ETV Bharat / bharat

ನೀವು ಬಾಯಿ ಚಪ್ಪರಿಸಿಕೊಂಡು ಜೇನು ಸವಿಯುತ್ತೀರಾ?... ಅದರಲ್ಲೆಲ್ಲ ಕಲಬೆರಕೆ ಇದೆ ಹುಷಾರ್​!! - ಕಲಬೆರಕೆ ಜೇನುತುಪ್ಪ ಮಾರಾಟ

ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಆಹಾರ ಸಂಶೋಧಕರು ಶುದ್ಧತೆಯನ್ನು ಪರೀಕ್ಷಿಸಲು ಭಾರತದಲ್ಲಿ 13 ಬ್ರಾಂಡ್ ಗಳನ್ನು ಆಯ್ಕೆ ಮಾಡಿಕೊಂಡಿತ್ತು. ಈ ವೇಳೆ ಪರೀಕ್ಷೆ ನಡೆಸಿದಾಗ ಶೇ 77 ರಷ್ಟು ಕಲಬೆರಕೆ ಆಗಿದೆ ಎಂದು ತಿಳಿದು ಬಂದಿದೆ.

honey-sold-by-major-brands-in-india-adulterated-with-sugar-syrup-cse
ಕಲಬೆರಕೆ ಜೇನು
author img

By

Published : Dec 2, 2020, 7:17 PM IST

ನವದೆಹಲಿ: ಭಾರತದ ಹಲವಾರು ಪ್ರಮುಖ ಕಂಪನಿಗಳು ಮಾರಾಟ ಮಾಡುವ ಜೇನುತುಪ್ಪವು ಸಕ್ಕರೆ ಪಾಕದೊಂದಿಗೆ ಕಲಬೆರಕೆಯಾಗಿದೆ ಎಂದು ಎನ್ವಿರಾನ್ಮೆಂಟ್ ವಾಚ್‌ಡಾಗ್ ಸಿಎಸ್‌ಇ (environment watchdog CSE) ಹೇಳಿಕೆ ನೀಡಿದೆ.

ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ಆಹಾರ ಸಂಶೋಧಕರು ಶುದ್ಧತೆಯನ್ನು ಪರೀಕ್ಷಿಸಲು ಭಾರತದಲ್ಲಿ 13 ಬ್ರಾಂಡ್ ಗಳನ್ನು ಆಯ್ಕೆ ಮಾಡಿಕೊಂಡಿತ್ತು. ಇದರಿಂದ ತಿಳಿದುಬಂದಿದ್ದೇ ಶೇಕಡಾ 77 ರಷ್ಟು ಕಲಬೆರಕೆ ಆಗಿದೆ ಎಂದು. ಇನ್ನು ಪರಿಶೀಲಿಸಿದ 22 ಮಾದರಿಗಳಲ್ಲಿ ಕೇವಲ ಐದು ಪರೀಕ್ಷೆಗಳು ಮಾತ್ರ ಉತ್ತೀರ್ಣವಾಗಿವೆಯಂತೆ.

ಪ್ರಮುಖ ಬ್ರಾಂಡ್‌ಗಳಾದ ಡಾಬರ್, ಪತಂಜಲಿ, ಬೈದ್ಯನಾಥ್, ಝಂಡು, ಹಿಟ್ಕರಿ ಮತ್ತು ಆಪಿಸ್ ಹಿಮಾಲಯದ ಜೇನುತುಪ್ಪದ ಮಾದರಿಗಳು ಎನ್‌ಎಂಆರ್ (ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್) ಪರೀಕ್ಷೆಯಲ್ಲಿ ವಿಫಲವಾಗಿದೆ. ಈ ಸಂಬಂಧ ಕಂಪನಿಗಳನ್ನು ಪ್ರಶ್ನಿಸಿದರೆ ತಕ್ಷಣಕ್ಕೆ ಇವರಾರೂ ಉತ್ತರ ನೀಡಿಲ್ಲವಂತೆ. ಇನ್ನು ಈ ಬ್ರಾಂಡ್‌ಗಳ ಮಾದರಿಗಳನ್ನು ಮೊದಲು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಲ್ಲಿ (ಎನ್‌ಡಿಡಿಬಿ) ಜಾನುವಾರು ಮತ್ತು ಆಹಾರ ಕೇಂದ್ರದಲ್ಲಿ ಪರೀಕ್ಷಿಸಲಾಗಿದೆ.

