ನವದೆಹಲಿ: ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಪಾಕ್ನಿಂದ ಬಂಧಿತರಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷನ್ ಜಾಧವ್ ಅವರ ತೀರ್ಪು ಹೊರಬಿದಿದ್ದು, ಭಾರತದ ಪರ ತೀರ್ಪು ಬಂದಿದೆ.
- 16 ಜಡ್ಜ್ಗಳ ಪೈಕಿ 15 ಜಡ್ಜ್ ಭಾರತದ ಪರ ತೀರ್ಪು ನೀಡಿದ್ದು, ಗಲ್ಲು ಶಿಕ್ಷೆಯನ್ನ ಮರುಪರಿಶೀಲನೆ ನಡೆಸುವಂತೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕೋರ್ಟ್ ಸೂಚನೆ ನೀಡಿದೆ.
- ಕುಲಭೂಷಣ್ ಪ್ರಕರಣದಲ್ಲಿ ಪಾಕ್ ವಿಯನ್ನಾ ಒಪ್ಪಂದದ ನಿಯಮಗಳನ್ನ ಉಲ್ಲಂಘನೆ ಮಾಡಿದೆ.
- ಪಾಕ್ ಸರ್ಕಾರ ಕುಲಭೂಷಣ್ ಜಾಧವ್ಗೆ ಯಾವುದೇ ಕಾನೂನು ನೆರವು ನೀಡಿಲ್ಲ
- ಭಾರತ ನೂರಾರು ಬಾರಿ ಮನವಿ ಮಾಡಿದರೂ ಪಾಕ್ ಕುಲಭೂಷಣ್ ನೆರವಿಗೆ ಧಾವಿಸಿರಲಿಲ್ಲ ಎಂಬುದು ವಾದ-ಪ್ರತಿವಾದಗಳಿಂದ ಸಾಬೀತು.
- ಪಾಕ್ ಆಕ್ಷೇಪಣೆಗಳನ್ನ ತಿರಸ್ಕಾರ ಮಾಡಿದ ಅಂತಾರಾಷ್ಟ್ರೀಯ ಕೋರ್ಟ್
- ನೆದರ್ಲೆಂಡ್ನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್
- ಗಲ್ಲು ಶಿಕ್ಷೆ ಆದೇಶ ಮರುಪರಿಶೀಲನೆ ನಡೆಸುವಂತೆ ಪಾಕ್‌ಗೆ ಆದೇಶ
- ಪಾಕಿಸ್ತಾನ ಕುಲಭೂಷಣ್ ಜಾಧವ್ಗೆ ಗಲ್ಲುಶಿಕ್ಷೆ ವಿಧಿಸುವಂತಿಲ್ಲ
- ಪಾಕಿಸ್ತಾನ ಜಡ್ಜ್ನಿಂದ ಮಾತ್ರ ಈ ಆದೇಶಕ್ಕೆ ವಿರೋಧ
ಇದಕ್ಕೂ ಮೊದಲು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಮಾತನಾಡಿದ್ದು, ಅಭಿನಂದನ್ ರೀತಿಯಲ್ಲಿ ಅವರು ಪಾಕ್ನಿಂದ ಭಾರತಕ್ಕೆ ವಾಪಸ್ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಪಾಕ್ ವಿಮಾನ ಹೊಡೆದುರುಳಿಸಿ ಅವರ ಗಡಿಯಲ್ಲಿ ಬಂಧಿಯಾಗಿದ್ದ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಪಾಕ್ ಸಕಲ ಗೌರವಗಳೊಂದಿಗೆ ಭಾರತಕ್ಕೆ ವಾಪಸ್ ಮಾಡಿತ್ತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಭಾರತಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನ ತುಂಬು ಹೃದಯದಿಂದ ಗೌರವಿಸುತ್ತೇನೆ ಎಂದು ಟ್ಟೀಟ್ ಮಾಡಿ ಸಂಭ್ರಮ ಪಟ್ಟಿದ್ದಾರೆ.
