ನವದೆಹಲಿ: ಚೌಕಿದಾರ್ ಚೋರ್ ಹೈ ಸಂಬಂಧ ತಾವು ಸುಪ್ರೀಂಕೋರ್ಟ್ ವಿಚಾರದಲ್ಲಿ ಮಾತ್ರ ಕ್ಷಮೆ ಯಾಚನೆ ಮಾಡಿದ್ದೇನೆ ಹೊರತು, ಬಿಜೆಪಿ ವಿಚಾರದಲ್ಲಿ ಅಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಂಗ ನಿಂದನೆ ಅರ್ಜಿ ಕೋರ್ಟ್ನಲ್ಲಿದೆ. ಸುಪ್ರೀಂಕೋರ್ಟ್ನಲ್ಲಿ ನಾವು ಕ್ಷಮೆ ಕೇಳಿದ್ದೇವೆ. ನಾನು ಬಿಜೆಪಿ ಅಥವಾ ಮೋದಿ ಅವರಿಗೆ ಕ್ಷಮೆ ಕೇಳಿಲ್ಲ ಎಂದಿರುವ ರಾಹುಲ್, ಚೌಕಿದಾರ್ ಚೋರ್ ಹೈ ಎಂಬ ನಮ್ಮ ಸ್ಲೋಗನ್ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಜಾಗತಿಕ ಭಯೋತ್ಪಾದಕ ಪಟ್ಟಿಗೆ ಮಸೂದ್ ಅಜರ್ನನ್ನು ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಆದರೆ, ಜೈಲಿನಲ್ಲಿದ್ದ ಮಸೂದ್ ಅಜರ್ನನ್ನು ಬಿಟ್ಟು ಕಳುಹಿಸಿದವರು ಯಾರು ಅಂತಾ ಪ್ರಶ್ನಿಸಿದ್ದಾರೆ.
ಕಂದಹಾರ ವಿಮಾನ ಅಪಹರಣದ ವೇಳೆ, ತಲೆ ಬಾಗಿದ ಆಗಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಮಸೂದ್ ಅಜರ್ ಮುಂದೆ ಶರಣಾಗಿ ಆತನನ್ನ ಸ್ವತಃ ಪಾಕ್ಗೆ ಹಸ್ತಾಂತರಿಸಿತ್ತು ಎಂದು ಪ್ರಧಾನಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
-
Congress President Rahul Gandhi: Process is going on in Supreme Court and I made a comment attributed to SC so I apologized. I did not apologize to BJP or Modi ji. 'Chowkidar Chor hai' will remain our slogan pic.twitter.com/ZQqv72jZNW
— ANI (@ANI) May 4, 2019 " class="align-text-top noRightClick twitterSection" data="
">Congress President Rahul Gandhi: Process is going on in Supreme Court and I made a comment attributed to SC so I apologized. I did not apologize to BJP or Modi ji. 'Chowkidar Chor hai' will remain our slogan pic.twitter.com/ZQqv72jZNW
— ANI (@ANI) May 4, 2019Congress President Rahul Gandhi: Process is going on in Supreme Court and I made a comment attributed to SC so I apologized. I did not apologize to BJP or Modi ji. 'Chowkidar Chor hai' will remain our slogan pic.twitter.com/ZQqv72jZNW
— ANI (@ANI) May 4, 2019
ಭಾರತೀಯ ಸೇನೆ ಏನು ಮೋದಿ ಮನೆ ಆಸ್ತಿನಾ?
ಮೋದಿ ಅವರು ಭಾರತೀಯ ಸೇನೆ ಬಗ್ಗೆ ಪದೇಪದೆ ಮಾತನಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇಂಡಿಯನ್ ಆರ್ಮಿ, ಏರ್ಫೋರ್ಸ್ ಮತ್ತು ನೌಕಾದಳವನ್ನ ನರೇಂದ್ರ ಮೋದಿ ವೈಯಕ್ತಿಕ ಆಸ್ತಿ ಎಂದು ತಿಳಿದಿದ್ದಾರೆ. ಯುಪಿಎ ಅವಧಿಯಲ್ಲಿ ಆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡಿ ವಿಡಿಯೋ ಗೇಮ್ಗೆ ಹೋಲಿಸಿ ಪ್ರಧಾನಿ ಸೇನೆಯನ್ನ ಅಪಮಾನ ಮಾಡಿದ್ದಾರೆ ಎಂದೂ ಆರೋಪಿಸಿದರು.