ETV Bharat / bharat

ಹೆಚ್‌ಸಿಕ್ಯು ಎನ್ನುವ ಆಪತ್ಬಾಂಧವ ಔಷಧದ ಸುತ್ತಮುತ್ತ! - ಹೈಡ್ರಾಕ್ಸಿಕ್ಲೋರೋಕ್ವಿನ್

ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಬಲಿ ಪಡೆದ 1918 ರ ಸ್ಪ್ಯಾನಿಷ್ ಫ್ಲೂ ನಂತರ, ಮಲೇರಿಯಾ ರೂಪದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗವು 1928 ರಿಂದ ಜಗತ್ತಿನ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದೆ.

hydroxychloroquine
ಎಚ್‌ಸಿಕ್ಯು ಎನ್ನುವ ಆಪತ್ಬಾಂಧವ ಔಷಧಿಯ ಸುತ್ತಮುತ್ತ
author img

By

Published : Apr 17, 2020, 5:29 PM IST

ನವದೆಹಲಿ: ಇಂದು ಜಗತ್ತು ತನ್ನ ನಂಬಿಕೆಯನ್ನು ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮೇಲೆ ಇರಿಸಿದೆ. ಅಮೆರಿಕ ಮತ್ತು ಬ್ರೆಜಿಲ್ ಸೇರಿದಂತೆ 30 ದೇಶಗಳು ಭಾರತವನ್ನು ಎಚ್‌ಸಿಕ್ಯು ಔಷಧ ಸಹಾಯಕ್ಕಾಗಿ ಯಾಚಿಸುತ್ತಿವೆ. ಆದರೆ, ಭಾರತದಲ್ಲಿ ಹೇರಳವಾಗಿ ಎಚ್‌ಸಿಕ್ಯು ಯಾಕೆ ಇದೆ, ಕೊರೋನಾ ವೈರಸ್ ನಾವೆಲ್ ವಿರುದ್ಧ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ? ನಮ್ಮ ಪ್ರಸ್ತುತ ಉತ್ಪಾದನೆಯು ಅಂತಾರಾಷ್ಟ್ರೀಯ ಮತ್ತು ದೇಶೀಯ ಅಗತ್ಯಗಳಿಗೆ ಸಾಕಾಗುತ್ತದೆಯೇ? ಕೊವಿಡ್ - 19 ಕ್ಕೆ ಚಿಕಿತ್ಸೆ ನೀಡಲು ಮಲೇರಿಯಾ ನಿರೋಧಕ ಔಷಧವನ್ನು ಬೇರೆ ಯಾವುದೇ ದೇಶ ಪ್ರಯೋಗಿಸುತ್ತಿದೆಯೇ? ಈಗ ಸಾಂಕ್ರಾಮಿಕ ರೋಗವು ಪ್ರಪಂಚವನ್ನು ತನ್ನ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ, ಹಲವಾರು ದೇಶಗಳು ಭಾರತದ ಕಡೆ ನೋಡುತ್ತಿವೆ.

ವಿಶ್ವಾದ್ಯಂತ ಕೋಟ್ಯಂತರ ಜೀವಗಳನ್ನು ಬಲಿ ಪಡೆದ 1918 ರ ಸ್ಪ್ಯಾನಿಷ್ ಫ್ಲೂ ನಂತರ, ಮಲೇರಿಯಾ ರೂಪದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗವು 1928 ರಿಂದ ಜಗತ್ತಿನ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದೆ. ದಕ್ಷಿಣ ಅಮೆರಿಕದಲ್ಲಿನ ಮರ ಪ್ರಭೇದವಾದ ಸಿಂಚೋನಾ ಅಫಿಷಿನಾಲಿಸ್‌ನ ತೊಗಟೆಯನ್ನು ಈ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸಲಾಯಿತು. ಈ ತೊಗಟೆ ಕ್ವಿನೈನ್ ಎಂಬ ಔಷಧದ ಮೂಲ ದ್ರವ್ಯವಾಗಿದೆ.

