ಗುವಾಹಟಿ: ಅಸ್ಸಾಂ ರಾಜ್ಯದಲ್ಲಿರುವ ಜಗದ್ವಿಖ್ಯಾತ ಕಮಾಕ್ಯ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ 'ದಿಯೋಧಾನಿ' ಉತ್ಸವಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.
ದಿಯೋಧಾನಿ ಉತ್ಸವದಲ್ಲಿ ದೇವಾಲಯದ ತುಂಬೆಲ್ಲಾ ಡೋಲು ಚೆಂಡೆಯ ಸದ್ದು ಹಾಗೂ ಪುರೋಹಿತರ ಮಂತ್ರಗಳೇ ಮರ್ದನಿಸುತ್ತಿರುತ್ತದೆ. ಈ ದೇಗುಲವು ಗುವಾಹಟಿಯ ನೀಲಾಚಲ್ ಬೆಟ್ಟ ಪ್ರದೇಶದಲ್ಲಿದ್ದು ಶಕ್ತಿ ದೇವತೆಯ ಆರಾಧನಾ ಸ್ಥಳವಾಗಿದೆ. ಸರ್ಪಗಳ ದೇವತೆಯಾಗಿರುವ ಕಮಾಕ್ಯ ದೇವಿಯನ್ನು ಶಿವನ ಪತ್ನಿ ಎಂದು ಸ್ಥಳೀಯ ಜನ ನಂಬಿ ಇಲ್ಲಿ ಪೂಜೆ ಮಾಡುತ್ತಾರೆ. ದೇವಿಯೂ ತನ್ನ ಭಕ್ತರ ಇಷ್ಟಾರ್ಥಗಳೆಲ್ಲವನ್ನೂ ಈಡೇರಿಸುತ್ತಾಳೆ ಎಂಬ ಪ್ರತೀತಿ ಇದ್ದು, ಪ್ರತಿ ವರ್ಷವೂ ಭಕ್ತರ ಸಂಖ್ಯೆ ಇಲ್ಲಿ ಹೆಚ್ಚುತ್ತಲೆ ಇದೆ.