ETV Bharat / bharat

27 ಕೀಟನಾಶಕಗಳನ್ನು ನಿಷೇಧಿಸಲು ಮುಂದಾದ ಸರ್ಕಾರ: ತಜ್ಞರು ಹೇಳುವುದೇನು? - ಕೃಷಿ ತಜ್ಞ ವಿಜಯ್ ಸರ್ದಾನಾ

66 ಕೀಟನಾಶಕಗಳ ಪೈಕಿ ಈಗ 27 ಕೀಟನಾಶಕಗಳನ್ನು ಸರ್ಕಾರ ಶಾರ್ಟ್ ‌ಲಿಸ್ಟ್ ಮಾಡಿದೆ. ಭಾರತದಲ್ಲಿ ಉತ್ಪಾದನೆಯಾಗುವ ಶೇಕಡಾ 80 ರಷ್ಟು ಕೀಟನಾಶಕಗಳು ಅಂದ್ರೆ 18,000 ಕೋಟಿ ರೂ. ಮೌಲ್ಯದ ಕೀಟನಾಶಕವನ್ನು ಅಮೆರಿಕಾ, ಜಪಾನ್ ಮತ್ತು ಬ್ರೆಜಿಲ್​ನಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ 27 ಕೀಟನಾಶಕಗಳನ್ನು ನಿಷೇಧಿಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

Here's what experts say about govt's proposal to ban 27 pesticides
27 ಕೀಟನಾಶಕಗಳನ್ನು ನಿಷೇಧಿಸಲು ಮುಂದಾದ ಸರ್ಕಾರ
author img

By

Published : May 22, 2020, 3:28 PM IST

ನವದೆಹಲಿ: ಕರಡು ಆದೇಶ ಹಿನ್ನೆಲೆ ಕೇಂದ್ರ ಸರ್ಕಾರವು 27 ಕೀಟನಾಶಕಗಳನ್ನು ನಿಷೇಧಿಸಲು ಮುಂದಾಗಿದೆ. ಈ ಕೀಟನಾಶಕಗಳನ್ನು ಭಾರತದಲ್ಲಿ ಮತ್ತು ಇತರ ಹಲವಾರು ದೇಶಗಳಲ್ಲಿ ಬೆಳೆಗಳಲ್ಲಿನ ಕೀಟಗಳು ಮತ್ತು ರೋಗಗಳನ್ನು ತಡೆಯಲು ಬಳಸಲಾಗುತ್ತಿದೆ.

66 ಕೀಟನಾಶಕಗಳ ಪೈಕಿ ಈಗ 27 ಕೀಟನಾಶಕಗಳನ್ನು ಸರ್ಕಾರ ಶಾರ್ಟ್‌ ಲಿಸ್ಟ್ ಮಾಡಿದೆ. ಭಾರತದಲ್ಲಿ ಉತ್ಪಾದನೆಯಾಗುವ ಶೇಕಡಾ 80 ರಷ್ಟು ಕೀಟನಾಶಕಗಳಲ್ಲಿ 18,000 ಕೋಟಿ ರೂ. ಮೌಲ್ಯದ ಕೀಟನಾಶಕವನ್ನು ಯುಎಸ್, ಜಪಾನ್ ಮತ್ತು ಬ್ರೆಜಿಲ್​ನಂತಹ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಒಂದೆಡೆ ಪ್ರಧಾನಿ ಈ ರಫ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಭಾರತೀಯ ಕೃಷಿಕ್ ಸಮಾಜದ ಅಧ್ಯಕ್ಷ ಕೃಷ್ಣ ವೀರ್ ಚೌಧರಿ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಭಾರತದ ರೈತರು ದ್ರಾಕ್ಷಿ ಮತ್ತು ಆಲೂಗಡ್ಡೆ ಮುಂತಾದ ಬೆಳೆಗಳಿಗೆ ಮ್ಯಾಂಕೋಜೆಬ್(Mancozeb) ಅನ್ನು ಬಳಸುತ್ತಾರೆ. ಅದೇ ರೀತಿ ಇತರೆ ರಾಷ್ಟ್ರಗಳು ಕೂಡ ಬೆಳೆಗಳನ್ನು ರಕ್ಷಿಸಲು ಇದನ್ನು ಬಳಸುತ್ತವೆ. ಆದಾಗ್ಯೂ, ಅಂತಹ ಉತ್ಪನ್ನಗಳ ಮೇಲೆ ನಿಷೇಧ ಹೇರುವ ಮೂಲಕ ನಾವು ಬೆಳೆಗಾರರನ್ನು ತೊಂದರೆಗೆ ಸಿಲುಕಿಸುತ್ತಿದ್ದೇವೆ ಎಂದಿದ್ದಾರೆ.

