ಸಿಡ್ನಿ, ಆಸ್ಟ್ರೇಲಿಯಾ: ಜಗತ್ತನ್ನು ಆತಂಕಕ್ಕೆ ನೂಕಿರುವ ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದೆ. ಹಾಲಿವುಡ್ಗೂ ಈಗ ಈ ಮಾರಕ ರೋಗ ದಾಳಿಯಿಟ್ಟಿದೆ. ಹಾಲಿವುಡ್ ನಟನಾದ ಟಾಮ್ ಹ್ಯಾಂಕ್ಸ್ ಹಾಗೂ ಆತನ ಪತ್ನಿ ರೀಟಾ ಎಂಬುವವರ ಬಳಿ ಕೊರೊನಾ ದೃಢಪಟ್ಟಿದೆ. ಈ ಕುರಿತು ಟ್ವಿಟ್ ಮಾಡಿರುವ ಟಾಮ್ ಹ್ಯಾಂಕ್ಸ್ ನಾನು ಹಾಗೂ ನನ್ನ ಪತ್ನಿಯ ದೇಹದಲ್ಲಿ ಕೊರೊನಾ ಸೋಂಕಿರುವುದು ದೃಢವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಡಸ್ಟ್ ಬಿನ್ನಲ್ಲಿರುವ ಗ್ಲೌಸ್ ಚಿತ್ರವನ್ನು ಶೇರ್ ಮಾಡಿದ್ದು ನೀವು ಮುಂಜಾಗ್ರತೆಯಿಂದಿರಿ ಎಂದು ಸಲಹೆ ನೀಡಿದ್ದಾರೆ.
- — Tom Hanks (@tomhanks) March 12, 2020 " class="align-text-top noRightClick twitterSection" data="
— Tom Hanks (@tomhanks) March 12, 2020
">— Tom Hanks (@tomhanks) March 12, 2020
ಟಾಮ್ ಹ್ಯಾಂಕ್ಸ್ ಹಾಗೂ ಆತನ ಪತ್ನಿ ರೀಟಾ ಕ್ಯಾಲಿಫೋರ್ನಿಯಾದ ಹಾಲಿವುಡ್ನಲ್ಲಿ ನಡೆದ 92ನೇ ವಾರ್ಷಿಕ ಅಕಾಡಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಫೆಬ್ರವರಿ 9ರಂದು ನಡೆದ ಈ ಸಮಾರಂಭದಲ್ಲಿ ಕೊರೊನಾ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಟಾಮ್ ಹ್ಯಾಂಕ್ಸ್ ಅಮೆರಿಕನ್ ಫಿಲ್ಮ್ ಮೇಕರ್ ಆಗಿದ್ದು ಹಾಸ್ಯಚಿತ್ರಗಳಲ್ಲೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದ್ದರು. 1977ರಿಂದ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಬ್ಯಾಚುಲರ್ ಪಾರ್ಟಿ, ಬಿಗ್, ಟರ್ನರ್ ಅಂಡ್ ಹೂಚ್, ಸ್ಲೀಪ್ಲೆಸ್ ಇನ್ ಸೀಟೆಲ್, ಮುಂತಾದ ಚಿತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾರೆ.