ETV Bharat / bharat

ಅವರು ನಮ್ಮನ್ನು ಕೊಲೆ ಮಾಡಲು ಬಯಸಿದ್ದಾರೆ: ಫರೂಕ್​ ಅಬ್ದುಲ್ಲಾ ಆಕ್ರೋಶ..!

ಅವರು ನಮ್ಮನ್ನು ಕೊಲೆ ಮಾಡಲು ಬಯಸಿದ್ದಾರೆ ಎಂದು ನ್ಯಾಷನಲ್​ ಕಾನ್ಫರೆನ್ಸ್​ ಮುಖಂಡ ಫರೂಕ್​ ಅಬ್ದುಲ್ಲಾ ಆಕ್ರೋಶ ಹೊರಹಾಕಿದ್ದಾರೆ.

author img

By

Published : Aug 6, 2019, 4:54 PM IST

ಫರೂಕ್​ ಅಬ್ದುಲ್ಲಾ /ಅಮಿತ್​ ಶಾ

ಶ್ರೀನಗರ: ಗೃಹ ಬಂಧನದಲ್ಲಿ ಇರುವ ನ್ಯಾಷನಲ್​ ಕಾನ್ಫರೆನ್ಸ್​ ಮುಖಂಡ ಫರೂಕ್​ ಅಬ್ದುಲ್ಲಾ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ಕೇಂದ್ರ ಸರ್ಕಾರ ವಾಪಸ್​ ಪಡೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫರೂಕ್​ ಅಬ್ದುಲ್ಲಾ /Farooq Abdullah

ಕಾಶ್ಮೀರದ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಿರುವುದನ್ನೂ ಖಂಡಿಸಿದ್ದಾರೆ. 370 ರದ್ದು ಬಗ್ಗೆ ಮಾತನಾಡಿರುವ ಅವರು, ಶೀಘ್ರದಲ್ಲೇ ನಾವು ಹೊರಗೆ ಬರುತ್ತವೆ. ಮುಚ್ಚಿರುವ ಗೇಟ್​ಗಳು ಖುಲ್ಲಾ ಆಗಲಿವೆ. ನಮ್ಮ ಜನ ಮನೆಗಳಿಂದ ಹೊರ ಬರಲಿದ್ದಾರೆ. ಕೇಂದ್ರದ ನಿರ್ಧಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಕೋರ್ಟ್​​ಗೆ ಹೋಗುತ್ತೇವೆ ಎಂದು ಫರೂಕ್​ ಅಬ್ದುಲ್ಲಾ ಅಬ್ಬರಿಸಿದ್ದಾರೆ.

ನಾವ್ಯಾರೂ ಗನ್​​ಗಳನ್ನ ಇಟ್ಟುಕೊಂಡು ಓಡಾಡುತ್ತಿಲ್ಲ. ಗ್ರೆನೇಡ್​ ಎಸೆಯುವವರೂ ಅಲ್ಲ, ಕಲ್ಲುಗಳನ್ನೂ ತೂರುವವರಲ್ಲ. ನಮಗೆ ಶಾಂತಿಯುತ ಹೋರಾಟದಲ್ಲಿ ನಂಬಿಕೆ ಇದೆ. ಆದರೆ ಅವರು ಜೈಲಿನಲ್ಲಿಟ್ಟು ನಮ್ಮ ಕೊಲೆ ಮಾಡಲು ಮುಂದಾಗಿದ್ದಾರೆ. ನನ್ನ ಪುತ್ರನನ್ನು ಜೈಲಿನಲ್ಲಿ ಇಡಲಾಗಿದೆ.

ಇದೇ ವೇಳೆ, ಗೃಹ ಸಚಿವ ಅಮಿತ್​ ಶಾ ಸಂಸತ್​​ನಲ್ಲಿ ಸುಳ್ಳು ಹೇಳಿದ್ದಾರೆ. ನಾನು ಗೃಹ ಬಂಧನದಲ್ಲಿ ಇಲ್ಲ. ನಾನು ನನ್ನ ಮನೆಯಲ್ಲೇ ನನ್ನ ಇಚ್ಚೆಂತೆ ಇದ್ದೇನೆ ಎಂದೂ ಮಾಜಿ ಸಿಎಂ ಆರೋಪಿಸಿದ್ದಾರೆ.

ಅಬ್ದುಲ್ಲಾ ಆರೋಪಕ್ಕೆ ಶಾ ಪ್ರತ್ಯುತ್ತರ
ಹೌದು, ಫರೂಕ್​ ಅಬ್ದುಲ್ಲಾ ಗೃಹ ಬಂಧನ ವಿಧಿಸಲಾಗಿದೆ ಎಂದು ಯಾರು ಹೇಳಿದ್ದಾರೆ. ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ, ಅಬ್ದುಲ್ಲಾ ಅವರು ಅವರ ಮನೆಯಲ್ಲೇ ಇದ್ದಾರೆ. ಅವರನ್ನ ಗೃಹ ಬಂಧನದಲ್ಲಿ ಇಡಲಾಗಿಲ್ಲ. ಅವರ ಆರೋಗ್ಯವಾಗಿದ್ದಾರೆ ಎಂದು ಸದನದಲ್ಲಿ ಮಾಹಿತಿ ನೀಡಿದರು.ಇದು ನಾಲ್ಕನೇ ಸಲ ನಾನು ಹೇಳುತ್ತಿರುವುದು, ಇನ್ನು 10 ಸಲ ಹೇಳಲು ಸಿದ್ಧನಿರುವೆ. ಫರೂಖ್​ ಅಬ್ದುಲ್ಲಾ ಅವರನ್ನ ನಾವು ಗೃಹಬಂಧನದಲ್ಲಿ ಅಥವಾ ಬಂಧನ ಮಾಡಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲವಾದರೆ ಡಾಕ್ಟರ್​ ಹತ್ತಿರ ತೋರಿಸಿಕೊಳ್ಳಲಿ. ಅವರಿಗೆ ನಾವು ಯಾವುದೇ ರೀತಿಯ ಗೃಹ ಬಂಧನದಲ್ಲಿ ಹಾಕಿಲ್ಲ ಎಂದು ಅವರು ತಿಳಿಸಿದ್ದಾರೆ.

