ETV Bharat / bharat

ಐಬಿ ಅಧಿಕಾರಿ ಅಂಕಿತ್​ ಶರ್ಮಾ ಮರಣೋತ್ತರ ವರದಿ: 12 ಬಾರಿ ಇರಿತ, 45 ಗಾಯದ ಗುರುತು! - ಅಂಕಿತ್​ ಶರ್ಮಾ ಮರಣೋತ್ತರ ವರದಿ

ಕಳೆದ ವಾರ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ದಕ್ಷ ಐಬಿ ಅಧಿಕಾರಿ ಅಂಕಿತ್​ ಶರ್ಮಾ ಮರಣೋತ್ತರ ವರದಿ ಇದೀಗ ಬಹಿರಂಗಗೊಂಡಿದ್ದು, ಮಹತ್ವದ ಅಂಶ ಬಹಿರಂಗಗೊಂಡಿದೆ.

IB officer Ankit Sharma
IB officer Ankit Sharma
author img

By

Published : Mar 14, 2020, 1:16 PM IST

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರದ ಸಂದರ್ಭದಲ್ಲಿ ಹತ್ಯೆಗೊಳಗಾಗದ ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ಮರಣೋತ್ತರ ಪರೀಕ್ಷೆ ಇದೀಗ ಹೊರಬಿದ್ದಿದ್ದು, ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.

2017ನೇ ಬ್ಯಾಚ್​ನ ಅಧಿಕಾರಿಯಾಗಿದ್ದ 26 ವರ್ಷದ ಅಂಕಿತ್​ ಶರ್ಮಾ ಶವವನ್ನ ಪೊಲೀಸರು ನಿಗೂಢ ರೀತಿಯಲ್ಲಿ ಚಾಂದ್​ಬಾಗ್​ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ತಾಹೀರ್​ ಹುಸೇನ್​ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೀಗ ಮೃತದೇಹದ ಮರಣೋತ್ತರ ವರದಿ ಬಹಿರಂಗಗೊಂಡಿದ್ದು, ಚಾಕುವಿನಿಂದ 12 ಸಲ ಇರಿಯಲಾಗಿದ್ದು, 45 ಗಾಯದ ಗುರುತು ಕಂಡು ಬಂದಿವೆ ಎಂಬುದು ತಿಳಿದು ಬಂದಿದೆ.

ಅಂಕಿತ್​ ಶರ್ಮಾ ಮೇಲೆ ಹರಿತಾದ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂಬುದು ವರದಿಯಿಂದ ಹೊರಬಿದ್ದಿದೆ. ದೆಹಲಿ ಗಲಭೆಯಲ್ಲಿ ಸಾವನ್ನಪ್ಪಿರುವ ಅಂಕಿತ್​ ಶರ್ಮಾ ಕುಟುಂಬಕ್ಕೆ ಈಗಾಗಲೇ ಕೇಜ್ರಿವಾಲ್​ ಸರ್ಕಾರ 1 ಕೋಟಿ ರೂ ಪರಿಹಾರ ಘೋಷಣೆ ಮಾಡಿದೆ. ಇದೇ ಹಿಂಸಾಚಾರದಲ್ಲಿ ಹಿರಿಯ ಪೊಲೀಸ್​ ಕಾನ್ಸ್​ಟೇಬಲ್ ಒಬ್ಬರು ಸಾವನ್ನಪ್ಪಿದ್ದು, ಅಂಕಿತ್​ ಶರ್ಮಾ ಕೊಲೆಗೆ ಕಾರಣವಾಗಿದ್ದ ವ್ಯಕ್ತಿ ಇವರ ಮೇಲೂ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.