1930 ರ ಹೊತ್ತಿಗೆ ಮಲೇರಿಯಾ ಹಲವಾರು ದೇಶಗಳಿಗೆ ಹರಡಲು ಪ್ರಾರಂಭಿಸುತ್ತಿದ್ದಂತೆ, ಈ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತಿತ್ತು. ಇದನ್ನು ಕ್ಲೋರೊಕ್ವಿನ್ ಎಂದು ಮರುನಾಮಕರಣ ಮಾಡಲಾಯಿತು. ಆದರೆ, ಕ್ಲೋರೋಕ್ವಿನ್‍ನ ಹಲವಾರು ಅಡ್ಡಪರಿಣಾಮಗಳನ್ನು ವೈದ್ಯರು ಗಮನಿಸಿದರು. 1950 ರಲ್ಲಿ, ಕ್ಲೋರೋಕ್ವಿನ್ ಔಷಧವನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧಿಯನ್ನಾಗಿ ರೂಪಿಸಲು ಮತ್ತಷ್ಟು ಮಾರ್ಪಾಡು ಮಾಡಲಾಯಿತು. ಪ್ರಸ್ತುತ, ಎಚ್‌ಸಿಕ್ಯು ಔಷಧಿಯನ್ನು ಮಲೇರಿಯಾ, ಸಂಧಿವಾತ ಮತ್ತು ಕೆಲವು ಸ್ವಯಂ ನಿರೋಧಕ ಹೊಂದಿರುವ ಕಾಯಿಲೆಗಳಿಗೆ ಬಳಸಲಾಗುತ್ತಿದೆ.

ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಲೇರಿಯಾ ನಿಯಂತ್ರಣದಲ್ಲಿ ಇದೆ. ಅದಕ್ಕಾಗಿಯೇ ಅವರು 1980 ರಿಂದ ಎಚ್‌ಸಿಕ್ಯು ಉತ್ಪಾದನೆಯನ್ನು ನಿಲ್ಲಿಸಿದ್ದಾರೆ. ಬೆಲೆ ಮಿತವಾಗಿರುವುದರಿಂದ ಎಚ್‌ಸಿಕ್ಯು ಮಾರಾಟದಲ್ಲಿ ಫಾರ್ಮಾ ಉದ್ಯಮವು ಕಡಿಮೆ ಲಾಭಾಂಶವನ್ನು ಹೊಂದಿದೆ. ಇದರ ಪರಿಣಾಮವಾಗಿ, ಯುಎಸ್, ಯುಕೆ ಮತ್ತು ಫ್ರಾನ್ಸ್ ಆಮದನ್ನು ಮಾತ್ರ ಅವಲಂಬಿಸಿವೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ರಾಷ್ಟ್ರಗಳಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚು. ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಇದರ ಪರಿಣಾಮವಾಗಿ, ಭಾರತ ಮತ್ತು ಚೀನಾವು ಎಚ್‌ಸಿಕ್ಯುನ ಅತಿದೊಡ್ಡ ತಯಾರಕರಾಗಿ ಗುರುತಿಸಿಕೊಂಡಿದ್ದಾರೆ. ಎಚ್‌ಸಿಕ್ಯು ರಫ್ತಿನ ಶೇಕಡಾ 70 ರಷ್ಟು ಪಾಲು ಭಾರತದ ಬಳಿಯಿದೆ. ಆದರೆ ಎಚ್‌ಸಿಕ್ಯುಗೆ ಅಗತ್ಯವಿರುವ ಆಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರೆಡಿಯಂಟ್ (ಎಪಿಐ) ಅನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ಫಾರ್ಮಾ ಕಂಪನಿಗಳು ತಿಂಗಳಿಗೆ 20 ಕೋಟಿ ಎಚ್‌ಸಿಕ್ಯು ಮಾತ್ರೆಗಳನ್ನು (200 ಎಂಜಿ ಡೋಸೇಜ್) ತಯಾರಿಸಬಹುದು. ನಮ್ಮ ವಾರ್ಷಿಕ ದೇಶೀಯ ಎಚ್‌ಸಿಕ್ಯು ಅಗತ್ಯವು 2.4 ಕೋಟಿಗಳಷ್ಟಿದೆ. ಪ್ರಸ್ತುತ ಸನ್ನಿವೇಶದಲ್ಲಿ, ನಾವು ಸಾಮಾನ್ಯ ಪ್ರಮಾಣಕ್ಕಿಂತ 4 ಪಟ್ಟು ಹೆಚ್ಚು ಉತ್ಪಾದಿಸುತ್ತಿದ್ದೇವೆ.

