ಹೈದರಾಬಾದ್: ಸ್ನೇಹಿತರೊಂದಿಗೆ ಗೋ-ಕಾರ್ಟ್ ಆಡಲು ತೆರಳಿದ್ದ ವೇಳೆ ಅದರ ಚಕ್ರದಲ್ಲಿ ಕೂದಲು ಸಿಲುಕಿಕೊಂಡು ಬಿಟೆಕ್ ವಿದ್ಯಾರ್ಥಿನಿ ದುರ್ಮರಣಕ್ಕೀಡಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
20 ವರ್ಷದ ವಿದ್ಯಾರ್ಥಿನಿ ವರ್ಷಿಣಿ ಹೈದರಾಬಾದ್ನ ಗುರಂ ಗೂಡಾದಲ್ಲಿ ಗೋ-ಕಾರ್ಟ್ ಆಡಲು ತೆರಳಿದ್ದಳು. ಈ ವೇಳೆ ಅದರ ಚಕ್ರದಲ್ಲಿ ಕೂದಲು ಸಿಲುಕಿಕೊಂಡಿರುವ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ವರ್ಷಿಣಿ ಕುಟುಂಬಸ್ಥರು ಗೋ-ಕಾರ್ಟ್ ವ್ಯವಸ್ಥಾಪಕರ ಮೇಲೆ ಗಂಭೀರ ಆರೋಪ ಮಾಡಿದ್ದು, ಅವರ ನಿರ್ಲಕ್ಷ್ಯದಿಂದಾಗಿ ಮಗಳು ಸಾವನ್ನಪ್ಪಿದ್ದಾಳೆ ಎಂದು ಮೀರ್ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.