ಶಿಕ್ಷಣವೆಂದರೆ ಮಗುವನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನ. ದೇಹ, ಮಿದುಳು ಮತ್ತು ಚೈತನ್ಯ ಎಲ್ಲವನ್ನೂ ರೂಪಿಸುವುದೇ ಕಲಿಕೆಯ ಮೂಲ ಉದ್ದೇಶವೆಂದು ಮಹಾತ್ಮ ಗಾಂಧಿ ಪ್ರತಿಪಾದಿಸಿದ್ದರು.
ಸ್ವಾತಂತ್ರ್ಯದ ಬಳಿಕ ಭಾರತವು ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಅಂಶಗಳನ್ನು ಹೆಚ್ಚಾಗಿ ಆಂಗ್ಲ ಭಾಷೆಗೆ ಒಳಪಡಿಸಿತು. ಪ್ರಸ್ತುತ ದಿನಗಳಲ್ಲಿ ವ್ಯಾಪಾರೀಕರಣದ ಸರಕಾಗಿರುವ ಶಿಕ್ಷಣವನ್ನು ಮಹಾತ್ಮ ಗಾಂಧಿಯವರ ಆಲೋಚನೆಗಳ ಮೂಲಕ ಮರುಪರಿಶೀಲಿಸುವ ಅಗತ್ಯವಿದೆ.
ಪಾಶ್ಚಿಮಾತ್ಯ ಶಿಕ್ಷಣ, ಅದರಲ್ಲೂ ವಿಶೇಷವಾಗಿ ಇಂಗ್ಲಿಷ್ ಶಿಕ್ಷಣದ ವಿಮರ್ಶೆಯನ್ನು ಆಧರಿಸಿ ಅವರು ಸೆವಾಗ್ರಾಮ್‌ನಲ್ಲಿ ಕೆಲವು ಪ್ರಯೋಗಗಳನ್ನು ನಡೆಸಿದ್ದರು. ಪಾಶ್ಚಿಮಾತ್ಯ ‘ನಾಗರಿಕತೆಯ’ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣದ ಬಗ್ಗೆ ಭಾರತೀಯ ವಿಧಾನದಲ್ಲಿ ಬದಲಾವಣೆಗಳನ್ನು ಸೂಚಿಸಲು ಅವರು ಬಯಸಿದ್ದರು.
ಸ್ವಾತಂತ್ರ್ಯೋತ್ತರ ಶಿಕ್ಷಣದ ಮಾದರಿಯ ಬಗ್ಗೆ ಗಾಂಧಿ ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದಾಗಿನಿಂದ ಸಮಾಜದ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪಾಶ್ಚಿಮಾತ್ಯರು ಕೂಡ ಭಾರತೀಯ ಮೌಲ್ಯಯುತ ವ್ಯವಸ್ಥೆಯನ್ನು ಪ್ರಶಂಸಿಸಲು ಆರಂಭಿಸಿರು. ಆದರೆ, ಎಷ್ಟು ಭಾರತೀಯರು ಶಿಕ್ಷಣವನ್ನು ವ್ಯಕ್ತಿತ್ವ ರೂಪಿಸುವ ಸಾಧನವಾಗಿ ಪರಿಗಣಿಸುತ್ತಿದ್ದಾರೆ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.