ಮತ್ತೊಂದು ಉತ್ಪನ್ನವೆಂದರೆ ಅಸೆಫೇಟ್ (acephate). ಇದು ಕಡಿಮೆ ಬೆಲೆಯ ಔಷಧವಾಗಿದೆ. ಕಳೆದ 30 ವರ್ಷಗಳಿಂದ ರೈತರು ಇದನ್ನು ಬಳಸುತ್ತಿದ್ದಾರೆ. ಕಿಲೋಗೆ 500 ರೂ. ವೆಚ್ಚ ತಗುಲುವ ಈ ಉತ್ಪನ್ನವನ್ನು ಭತ್ತ ಮತ್ತು ಹತ್ತಿ ಉತ್ಪಾದನೆಯಲ್ಲಿ ಬಳಸಲಾಗುತ್ತದ. ಕೊರೊನಾದಿಂದ ಪ್ರಪಂಚದಾದ್ಯಂತ ಹಾನಿಗೊಳಗಾಗುತ್ತಿರುವ ಸಮಯದಲ್ಲಿ ಕೀಟನಾಶಕ ನಿರ್ವಹಣಾ ಮಸೂದೆಯ ಮೂಲಕ ಸರ್ಕಾರವು ಹೊಸ ವೈರಸ್​ನ್ನು ಆಮದು ಮಾಡಿಕೊಳ್ಳಲು ಬಯಸಿದೆ ಎಂದು ಚೌಧರಿ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನು ಕೃಷಿ ತಜ್ಞ ವಿಜಯ್ ಸರ್ದಾನಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೀಟನಾಶಕ ಕೃಷಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸಮಸ್ಯೆಗಳು ಮತ್ತು ಸಲಹೆಗಳೇನಾದೂ ಇದ್ದರೆ ಉದ್ಯಮವು ಸರ್ಕಾರಕ್ಕೆ ತಿಳಿಸಬೇಕು ಎಂದು ಅವರು ಹೇಳಿದರು. ಪಾಶ್ಚಿಮಾತ್ಯ ದೇಶಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ತ್ಯಜಿಸಿದ್ದವು. ಆದರೆ, ನಮ್ಮ ದೇಶದಲ್ಲಿ ತಯಾರಾಗುತ್ತಿರುವ ಈ ಔಷಧ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ರಕ್ಷಣೆಗೆ ಬಂದಿತು. ಯುಎಸ್ ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರ ಕೂಡ ನಮ್ಮ ಸಹಾಯವನ್ನು ಕೇಳುವಂತಾಯಿತು ಎಂದು ಸರ್ದಾನಾ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಮಿಡತೆಗಳು ಬೆಳೆಗಳ ಮೇಲೆ ಹಾನಿಯನ್ನುಂಟು ಮಾಡಲು ಮುಂದಾದಾಗ ಕ್ಲೋರ್ಪಿರಿಫೊಸ್ (chlorpyrifos) ರಕ್ಷಣೆಗೆ ಬಂತು. ಆದಾಗ್ಯೂ, ಈ ಕೀಟನಾಶಕವನ್ನು ಈಗ ನಿಷೇಧಿತ ಉತ್ಪನ್ನಗಳಲ್ಲಿ ಪಟ್ಟಿ ಮಾಡಲಾಗಿದೆ. ಸರ್ಕಾರ ಎಚ್ಚರಿಕೆಯಿಂದ ವಿಶ್ಲೇಷಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಸರ್ದಾನಾ ಅಭಿಪ್ರಾಯಪಟ್ಟರು.

ಇನ್ನು, ಮೇ 14 ರ ಅಧಿಸೂಚನೆಯ ಪ್ರಕಾರ, ಕಂಪನಿಗಳು ತಮ್ಮ ಸಮಸ್ಯೆಗಳು, ಸಲಹೆಗಳನ್ನು ಮುಂದಿಡಲು 45 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಮೂಲಗಳ ಪ್ರಕಾರ, ಎಲ್ಲಾ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಬಹುದು ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.