ಪಾವೊಂಟಾ ಸಾಹಿಬ್ (ಹಿಮಾಚಲ ಪ್ರದೇಶ): ಕೊರೊನಾ ವೈರಸ್ ಮತ್ತು ಹೆಚ್ಚುತ್ತಿರುವ ಶಾಖದ ಮಧ್ಯೆಯೇ ನವಯುವಕ್ ಮಂಡಲ್ ಏಕ್ತಾದ ಯುವಕರು ಅದ್ಭುತ ಪ್ರಾಜೆಕ್ಟ್ವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಯುವಕರು ಕಾಡು ಪ್ರಾಣಿ-ಪಕ್ಷಿಗಳಿಗಾಗಿ ಕುಡಿಯುವ ನೀರಿನ ಸೌಲಭ್ಯವನ್ನು ನಿರ್ವಹಿಸಲು ಕಾಡಿನಲ್ಲಿ ನೀರಿನ ಕೊಳಗಳನ್ನು ನಿರ್ಮಿಸುವ, ದುರಸ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ.
ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಿ ಮಾನವರು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳೂ ಬಿಸಿಲಿನ ಝಳಕ್ಕೆ ತುತ್ತಾಗುತ್ತವೆ. ಎಷ್ಟೋಬಾರಿ ನೀರಿನ ಕೊರತೆಯಿಂದಾಗಿ ಪ್ರಾಣಿ-ಪಕ್ಷಿಗಳು ಸಾಯುತ್ತವೆ. ಈ ಹಿನ್ನೆಲೆ ಅವುಗಳ ಬಾಯಾರಿಕೆ ನಿವಾರಿಸಲು ಪಾವೊಂಟಾ ಸಾಹಿಬ್‌ನ ಅಪ್ಪರ್ ಭಗನಿ ಯುವಕರು ಒಗ್ಗಟ್ಟಿನಿಂದ ಕೂಡಿ ದಟ್ಟ ಕಾಡಿನಲ್ಲಿದ್ದ ಕೊಳವನ್ನು ದುರಸ್ತಿ ಮಾಡಿದ್ದಾರೆ. ಜೊತೆಗೆ, ನೀರಾವರಿ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆ (ಐಪಿಹೆಚ್) ನೆರವಿನಿಂದ ಅದರಲ್ಲಿ ನೀರು ತುಂಬಿಸುವ ಕೆಲಸ ಮಾಡಿವೆ.
ಲಾಕ್ಡೌನ್ ಹಿನ್ನೆಲೆ ಸರ್ಕಾರ ಯುವಕರಿಗೆ ಕೇವಲ 3 ಗಂಟೆಗಳ ಸಮಯವನ್ನು ನೀಡಿತ್ತು. ಯುವಕರು ಕೂಡ ಈ ಸಮಯದ ಚೌಕಟ್ಟಿನಲ್ಲಿ ಟ್ಯಾಂಕ್ ದುರಸ್ತಿ ಮಾಡಿದ್ದು, ಐಪಿಎಚ್ ಯೋಜನೆಯ ಮೂಲಕ ಪ್ರತಿದಿನ ಕೊಳವನ್ನು ಶುದ್ಧ ನೀರಿನಿಂದ ತುಂಬಿಸುತ್ತಿದ್ದಾರೆ. ಈ ಕೊಳವು ದಟ್ಟವಾದ ಅರಣ್ಯ ಪ್ರದೇಶದಲ್ಲಿದೆ. ಯುವಕರ ಈ ಸತ್ಕಾರ್ಯದಿಂದ ಮೂಕ ಪ್ರಾಣಿಗಳಿಗೆ ಸಹಾಯವಾಗಿದೆ ಎನ್ನುತ್ತಾರೆ ನವಯುವಕ್ ಮಂಡಲ್ ಏಕ್ತಾದ ಮುಖ್ಯಸ್ಥ ಮೊಹಬ್ಬತ್ ಅಲಿ.