ಚೆನ್ನೈ (ತಮಿಳು ನಾಡು): ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಗತಿ ಸಾಧಿಸಿರುವ ಮದ್ರಾಸ್ ಸಂಶೋಧಕರು ಸಾಂಪ್ರದಾಯಿಕ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡುವ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಕೀಮೋಥೆರಪಿ ಸೇರಿದಂತೆ ಅನೇಕ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಬಳಸಲಾಗುವ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಹೈಡ್ರಾಕ್ಸಿಲ್ ರಾಡಿಕಲ್ಗಳಂತಹ ಹೆಚ್ಚು ಪ್ರತಿಕ್ರಿಯಾತ್ಮಕ ಅಣುಗಳಾಗಿರುವ ರಿಯಾಕ್ಟಿವ್ ಆಕ್ಸಿಜನ್ ಪ್ರಭೇದಗಳನ್ನು (ಆರ್ಓಎಸ್) ಸಂಶೋಧನಾ ತಂಡವು ಅಧ್ಯಯನ ಮಾಡಿದೆ.
ಐಐಟಿ ಮದ್ರಾಸ್ ತಂಡವು ಮಾಡಿದ ಅವಲೋಕನಗಳು ಉತ್ತಮ ಫಲಿತಾಂಶ ನೀಡಿದ್ದು, ಆ್ಯಂಟಿ ಕ್ಯಾನ್ಸರ್ ಚಿಕಿತ್ಸೆಗೆ ಮಾರ್ಗಗಳನ್ನು ತೋರಿಸುತ್ತವೆ.
ಐಐಟಿ ಮದ್ರಾಸ್‌ನ ಜೈವಿಕ ತಂತ್ರಜ್ಞಾನ ವಿಭಾಗದ ಅಧ್ಯಾಪಕರಾದ ಪ್ರೊ.ಜಿ.ಕೆ. ಸುರೇಶ್ ಕುಮಾರ್ ಮತ್ತು ಪ್ರೊ.ಡಿ.ಕರುನಗರನ್ ಈ ಸಂಶೋಧನೆಯ ನೇತೃತ್ವ ವಹಿಸಿದ್ದರು.