ಆಂಧ್ರಪ್ರದೇಶ: ಗುಂಟೂರು ಜಿಲ್ಲೆಯ ಮುಂಗೋಡು ಎಂಬಲ್ಲಿ ಕಾನೂನುಬಾಹಿರವಾಗಿ ಮದ್ಯ ಸಾಗಿಸುತ್ತಿದ್ದ ನೀರಿನ ಟ್ಯಾಂಕರ್ನ್ನು ಅಮರಾವತಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮದ್ಯ ಸಾಗಾಟದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ನೀರಿನ ಟ್ಯಾಂಕರ್ನಲ್ಲಿ ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 21 ಲಕ್ಷ ರೂ. ಮೌಲ್ಯದ ಒಟ್ಟು 9,100 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ತೆನಪಲ್ಲೇ ವಲಯದ ಅಬ್ಬೂರ್ನ 8 ಜನರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ವಿಶಾಲ್ ಗುನ್ನೆ ತಿಳಿಸಿದ್ದಾರೆ.