Intro:Body:

ಅವರು ನಮ್ಮನ್ನು ಕೊಲೆ ಮಾಡಲು ಬಯಸಿದ್ದಾರೆ: ಫರೂಕ್​ ಅಬ್ದುಲ್ಲಾ ಆಕ್ರೋಶ 

ಶ್ರೀನಗರ:   ಗೃಹ ಬಂಧನದಲ್ಲಿ ಇರುವ ನಾಷನಲ್​ ಕಾನ್ಫರೆನ್ಸ್​ ಮುಖಂಡ ಫರೂಕ್​ ಅಬ್ದುಲ್ಲಾ  ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ಕೇಂದ್ರ ಸರ್ಕಾರ ವಾಪಸ್​ ಪಡೆದಿರುವುದನ್ನು ಖಂಡಿಸಿದ್ದಾರೆ. 

ಕಾಶ್ಮೀರದ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಿರುವುದನ್ನೂ ಖಂಡಿಸಿದ್ದಾರೆ.   370 ರದ್ದು ಬಗ್ಗೆ ಮಾತನಾಡಿರುವ ಅವರು,  ಶೀಘ್ರದಲ್ಲೇ ನಾವು ಹೊರಗೆ ಬರುತ್ತವೆ. ಮುಚ್ಚಿರುವ ಗೇಟ್​ಗಳು ಖುಲ್ಲಾ ಆಗಲಿವೆ. ನಮ್ಮ ಜನ ಮನೆಗಳಿಂದ ಹೊರ ಬರಲಿದ್ದಾರೆ. ಕೇಂದ್ರದ ನಿರ್ಧಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಕೋರ್ಟ್​​ಗೆ ಹೋಗುತ್ತೇವೆ ಎಂದು ಫರೂಕ್​ ಅಬ್ದುಲ್ಲಾ ಅಬ್ಬರಿಸಿದ್ದಾರೆ.  

ನಾವ್ಯಾರೂ ಗನ್​​ಗಳನ್ನ ಇಟ್ಟುಕೊಂಡು ಓಡಾಡುತ್ತಿಲ್ಲ.  ಗ್ರೆನೇಡ್​ ಎಸೆಯುವವರೂ ಅಲ್ಲ, ಕಲ್ಲುಗಳನ್ನೂ ತೂರುವವರಲ್ಲ.   ನಮಗೆ ಶಾಂತಿಯುತ ಹೋರಾಟದಲ್ಲಿ ನಂಬಿಕೆ ಇದೆ.  ಆದರೆ ಅವರು ಜೈಲಿನಲ್ಲಿಟ್ಟು ನಮ್ಮ ಕೊಲೆ ಮಾಡಲು ಮುಂದಾಗಿದ್ದಾರೆ. ನನ್ನ ಪುತ್ರ ಜೈಲಿನಲ್ಲಿ ಇಡಲಾಗಿದೆ.

ಇದೇ ವೇಳೆ,  ಗೃಹ ಸಚಿವ ಅಮಿತ್​ ಶಾ ಸಂಸತ್​​ನಲ್ಲಿ ಸುಳ್ಳು ಹೇಳಿದ್ದಾರೆ. ನಾನು ಗೃಹ ಬಂಧನದಲ್ಲಿ ಇಲ್ಲ. ನಾನು ನನ್ನ ಮನೆಯಲ್ಲೇ ನನ್ನ ಇಚ್ಚೆಂತೆ ಇದ್ದೇನೆ ಎಂದೂ ಮಾಜಿ ಸಿಎಂ ಆರೋಪಿಸಿದ್ದಾರೆ.  

ಅಬ್ದುಲ್ಲಾ ಆರೋಪಕ್ಕೆ ಶಾ ಪ್ರತ್ಯುತ್ತರ

ಹೌದು ಫರೂಕ್​ ಅಬ್ದುಲ್ಲಾ ಗೃಹ ಬಂಧನ ವಿಧಿಸಲಾಗಿದೆ ಎಂದು ಯಾರು ಹೇಳಿದ್ದಾರೆ.  ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ, ಅಬ್ದುಲ್ಲಾ ಅವರು ಅವರ ಮನೆಯಲ್ಲೇ ಇದ್ದಾರೆ.  ಅವರನ್ನ ಗೃಹ ಬಂಧನದಲ್ಲಿ ಇಡಲಾಗಿಲ್ಲ.  ಅವರ ಆರೋಗ್ಯವಾಗಿದ್ದಾರೆ.  

-------- 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.