'ನಯಾ ತಾಲಿಮ್' ಅಥವಾ ಹೊಸ ಶಿಕ್ಷಣ
ನಯಾ ತಾಲಿಮ್ ಎಂಬುದನ್ನು ಗಾಂಧಿ ತಮ್ಮ ಕರಕುಶಲ ವಸ್ತುಗಳ ಮೂಲಕ ಶಿಕ್ಷಣವನ್ನು ಜನಪ್ರಿಯತೆಗೆ ತರಲು ನಿರ್ಧರಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಅವರು ಅನುಭವಿಸಿದ್ದ ನೋವು ಅವರ ಮುಂದಿನ ರಾಜಕೀಯ ಹಾದಿಯ ದೃಷ್ಟಿಕೋನವನ್ನೇ ಬದಲಿಸಿದ್ದವು. ತಮ್ಮ ಹೋರಾಟದಲ್ಲಿ ಶಿಕ್ಷಣ ವಹಿಸಿದ್ದ ಪಾತ್ರವನ್ನು ಕಂಡುಕೊಂಡರು. ಪಾಶ್ಚಿಮಾತ್ಯ ಶಿಕ್ಷಣದ ಬಗ್ಗೆ ಹಲವಾರು ವರ್ಷಗಳಿಂದ ಜಾಗೃತರಾಗಿದ್ದು, ಮೂವತ್ತರ ದಶಕದ ಮಧ್ಯಭಾಗದಲ್ಲಿ ಅವರು ಅದನ್ನು ವಿರೋಧಿಸಿದ್ದರು. "ಈ ಶಿಕ್ಷಣ ಕೊಳೆತಂತ್ತಿದೆ" ಮತ್ತು "ಲಕ್ಷಾಂತರರ ಜನರಿಗೆ ಇಂಗ್ಲಿಷ್ ಜ್ಞಾನ''ವನ್ನು ನೀಡಿ ಅವರನ್ನು ಗುಲಾಮರನ್ನಾಗಿ ಮಾಡುತ್ತಿದೆ..." ಎಂದು ಬರೆದಿದ್ದರು. 'ಇಂಗ್ಲಿಷ್ ಶಿಕ್ಷಣ ಪಡೆಯುವ ಮೂಲಕ ನಾವು ನಮ್ಮ ರಾಷ್ಟ್ರವನ್ನು ಗುಲಾಮತ್ವಕ್ಕೆ ತಳ್ಳುತ್ತಿದ್ದೇವೆ' ಎಂದು ಆಂಗ್ಲ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಗಾಂಧೀಜಿಯವರು ಶಿಕ್ಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು 1937ರ ಜೂನ್ 31ರಂದು ‘ಹರಿಜನ’ ಲೇಖನ ಮೂಲಕ ವ್ಯಕ್ತಪಡಿಸಿದರು. ಅಂದು ಅವರು ಪ್ರತಿಪಾದಿಸಿದ್ದ ದೃಷ್ಟಿಕೋನಗಳು ಶೈಕ್ಷಣಿಕ ವಲಯದಲ್ಲಿ ವಿವಾದಗಳನ್ನು ಸೃಷ್ಟಿಸಿದ್ದವು. ಅಂತಿಮವಾಗಿ, ಗಾಂಧೀಜಿ ಅವರು 1937ರ ಅಕ್ಟೋಬರ್ 22 ಮತ್ತು 23ರಂದು ನಡೆದ ವಾರ್ಧಾ ಸಮ್ಮೇಳನದಲ್ಲಿ ತಜ್ಞರ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಏಳು ರಾಜ್ಯಗಳ ಶಿಕ್ಷಣ ಸಚಿವರು, ಪ್ರಖ್ಯಾತ ಶಿಕ್ಷಣ ತಜ್ಞರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದು, ಗಾಂಧೀಜಿಯವರು ಇದರ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿ ಪ್ರತಿಪಾದಿಸಿ ಶಿಕ್ಷಣದ ತತ್ವಗಳು:
1) ರಾಷ್ಟ್ರವ್ಯಾಪಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಬೇಕು. 2) ಬೋಧನೆಯ ಮಾಧ್ಯಮವು ಮಾತೃಭಾಷೆಯಲ್ಲಿರಬೇಕು 3) ಶಿಕ್ಷಣದ ಪ್ರಕ್ರಿಯೆ ಸ್ಥಳೀಯ ಸ್ಥಿತಿಗೆ ಸೂಕ್ತವಾದ ರೀತಿಯ ಕೈಪಿಡಿ ಮತ್ತು ಉತ್ಪಾದಕ ಕಾರ್ಯಗಳು ಒಳಗೊಂಡಿರಬೇಕು. 4) ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಸಂಭಾವನೆಯನ್ನು ಕ್ರಮೇಣ ಹೆಚ್ಚುವಂತೆ ಮಾಡಬೇಕು ಎಂದಿದ್ದರು.