ನಹಾನ್(ಹಿಮಾಚಲ ಪ್ರದೇಶ): ಹಿಮಾಚಲಪ್ರದೇಶ ವಿವಿಧ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಆಕರ್ಷಿತ ಪರ್ವತಗಳಿಗೆ ಹೆಸರುವಾಸಿಯಾಗಿದ್ದು, ನಾವು ತಿಳಿದುಕೊಳ್ಳಬೇಕಾದ ಇನ್ನೂ ಅನೇಕ ವಿಶೇಷಗಳಿವೆ.
ಹೌದು ನಹಾನ್ ಪ್ರದೇಶ ಇಂತಹ ಹೆಸರುವಾಸಿ ತಾಣಕ್ಕೆ ಉತ್ತಮ ಉದಾಹರಣೆ. ಇದು ರಾಜ್ಯದ ರಾಜಧಾನಿಯಿಂದ 133 ಕಿ.ಮೀ ದೂರದಲ್ಲಿದ್ದು, ಒಂದು ಶತಮಾನದಷ್ಟು ಹಳೆಯದಾದ ಆನೆ ಸಮಾಧಿಯೊಂದಿದೆ. ಇದುವೇ ನಹಾನ್ ನಿವಾಸಿಗಳ ನಂಬಿಕೆಯ ಸಂಕೇತ.
ಈ ಆನೆ ಸಮಾಧಿ ಧರ್ಮನಿಷ್ಠೆಯ ಕಥೆಯನ್ನು ಸಾರುತ್ತದೆ. ಈ ಮೊದಲು ನಹಾನ್ ಪ್ರದೇಶವನ್ನು ರಾಜ ಶಂಕರ್ ಪ್ರಕಾಶ್ ಆಳುತ್ತಿದ್ದು, ಆತನೊಂದಿಗೆ ಬ್ರಜರಾಜ್ ಎಂಬ ಹೆಸರಿನ ಒಂದು ಆನೆಯಿತ್ತು. ರಾಜ ಶಂಕರ್ ಪ್ರಕಾಶ್ ಎಲ್ಲರಿಗೂ ಪ್ರಿಯನಾಗಿದ್ದನು.
ಬ್ರಜರಾಜ್ ಆನೆ ಮರಣದ ನಂತರ, ಅದರ ನೆನಪಿಗಾಗಿ ರಾಜ ಒಂದು ಸಮಾಧಿ ನಿರ್ಮಿಸುತ್ತಾನೆ. ಬಳಿಕ ಅಲ್ಲಿನ ನಿವಾಸಿಗಳಿಗೆ ಅದು ಪೂಜಾ ಸ್ಥಳವಾಯಿತು. ಯಾವುದೇ ಜ್ವರ ಅಥವಾ ಚರ್ಮರೋಗ ನಿವಾರಣೆಗೆ ಜನ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿ ತಮ್ಮ ಸಮಸ್ಯೆ ನಿವಾರಿಸಿಕೊಳ್ಳುವುದುಂಟು.
ಜನ ಈ ಆನೆ ಸಮಾಧಿಗೆ ಭೇಟಿ ನೀಡಿ ಬೆಲ್ಲ ಅರ್ಪಿಸಿ ತಮ್ಮ ಭಕ್ತಿ ಸರ್ಪಿಸುವುದರ ಮೂಲಕ ಸಮಸ್ಯೆ ನಿವಾರಿಸಿಕೊಳ್ಳುತ್ತಿದ್ದಾರೆ. ಇದುವೇ ಅವರ ನಂಬಿಕೆಯ ಪ್ರತೀಕ.