ETV Bharat / bharat

ಕೊನೆಗೂ ಕೆರಳಿದ ವ್ಯಾಘ್ರನನ್ನು ಪಳಗಿಸಿದ ಬಿಜೆಪಿ: ಶಿವಸೇನೆ ಜೊತೆ ಮೈತ್ರಿ ಸರ್ಕಾರ ಖಚಿತ

author img

By

Published : Nov 6, 2019, 5:22 PM IST

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಬಿಜೆಪಿ-ಶಿವಸೇನೆ ನಡುವೆ ಉದ್ಭವವಾಗಿದ್ದ ಅನಿಶ್ಚಿತತೆ ಇದೀಗ ಕೊನೆಗೊಂಡಿರುವ ರೀತಿ ಕಾಣಿಸುತ್ತಿದೆ.

ಬಿಜೆಪಿ ಮುಖಂಡ ಸುಧೀರ್​ ಮುಂಗಂತಿವಾರ್

ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ವಿಚಾರ ನಾ ಕೊಡೆ ನೀ ಬಿಡೆ ಎನ್ನುವಂತಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದ್ದು ಕೆರಳಿದ ವ್ಯಾಘ್ರನನ್ನು ಪಳಗಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಸುಧೀರ್​ ಮುಂಗಂತಿವಾರ್​​, ಬಿಜೆಪಿ-ಶಿವಸೇನೆ ಯಾವುದೇ ಕಾರಣಕ್ಕೂ ಬೇರ್ಪಡಲು ಸಾಧ್ಯವಿಲ್ಲ, 'ಹಮ್​​ ಸಾಥ್​ ಸಾಥ್​ ಹೈ' ಎಂದು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಮುಂದಿನ 48 ಗಂಟೆಗಳಲ್ಲಿ ಸರ್ಕಾರ ರಚನೆಯಾಗಲಿದೆ ಎಂದಿರುವ ಬಿಜೆಪಿ ಮುಖಂಡ ರೈತರಿಗಾಗಿ ಸಿಹಿಸುದ್ದಿ​ ಹೊರಬೀಳಲಿದೆ ಎಂಬ ಮಾತನ್ನೂ ಬಹಿರಂಗಪಡಿಸಿದ್ದಾರೆ.

ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್ ಪ್ರತಿಕ್ರಿಯಿಸಿದ್ದು​, ಬಿಜೆಪಿ-ಶಿವಸೇನೆ ಸರ್ಕಾರ ರಚನೆಗೆ ಜನಾದೇಶ ಸಿಕ್ಕಿದೆ. ಅದರಂತೆ ಅವರೇ ಸರ್ಕಾರ ರಚನೆ ಮಾಡಲಿ ಎಂಬ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

ಈ ನಡುವೆ, ಕಾಂಗ್ರೆಸ್​ನ ಹಿರಿಯ ನಾಯಕ ಅಹ್ಮದ್​ ಪಟೇಲ್​ ಹಾಗೂ ಕೇಂದ್ರ ಸಚಿವ ನಿತಿನ್​ ಗಡ್ಕರಿ ಭೇಟಿ ಸಹ ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದ ಕಾರ್ಯಾವಧಿ ನಾಳೆ ಕೊನೆಗೊಳ್ಳುತ್ತಿರುವ ಕಾರಣ ಹೊಸ ಸರ್ಕಾರ ರಚನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಒಟ್ಟು 288 ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 105 ಕ್ಷೇತ್ರ, ಶಿವಸೇನೆ 56, ಕಾಂಗ್ರೆಸ್​ 44 ಹಾಗೂ ಎನ್​ಸಿಪಿ 54 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು.

Intro:Body:

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಕನ್ಫರ್ಮ್​... ಮುಂದಿನ 48 ಗಂಟೆಯಲ್ಲಿ ಸಿಹಿ ಸುದ್ದಿ! 

ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಅನಿಶ್ಚಿತತೆ ಮುಂದುವರಿದಿದೆ. ಹೀಗಾಗಿ ಇಲ್ಲಿಯವರೆಗೂ ಅದಕ್ಕೆ ಯಾವುದೇ ಪಕ್ಷಗಳ ನಡುವೆ ಒಮ್ಮತದ ಅಭಿಪ್ರಾಯ ಮೂಡಿ ಬಂದಿಲ್ಲ. 

ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ಮುಖಂಡ ಸುಧೀರ್​ ಮುಂಗಂತಿವಾರ್​​, ಬಿಜೆಪಿ-ಶಿವಸೇನೆ ಯಾವುದೇ ಕಾರಣಕ್ಕೂ ಬೇರ್ಪಡಲು ಸಾಧ್ಯವಿಲ್ಲ ಎಂದಿದ್ದು, ಹಮ್​​ ಸಾಥ್​ ಸಾಥ್​ ಹೈ ಎಂದಿದ್ದಾರೆ. 

ಮುಂದಿನ 48 ಗಂಟೆಗಳಲ್ಲಿ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತ ಎಂದಿರುವ ಬಿಜೆಪಿ ಮುಖಂಡ, ರೈತರಿಗಾಗಿ ಗುಡ್​ನ್ಯೂಸ್​ ಹೊರಬೀಳಲಿದೆ ಎಂಬ ಮಾತನ್ನು ಸಹ ಬಹಿರಂಗ ಪಡಿಸಿದ್ದಾರೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಬಿಜೆಪಿ-ಶಿವಸೇನೆ ಸರ್ಕಾರ ರಚನೆ ಮಾಡಲು ಜನಾದೇಶ ಸಿಕ್ಕಿದೆ. ಅದರಂತೆ ಅವರೇ ಸರ್ಕಾರ ರಚನೆ ಮಾಡಲಿ ಎಂದಿದ್ದಾರೆ. 

ಮತ್ತೊಂದು ಕಡೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಬಿಜೆಪಿ-ಶಿವಸೇನೆ ನಡುವೆ ಬಿಕ್ಕಟ್ಟು ಸೃಷ್ಠಿಯಾಗುತ್ತಿದ್ದಂತೆ ಕಾಂಗ್ರೆಸ್​ನ ಹಿರಿಯ ನಾಯಕ ಅಹ್ಮದ್​ ಪಟೇಲ್​ ಹಾಗೂ ಕೇಂದ್ರ ಸಚಿವ ನಿತಿನ್​ ಗಡ್ಕರಿ ಭೇಟಿ ಸಹ ಕುತೂಹಲಕ್ಕೆ ಕಾರಣವಾಗಿತ್ತು. 

288 ವಿಧಾನಸಭೆ ಕ್ಷೇತ್ರಗಳ ಮಹಾರಾಷ್ಟ್ರದಲ್ಲಿ ಬಿಜೆಪಿ 105 ಕ್ಷೇತ್ರ, ಶಿವಸೇನೆ 56, ಕಾಂಗ್ರೆಸ್​ 44 ಹಾಗೂ ಎನ್​ಸಿಪಿ 54 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.