ಮಲೇರಿಯಾ ಹರಡುವಿಕೆಯು ಅಮೇರಿಕಾದಲ್ಲಿ ಕಡಿಮೆ. ಆದ್ದರಿಂದ, ಆ ದೇಶದಲ್ಲಿ ಯಾವುದೇ ಎಚ್‌ಸಿಕ್ಯು ಮೀಸಲು ದಾಸ್ತಾನು ಇಲ್ಲ. ಅಮೆರಿಕಾದಲ್ಲಿ ಸಾಮಾನ್ಯವಾಗಿ ಸೂಚಿಸಲಾಗುವ ಔಷಧಗಳ ಪಟ್ಟಿಯಲ್ಲಿ ಇದು 128 ನೇ ಸ್ಥಾನದಲ್ಲಿದೆ. ಕೋವಿಡ್ -19 ನಲ್ಲಿ ಎಚ್‌ಸಿಕ್ಯು ಪರಿಣಾಮಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿವೆ. 100 ಕ್ಕೆ 1 ರೋಗಿಯಲ್ಲಿ ಹೃದಯ ಮತ್ತು ಮೂತ್ರಪಿಂಡಗಳ ಮೇಲೆ ಔಷಧದ ಅಡ್ಡಪರಿಣಾಮಗಳನ್ನು ಸ್ವೀಡನ್‌ನ ಸಂಶೋಧಕರು ವರದಿ ಮಾಡಿದ್ದಾರೆ. ಈ ಔಷಧವನ್ನು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ನೀಡಬಾರದು ಎಂದು ಐಸಿಎಂಆರ್ ಆದೇಶಿಸಿದೆ. ಆದರೆ, ಅಮೆರಿಕದ ಸಂಶೋಧಕರು ಎಚ್‌ಸಿಕ್ಯು ಪರೀಕ್ಷೆಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ ಎಂದು ಹೇಳಿದ್ದಾರೆ.

ಚೀನಾ ಮತ್ತು ಫ್ರಾನ್ಸ್ ಕೂಡ ಇದೇ ರೀತಿಯ ಅವಲೋಕನಗಳನ್ನು ವರದಿ ಮಾಡಿವೆ. ಯುಕೆ ಮತ್ತು ಆಸ್ಟ್ರೇಲಿಯಾದಲ್ಲಿ ಇನ್ನೂ ಸಂಶೋಧನೆ ನಡೆಯುತ್ತಿದೆ. ಭಾರತದಲ್ಲಿ, ಅಜಿಥ್ರೊಮೈಸಿನ್ ಜೊತೆಗೆ ಈ ಔಷಧವನ್ನು ಕ್ರಿಟಿಕಲ್ ಕೇರ್ ರೋಗಿಗಳಿಗೆ ನೀಡಲಾಗುತ್ತದೆ. ಹಾಗೆಯೇ ಮುನ್ನೆಚ್ಚರಿಕೆ ಕ್ರಮವಾಗಿ ಈ ಸಂಯೋಜನೆಯನ್ನು ವೈದ್ಯರು ಮತ್ತು ದಾದಿಯರಿಗೆ ನೀಡಲಾಗುತ್ತಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಒಂದು ಸಂಪೂರ್ಣ ಕೋರ್ಸ್‌ಗೆ 14 ಮಾತ್ರೆಗಳು ಬೇಕಾಗುತ್ತವೆ. ಮುನ್ನೆಚ್ಚರಿಕೆ ಕ್ರಮವಾಗಿ, ಸುಮಾರು 70 ಲಕ್ಷ ರೋಗಿಗಳಿಗೆ ಹೆಚ್ಚುವರಿಯಾಗಿ 10 ಕೋಟಿ ಮಾತ್ರೆಗಳನ್ನು ತಯಾರಿಸಲು ಕೇಂದ್ರ ಸರ್ಕಾರ ಫಾರ್ಮಾ ಕಂಪನಿಗಳಿಗೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.