ETV Bharat / bharat

ಸಂಸದೀಯ ಸಮಿತಿಗಳ ಪುನಾರಚನೆ: ಶಾಗೆ 8, ರಾಜನಾಥ್​ಗೆ ಎರಡೇ ಸಮಿತಿಗಳಲ್ಲಿ ಸ್ಥಾನ

author img

By

Published : Jun 6, 2019, 10:21 AM IST

ಕೇಂದ್ರ ಸರ್ಕಾರದ 8 ಪ್ರಧಾನ ಸಂಸದೀಯ ಸಮಿತಿಗಳಲ್ಲಿಯೂ ಅಮಿತ್ ಶಾ ಸ್ಥಾನ ಗಳಿಸಿದ್ದಾರೆ. ಸಂಸದೀಯ ವ್ಯವಹಾರ ಸಮಿತಿ ಹಾಗೂ ವಸತಿ ಸಮಿತಿಯ ಹೊರತಾಗಿ ಉಳಿದ 6 ಸಮಿತಿಗಳಲ್ಲಿ ಪ್ರಧಾನಿ ಮೋದಿ ಪ್ರತಿನಿಧಿಯಾಗಿದ್ದಾರೆ.

ಸಂಸದೀಯ ಸಮಿತಿ

ನವದೆಹಲಿ: ಆಡಳಿತದಲ್ಲಿ ಮತ್ತಷ್ಟು ದಕ್ಷತೆ ತರುವ ಉದ್ದೇಶದಿಂದ ನಿನ್ನೆ ಕೇಂದ್ರ ಸರ್ಕಾರ ಮರು ರಚನೆ ಮಾಡಿದ 8 ಪ್ರಧಾನ ಸಂಸದೀಯ ಸಮಿತಿಗಳಲ್ಲಿಯೂ ಅಮಿತ್ ಶಾ ಸ್ಥಾನ ಗಳಿಸಿದ್ದಾರೆ. ಸಂಸದೀಯ ವ್ಯವಹಾರ ಸಮಿತಿ ಹಾಗೂ ವಸತಿ ಸಮಿತಿಯ ಹೊರತಾಗಿ ಉಳಿದ 6 ಸಮಿತಿಗಳಲ್ಲಿ ಪ್ರಧಾನಿ ಮೋದಿ ಪ್ರತಿನಿಧಿಯಾಗಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ವಸತಿ, ಹಣಕಾಸು ವ್ಯವಹಾರ, ಸಂಸದೀಯ ವ್ಯವಹಾರ, ರಾಜಕೀಯ ವ್ಯವಹಾರ, ಭದ್ರತೆ, ಹೂಡಿಕೆ ಮತ್ತು ಬೆಳವಣಿಗೆ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ 6 ಸಮಿತಿಗಳಲ್ಲಿ ಇದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರಿಗೆ ಭದ್ರತೆ ಹಾಗೂ ಹಣಕಾಸು ವ್ಯವಹಾರ ಸಮಿತಿಗಳಲ್ಲಿ ಸ್ಥಾನ ನೀಡಲಾಗಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಸತಿ, ಹಣಕಾಸು, ರಾಜಕೀಯ, ಹೂಡಿಕೆ ಮತ್ತು ಬೆಳವಣಿಗೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ​ಸಚಿವ ಧರ್ಮೇಂದ್ರ ಪ್ರಧಾನ್​ರಿಗೆ ಹಣಕಾಸು, ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿ ಸಮಿತಿಯಲ್ಲಿ ಅವಕಾಶ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಉದ್ಯೋಗ ಹಾಗೂ ಕೌಶಲ್ಯ ಸಮಿತಿಯಲ್ಲಿ ವಿಶೇಷ ಆಹ್ವಾನಿತರಾಗಿ ಮಾತ್ರ ಇದ್ದಾರೆ.

Intro:Body:

Shah

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.