ವಿಜ್ಞಾನ ಮತ್ತು ಪರಿಸರ ಕೇಂದ್ರದ ಪ್ರಕಾರ, ಎಲ್ಲ ಉನ್ನತ ಬ್ರಾಂಡ್‌ಗಳ ಶುದ್ಧತೆಯ ಪರೀಕ್ಷೆಗಳಲ್ಲಿ ನಿಖರ ಫಲಿತಾಂಶ ಕಂಡುಬಂದಿದೆಯಾದರೂ ಕೆಲವು ಸಣ್ಣ ಬ್ರ್ಯಾಂಡ್‌ಗಳಲ್ಲಿ ಈ ಪರೀಕ್ಷೆ ವಿಫಲವಾಗಿವೆ ಎಂದು ಸಂಸ್ಥೆ ತಿಳಿಸಿದೆ. ಇದೇ ಬ್ರಾಂಡ್​ಗಳನ್ನು ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ (ಎನ್‌ಎಂಆರ್) ಬಳಸಿ ಪರೀಕ್ಷಿಸಿದಾಗ ಹಲವಾರು ಬ್ರಾಂಡ್​ಗಳ ಕಲಬೆರಕೆ ಪತ್ತೆ ಹಚ್ಚುವಲ್ಲಿ ಸಾಧ್ಯವಾಗಲಿಲ್ಲ. ಇದರಲ್ಲಿ ಮೂರು ಬ್ರಾಂಡ್​ಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಯಿತು ಎಂದಿದೆ.

ನಾವು ಇದರಲ್ಲಿ ಕಂಡುಕೊಂಡಿದ್ದು ಆಘಾತಕಾರಿ ವಿಷಯವಾದರೂ. ಕಲಬೆರಕೆಯ ವ್ಯವಹಾರವು ಹೇಗೆ ವಿಕಸನಗೊಂಡಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಕಲಬೆರಕೆ ಕಂಡು ಹಿಡಿಯುವುದು ಕಷ್ಟಕರವಾಗಿದೆ. ಯಾಕೆಂದರೆ, ಸಕ್ಕರೆ ಪಾಕಗಳನ್ನು ಕಂಡುಹಿಡಿಯಲಾಗದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಸಿಎಸ್‌ಇಯ ಆಹಾರ ಸುರಕ್ಷತೆ ಮತ್ತು ಜೀವಾಣು ತಂಡದ ಕಾರ್ಯಕ್ರಮದ ನಿರ್ದೇಶಕ ಅಮಿತ್ ಖುರಾನಾ ಮಾಹಿತಿ ನೀಡಿದ್ದಾರೆ.

ಸಿಎಸ್‌ಇ ಮಹಾನಿರ್ದೇಶಕ ಸುನೀತಾ ನರೈನ್ ಅವರು ಹೆಚ್ಚಿನದನ್ನು ಕಂಡುಹಿಡಿಯಲು ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. 50 - 80 ರಷ್ಟು ಜೇನುತುಪ್ಪವನ್ನು ಸಿರಪ್ ನೊಂದಿಗೆ ಕಲಬೆರಕೆ ಮಾಡಿದರೂ, ಅದು ಎಲ್ಲಾ ನಿಗದಿತ ಪರೀಕ್ಷೆಗಳಲ್ಲಿ ಪಾಸಾಗಲಿದೆಯಂತೆ ಈ ಬಗ್ಗೆ ಚೀನಾದ ಕಂಪನಿಗಳು ಸಿಎಸ್‌ಇಗೆ ತಿಳಿಸಿವೆ. ನಾವು ಜೇನುತುಪ್ಪವನ್ನು ಸಾಮಾನ್ಯವಾಗಿ ಸೇವಿಸುತ್ತೇವೆ. ಅದರಲ್ಲೂ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದು ಹೆಚ್ಚು ಪರಿಣಾಮಕಾರಿ. ಆದರೆ, ಕಲಬೆರಕೆ ಮಾಡಿದ ಜೇನುತುಪ್ಪವು ನಮಗೆ ಉತ್ತಮವೆನಿಸುವುದಿಲ್ಲ. ಇದು ನಿಜಕ್ಕೂ ನಮ್ಮನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಮತ್ತೊಂದೆಡೆ ಜೇನುನೊಣಗಳ ನಷ್ಟವು ನಮ್ಮ ಆಹಾರ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗುತ್ತದೆ ಎಂಬುದು ನಮಗೆ ಕಳವಳಕಾರಿಯಾಗಿದೆ. ಜೇನುನೊಣಗಳು ಪರಾಗಸ್ಪರ್ಶಕ್ಕೆ ನಿರ್ಣಾಯಕ ಪಾತ್ರ ವಹಿಸುತ್ತವೆ. ಕಲಬೆರಕೆ ಮಾಡಿದರೆ ನಮ್ಮ ಆರೋಗ್ಯ ಮಾತ್ರವಲ್ಲ ನಮ್ಮ ಕೃಷಿಯ ಉತ್ಪಾದಕತೆಯನ್ನೂ ಕಳೆದುಕೊಳ್ಳುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾವು ಸಾರ್ವಜನಿಕ ಪರೀಕ್ಷೆಯ ಮೂಲಕ ಭಾರತದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದರಿಂದ ಕಂಪನಿಗಳು ಎಚ್ಚರಗೊಳ್ಳುತ್ತವೆ. ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಸರ್ಕಾರವು ಮಾದರಿಗಳನ್ನು ಪರೀಕ್ಷಿಸಬೇಕು ಮತ್ತು ಈ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು ಇದರಿಂದ ಗ್ರಾಹಕರು ಕೂಡ ಜಾಗೃತರಾಗುತ್ತಾರೆ ಮತ್ತು ನಮ್ಮ ಆರೋಗ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬಹುದು ಎಂದು ನರೈನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.