ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮತ್ತು ರಾಜ್ಯಕ್ಕೆ ಕಾನೂನುಗಳನ್ನು ರಚಿಸುವ ಸಂವಿಧಾನದ 370ನೇ ವಿಧಿಯನ್ನು ವಾಪಸ್ ತೆಗೆದುಕೊಂಡರೇ 'ಭಾರತ ಜೊತೆಗಿನ ಕಾಶ್ಮೀರದ ಸಂಬಂಧ ಮುಗಿಯಲಿದೆ' ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರಕ್ಕೆ ನೀಡಲಾದ ಸಂವಿಧಾನದ 370ನೇ ವಿಧಿಯನ್ನು ಕಡಿತಗೊಳಿಸಿ ಹೊಸ ನಿಯಮಗಳು ಹೊರಹೊಮ್ಮುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ ಎಂದು ಅನುಮಾನಿಸಿದ್ದಾರೆ.
ನೀವು (ಕೇಂದ್ರ) ಭಾರತ ಮತ್ತು ಕಾಶ್ಮೀರದ ನಡುವೆ ಸೇತುವೆಯಂತಿರುವ 370ನೇ ವಿಧಿಯನ್ನು ಕಡಿತಗೊಳಿಸಿದರೇ ಮುಂದಿನ ದಿನಗಳಲ್ಲಿ ಭಾರತ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಿನ ಸಂಬಂಧವನ್ನು ಮತ್ತೆ ಕಟ್ಟಬೇಕಾಗುತ್ತದೆ. ಮರು ಸಂಧಾನದ ವೇಳೆ ಹೊಸ- ಹೊಸ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಶ್ಮೀರ ಬಹುಸಂಖ್ಯಾತ ಮುಸ್ಲಿಮರು ಇರುವ ಬಹುಮತದ ರಾಜ್ಯ. ಅವರು ನಿಮ್ಮೊಂದಿಗೆ ಉಳಿಯಲು ಬಯಸುತ್ತೀರಾ? 370ನೇ ವಿಧಿಯನ್ನು ನೀವು ರದ್ದು ಮಾಡಿದರೆ, ಜಮ್ಮು ಮತ್ತು ಕಾಶ್ಮೀರದೊಂದಿಗಿನ ನಿಮ್ಮ ಸಂಬಂಧವೂ ಮುಗಿದು ಹೋಗಲಿದೆ ಎಂದಿದ್ದಾರೆ.