೇನೆ. ನಮ್ಮ ಆಧ್ಯಾತ್ಮಿಕ ಗುರುಗಳು ದೇಶದ ಕೋಟ್ಯಂತರ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ವೋಕಲ್ ಫಾರ್ ಲೋಕಲ್​​​ಗೆ ನಾವು ಕೈಜೋಡಿಸಲಿದ್ದೇವೆ. ಇದು ಸ್ವಾವಲಂಬನೆಯ ಕ್ರಾಂತಿಗೆ ಕಾರಣವಾಗಲಿದೆ ಎಂದಿದ್ದಾರೆ.

ಭಾರತವು ಕೃಷಿ, ಆರೋಗ್ಯ, ಶಿಕ್ಷಣ, ಸಂಶೋಧನೆ, ಉತ್ಪಾದನೆ, ಕೃಷಿ ವಲಯವೂ ಸೇರಿ ಕಾರ್ಪೊರೇಟ್​​ ಕ್ಷೇತ್ರದಲ್ಲಿ ಪ್ರತಿಯೊಂದು ಹಂತದಲ್ಲೂ ಸ್ವಾವಲಂಬಿಯಾಗಲಿದೆ ಎಂಬ ಖಚಿತತೆ ಇದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಹರಿದು ಹೋಗುತ್ತಿರುವ ಹಣ ತಡೆದು ಸ್ಥಳೀಯ ಸಂಸ್ಥೆಗಳನ್ನು ಬೆಳಸಿ ಎಂದು ಕರೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.