-
I thank the Prime Minister Shri @narendramodi for our initiative to take Jadhav's case before International Court of Justice. /2
— Sushma Swaraj (@SushmaSwaraj) July 17, 2019 " class="align-text-top noRightClick twitterSection" data="
">I thank the Prime Minister Shri @narendramodi for our initiative to take Jadhav's case before International Court of Justice. /2
— Sushma Swaraj (@SushmaSwaraj) July 17, 2019I thank the Prime Minister Shri @narendramodi for our initiative to take Jadhav's case before International Court of Justice. /2
— Sushma Swaraj (@SushmaSwaraj) July 17, 2019
-
I wholeheartedly welcome the verdict of International Court of Justice in the case of Kulbhushan Jadhav. It is a great victory for India. /1
— Sushma Swaraj (@SushmaSwaraj) July 17, 2019 " class="align-text-top noRightClick twitterSection" data="
">I wholeheartedly welcome the verdict of International Court of Justice in the case of Kulbhushan Jadhav. It is a great victory for India. /1
— Sushma Swaraj (@SushmaSwaraj) July 17, 2019I wholeheartedly welcome the verdict of International Court of Justice in the case of Kulbhushan Jadhav. It is a great victory for India. /1
— Sushma Swaraj (@SushmaSwaraj) July 17, 2019
ಘಟನೆಯ ಕಾಲಾನುಕ್ರಮ:
* ಮಾ.25, 2016ರಂದು ಜಾಧವ್ ಬಂಧನದ ವಿಚಾರ ಭಾರತಕ್ಕೆ ತಿಳಿಯಿತು
* ಏ.11, 2017ರಲ್ಲಿ ಪಾಕಿಸ್ತಾನಿ ಮಿಲಿಟರಿ ನ್ಯಾಯಾಲಯ ಜಾಧವ್ಗೆ ಮರಣ ದಂಡನೆ ವಿಧಿಸಿತು.
* ಮೇ 8, 2017 ಭಾರತ ಅಂತರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಯಿತು.
* ಮೇ 15, 2017ರಲ್ಲಿ ಜಾಧವ್ ಪ್ರಕರಣದಲ್ಲಿ ಐಸಿಜೆಯಲ್ಲಿ ಮೊದಲ ವಿಚಾರಣೆ
* ಮೇ 18, 2017 ಪಾಕ್ ಮಿಲಿಟರಿ ನ್ಯಾಯಾಲಯ ನೀಡಿದ್ದ ಮರಣದಂಡೆನೆಗೆ ಐಸಿಜೆ ತಡೆ ಆದೇಶ ಹೊರಡಿಸಿತು.
* ಡಿ.18,2017ರಲ್ಲಿ ಪಾಕ್‌ಗೆ ತೆರಳಿದ ಜಾಧವ್ ತಾಯಿ ಮತ್ತು ಮಡದಿ ಅವರನ್ನು ಭೇಟಿ ಮಾಡಿದರು.
* ಫೆ.19, 2019 ಐಸಿಜೆಯಲ್ಲಿ ಜಾಧವ್ ಪ್ರಕರಣದ ವಿಚಾರಣೆ
* ಜು.17, 2019: ಕುಲಭೂಷಣ ಜಾಧವ್ ಪ್ರಕರಣದ ಅಂತಿಮ ತೀರ್ಪು ನಿಗದಿಯಾಗಿತ್ತು.
ಕುಲಭೂಷನ್ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಹರೀಶ್ ಸಾಳ್ವೆ ವಾದ ಮಂಡಿಸಿದ್ದು, ಕುಲಭೂಷಣ್ ಜಾಧವ್ ಬಂಧನ ಹಾಗೂ ನಂತರದ ಘಟನಾವಳಿಗಳಲ್ಲಿ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
-
I hope the verdict will provide the much needed solace to the family members of Kulbhushan Jadhav. /4
— Sushma Swaraj (@SushmaSwaraj) July 17, 2019 " class="align-text-top noRightClick twitterSection" data="
">I hope the verdict will provide the much needed solace to the family members of Kulbhushan Jadhav. /4
— Sushma Swaraj (@SushmaSwaraj) July 17, 2019I hope the verdict will provide the much needed solace to the family members of Kulbhushan Jadhav. /4
— Sushma Swaraj (@SushmaSwaraj) July 17, 2019
2016ರಲ್ಲಿ ಕುಲಭೂಷನ್ ಯಾದವ್ ಬಂಧನ ಮಾಡಿದ್ದ ಪಾಕಿಸ್ತಾನ ಮಿಲಿಟರಿ 2017ರಲ್ಲಿ ಅವರಿಗೆ ಮರಣ ದಂಡನೆ ವಿಧಿಸಿತ್ತು. ಆದರೆ, ಇದನ್ನ ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿತ್ತು. ಈಗಾಗಲೇ ವಾದ-ವಿವಾದ ಆಲಿಸಿರುವ ನ್ಯಾಯಾಲಯ ಇಂದು ತನ್ನ ಅಂತಿಮ ತೀರ್ಪು ಪ್ರಕಟ ಮಾಡಿದೆ.
-
Hague, Netherlands: Team from Indian Embassy arrives at International Courts of Justice for #KulbhushanJadhav case's verdict pic.twitter.com/zP8g9vRwyc
— ANI (@ANI) July 17, 2019 " class="align-text-top noRightClick twitterSection" data="
">Hague, Netherlands: Team from Indian Embassy arrives at International Courts of Justice for #KulbhushanJadhav case's verdict pic.twitter.com/zP8g9vRwyc
— ANI (@ANI) July 17, 2019Hague, Netherlands: Team from Indian Embassy arrives at International Courts of Justice for #KulbhushanJadhav case's verdict pic.twitter.com/zP8g9vRwyc
— ANI (@ANI) July 17, 2019