ETV Bharat / bharat

ಹಣಕಾಸು ಕೊರತೆಗೆ ಪರಿಹಾರ: ರಕ್ಷಣಾ ಇಲಾಖೆ ಭೂಮಿ ಸದ್ಭಳಕೆಗೆ ಚಿಂತನೆ! - ಇಲಾಖೆ ಅಧಿಕಾರಿ

ದೇಶದ ರಕ್ಷಣಾ ಇಲಾಖೆ ದೇಶಾದ್ಯಂತ ಸುಮಾರು 17.54 ಲಕ್ಷ ಎಕರೆ ಭೂ ಆಸ್ತಿಯನ್ನು ಹೊಂದಿದೆ. ಹೀಗಾಗಿ ದೇಶಾದ್ಯಂತ ಇರುವ ಈ ಭೂ ಆಸ್ತಿಯನ್ನು ಹಣದ ರೂಪಕ್ಕೆ ಪರಿವರ್ತಿಸಿ ರಕ್ಷಣೆಗೆ ಆ ನಿಧಿಯನ್ನು ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಗೆ ಬಳಸಲು ಚರ್ಚೆ ನಡೆದಿದೆ.

ದೇಶ ರಕ್ಷಣೆಗೆ ಹಣಕಾಸಿನ ಕೊರತೆ
author img

By

Published : Sep 3, 2019, 5:33 PM IST

Updated : Sep 3, 2019, 5:39 PM IST

ನವದೆಹಲಿ: ದೇಶದ ರಕ್ಷಣೆ ವಿಚಾರದಲ್ಲಿ ಇರುವ ಹಣಕಾಸಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಹಣಕಾಸಿನ ದೀರ್ಘಕಾಲಿನ ನಿಧಿ ಕೊರತೆಯಿಂದ ಹೊರ ಬರಲು, ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಲು(ಹಣದ ರೂಪಕ್ಕೆ ಪರಿವರ್ತನೆ) ಚಿಂತನೆ ನಡೆದಿದೆ.

ಕಳೆದ ಶುಕ್ರವಾರ 15ನೇ ಹಣಕಾಸು ಆಯೋಗದ ಸದಸ್ಯರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಇಲಾಖೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಗೆ ಬೇಕಾದ ಸುರಕ್ಷಿತ ಮತ್ತು ಲ್ಯಾಪ್ಸ್​ ಮಾಡಲಾಗದಷ್ಟು ಮೊತ್ತವನ್ನು ಬಳಸಬಹುದಾಗಿ ಸಭೆಯಲ್ಲಿ ಚರ್ಚೆ ನಡೆದಿದೆ. ಇಲಾಖೆಗೆ ದೇಶಾದ್ಯಂತ ಇರುವ ಭೂ ಆಸ್ತಿಯನ್ನು ಹಣದ ರೂಪಕ್ಕೆ ಪರಿವರ್ತಿಸಿ (ರಕ್ಷಣೆ) ಮಿಲಟರಿಯನ್ನ ಮತ್ತಷ್ಟು ಬಲಗೊಳಿಸಲು ಆ ನಿಧಿಯನ್ನು ಬಳಸುವ ಚಿಂತನೆ ಕೇಂದ್ರ ಸರ್ಕಾರದ್ದು.

ರಕ್ಷಣಾ ಇಲಾಖೆಯು ದೇಶಾದ್ಯಂತ ಸುಮಾರು 17.54 ಲಕ್ಷ ಎಕರೆ ಭೂ ಆಸ್ತಿಯನ್ನು ಹೊಂದಿದೆ. ಈ ಭೂಮಿಯನ್ನು ಹಣದ ರೂಪಕ್ಕೆ ಪರಿವರ್ತಿಸಿ ರಕ್ಷಣೆಗೆ ಹಂಚಿಕೆಯಾದ ಮೊತ್ತ ಹಾಗೂ ಅಗತ್ಯವಿರುವ ಮೊತ್ತದ ಅಂತರ ತಗ್ಗಿಸಲು ಬಳಸಲು ಸಿದ್ಧತೆ ನಡೆಸಲಾಗಿದೆ.

ಡೈರೆಕ್ಟರೇಟ್ ಜನರಲ್ ಡಿಫೆನ್ಸ್ ಎಸ್ಟೇಟ್ಸ್ ಪ್ರಕಾರ, ರಕ್ಷಣಾ ಇಲಾಖೆಯ ಒಟ್ಟು 17.54 ಲಕ್ಷ ಎಕರೆ ಭೂಮಿಯಲ್ಲಿ ಕೇವಲ 1.57 ಲಕ್ಷ ಎಕರೆ ಭೂಮಿಯಷ್ಟೇ ಭಾರತದಲ್ಲಿದೆ. ಉಳಿದ 15.96 ಲಕ್ಷ ಎಕರೆ ಭೂಮಿ ಹೊರದೇಶದಲ್ಲಿದೆ ಎಂದು ಹೇಳಿದೆ. ರಕ್ಷಣಾ ಇಲಾಖೆಯು ಈವರೆಗೆ ತನ್ನ ಭೂ ಆಸ್ತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪವೂ ಇದೆ.

Intro:Body:

Indian Army

Conclusion:
Last Updated : Sep 3, 2019, 5:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.