ETV Bharat / bharat

ನನ್ನ ಗಂಡ ಯಾವುದೇ ದೇಣಿಗೆ ನೀಡಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದ ಸಾಕ್ಷಿ! - ಸಾಕ್ಷಿ ಸಿಂಗ್​ ಧೋನಿ

ಮಹೇಂದ್ರ ಸಿಂಗ್​ ಧೋನಿ ಕೊರೊನಾ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಅವರ ಕಾಲೆಳೆಯಲಾಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಅವರ ಪತ್ನಿ ಸಾಕ್ಷಿ ಟ್ವೀಟ್​ ಮಾಡಿದ್ದಾರೆ.

Sakshi Singh
Sakshi Singh
author img

By

Published : Mar 27, 2020, 11:44 PM IST

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ 1 ಲಕ್ಷ ರೂ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿ ಸಾಕ್ಷಿ ಸಿಂಗ್​ ಧೋನಿ ಇದೀಗ ಸ್ಪಷ್ಟನೆ ನೀಡಿದ್ದಾರೆ.

ವಾರ್ಷಿಕ ಆದಾಯ 800 ಕೋಟಿ ಇದ್ದರೂ 1 ಲಕ್ಷ ರೂ. ದೇಣಿಗೆ ನೀಡಿ ಟ್ರೋಲ್​ಗೊಳಗಾದ ಧೋನಿ!

ಮಹೇಂದ್ರ ಸಿಂಗ್​ ಧೋನಿ ಪುಣೆಯ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್​​ ಮುಕುಲ್ ಮಾಧವ್ ಫೌಂಡೇಶನ್‌ಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಎಲ್ಲಡೆ ಹಬ್ಬಿತ್ತು. ಇದೇ ವಿಚಾರವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವರ ಕಾಲೆಳೆಯುವ ಕೆಲಸ ಮಾಡಿದ್ದರು. ವಾರ್ಷಿಕವಾಗಿ 800 ಕೋಟಿ ರೂಪಾಯಿ ಹಣಗಳಿಕೆ ಮಾಡುವ ಧೋನಿ ಕೇವಲ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ರಾ ಎಂದು ಅನೇಕರು ಅವರನ್ನ ಟ್ರೋಲ್​ ಮಾಡಿದ್ದರು.

  • I request all media houses to stop carrying out false news at sensitive times like these ! Shame on You ! I wonder where responsible journalism has disappeared !

    — Sakshi Singh 🇮🇳❤️ (@SaakshiSRawat) March 27, 2020 " class="align-text-top noRightClick twitterSection" data=" ">

ಇದೇ ವಿಷಯವನ್ನಿಟ್ಟುಕೊಂಡು ಟ್ವೀಟ್ ಮಾಡಿರುವ ಸಾಕ್ಷಿ ಸಿಂಗ್, ನನ್ನ ಗಂಡ ಯಾವುದೇ ದೇಣಿಗೆ ನೀಡಿಲ್ಲ. ಇಂತಹ ಸೂಕ್ಷ್ಮ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ನಾನು ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ನಾಚಿಕೆಯಾಗಬೇಕು! ಜವಾಬ್ದಾರಿಯುತ ಪತ್ರಿಕೋದ್ಯಮ ಎಲ್ಲಿ ಕಣ್ಮರೆಯಾಯಿತು ಎಂದು ನಾನು ಆಶ್ಚರ್ಯಪಡುತ್ತಿದ್ದೇನೆ ಎಂದು ಟ್ವೀಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.