ಕೊಯಮತ್ತೂರು (ತಮಿಳುನಾಡು): ಭಾರತೀಯ ವಾಯು ಸೇನೆಗೆ ಮತ್ತಷ್ಟು ಶಕ್ತಿ ತುಂಬಲಿರುವ ದೇಶಿ ನಿರ್ಮಿತ ತೇಜಸ್ ಎಂಕೆ -1 ಎಫ್‌ಒಸಿ (ಫೈನಲ್ ಆಪರೇಷನ್ಸ್ ಕ್ಲಿಯರೆನ್ಸ್) ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್ ನಿನ್ನೆ ಸೇನೆಗೆ ಸೇರ್ಪಡೆಯಾಗಿದೆ.
ಕೊಯಮತ್ತೂರಿನ ಸುಲೂರ್ ವಾಯುಪಡೆ ನಿಲ್ದಾಣದಲ್ಲಿ ವಾಯು ಹಾರಾಟ ನಡೆಸುವ ಮೂಲಕ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ, ಅಧಿಕೃತವಾಗಿ ಯುದ್ಧ ವಿಮಾನವನ್ನು ಸೇನೆಗೆ ಸೇರಿಸಿಕೊಂಡಿದ್ದಾರೆ.
''ಫ್ಲೈಯಿಂಗ್ ಬುಲೆಟ್ಸ್ - 45' ಎಂಬ ಹೆಸರಿನ ಈ ಲಘು ಯುದ್ಧ ವಿಮಾನ ಬೆಂಗಳೂರಿನ ಎಚ್ಎಎಲ್ ನಲ್ಲಿ ನಿರ್ಮಾಣವಾಗಿದೆ. ಭಾರತೀಯ ವಾಯುಪಡೆ ಈಗ ವಿದೇಶಿ ಉತ್ಪನ್ನಗಳಿಗಿಂತ ಸ್ಥಳೀಯ ಉತ್ಪನ್ನಗಳನ್ನು ಅವಲಂಬಿಸಿದೆ ಎಂದು ಹೇಳಿದರು.
ತೇಜಸ್ ಎಂಕೆ -1 ಎಫ್‌ಒಸಿ ಒಂದೇ ಎಂಜಿನ್, ಕಡಿಮೆ ತೂಕ, ಹೆಚ್ಚು ಚುರುಕು ಬುದ್ಧಿಯ, ಎಲ್ಲ ರೀತಿಯ ಹವಾಮಾನ, ಮಲ್ಟಿ ರೋಲ್ ಫೈಟರ್ ವಿಮಾನಗಳು ಹಾರಾಟ ನಡೆಸುತ್ತಲೇ ಇಂಧನ ತುಂಬುವ ಸಾಮರ್ಥ್ಯ ಹೊಂದಿದ್ದು, ಬಹುಮುಖ ಫೈಟರ್ ಆಗಿದೆ.
ಕಾರ್ಯಕ್ರದಲ್ಲಿ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಫ್ ಸದರ್ನ್ ಏರ್ ಕಮಾಂಡ್ ಅಮಿತ್ ತಿವಾರಿ, ಏರ್ ಮಾರ್ಷಲ್ ಟಿಡಿ ಜೋಸೆಫ್, ಎಚ್ಎಎಲ್‌ನ ಸಿಎಂಡಿ ಆರ್.ಮಾಧವನ್ , ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ ಪಿಜಿಡಿ (ಸಿಎ) ಮತ್ತು ನಿರ್ದೇಶಕರಾದ ಡಾ.ಗಿರೀಶ್ ಎಸ್ ದೇವಧಾರೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.