ಹೈದರಾಬಾದ್ : ಬಿಸಿ ನೀರಿನ ಹಬೆಯನ್ನು ಉಸಿರಾಡುವ ಮೂಲಕ ಕೊರೊನಾ ವೈರಸ್‌ನ ದೂರವಿಡಬಹುದು ಎಂದು ಖ್ಯಾತ ಕ್ಯಾನ್ಸರ್ ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ. ಅಮೆರಿಕದ ಚಿಕಾಗೋನಲ್ಲಿರುವ ಸೇಂಟ್ ಕ್ಯಾಥರಿನ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಭರತ್ ಬರಾಯ್, ಹಬೆಯನ್ನು ಉಸಿರಾಡುವುದರಿಂದಾಗುವ ಆರೋಗ್ಯಕರ ಲಾಭಗಳನ್ನು ತಿಳಿಸಿದ್ದಾರೆ. ಅದರಲ್ಲೂ ಸೋಂಕು ಪೀಡಿತರ ಚಿಕಿತ್ಸೆಯಲ್ಲಿ ನಿರತರಾದವರಿಗೆ ಈ ಉಪಾಯ ಬಹಳ ಉಪಯುಕ್ತ ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಪೀಡಿತರಾಗಿದ್ದ ತಾವು ಕೆಲಸ ಮಾಡುವ ಆಸ್ಪತ್ರೆಯ ವೈದ್ಯರೊಬ್ಬರು ಹಬೆಯ ಉಸಿರಾಟದ ವಿಧಾನವನ್ನು ಅನುಸರಿಸುವ ಮೂಲಕ ಸಾಮಾನ್ಯಕ್ಕಿಂತ ಅರ್ಧ ಅವಧಿಯಲ್ಲಿಯೇ ಗುಣಮುಖರಾದರು. ಇಲ್ಲಿನ ಕೊರೊನಾ ಸೆಂಟರ್ನಲ್ಲಿ ಕೆಲಸ ಮಾಡುವ ವೈದ್ಯರು ಈಗ ಪ್ರತಿದಿನ ಹಬೆಯ ಉಸಿರಾಟದ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂದು ಡಾ. ಬರಾಯ್ ತಿಳಿಸಿದ್ದಾರೆ.
ಹಬೆಯ ಶಾಖದಿಂದ ಶ್ವಾಸಕೋಶ, ಗಂಟಲು ಹಾಗೂ ಬಾಯಿಯಲ್ಲಿನ ಉಷ್ಣಾಂಶ ಹೆಚ್ಚಾಗುವುದರಿಂದ ಒಂದು ವೇಳೆ ವೈರಸ್ ಇದ್ದರೂ ಅದು ನಿಷ್ಕ್ರಿಯವಾಗುತ್ತದೆ. ವೈರಸ್ಗಳು ಪ್ರಥಮವಾಗಿ ಮಾನವ ದೇಹದಲ್ಲಿ ಗಂಟಲಿನಲ್ಲಿ ಕುಳಿತುಕೊಳ್ಳುತ್ತವೆ. ಹೀಗಾಗಿ ಯಾರಾದರೂ ನಿಮ್ಮೆದುರಿಗೆ ಸೀನಿದರೆ ಮನೆಗೆ ಹೋದ ತಕ್ಷಣ ಮೊದಲು ಹಬೆಯ ಉಸಿರಾಟ ಮಾಡಬೇಕು. ಇದರಿಂದ ನೆಗಡಿ ಬರದಂತೆ ತಡೆಯಬಹುದು ಎಂದು ಡಾ. ಬರಾಯ್ ಸಲಹೆ ನೀಡಿದ್ದಾರೆ.
ನೆಗಡಿ ತಡೆಗಟ್ಟುವ ಸುಲಭ ಉಪಾಯಗಳು: ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹಬೆಯ ಉಸಿರಾಟ ಮಾಡಿ ಮತ್ತು ಉಗುರು ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಮುಕ್ಕಳಿಸಿ. ಕೋವಿಡ್-19 ಇಲ್ಲವಾದ ಮೇಲೂ ಈ ಕ್ರಮಗಳನ್ನು ಅನುಸರಿಸುತ್ತಿದ್ದರೆ ಒಟ್ಟಾರೆ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಬರಾಯ್ ಹೇಳಿದ್ದಾರೆ.