ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಬೇಕು ಅಂತಲೇ ದಾಖಲೆ ಸಲ್ಲಿಸಲು ವಿಳಂಬ ಮಾಡುತ್ತಿದ್ದಾರೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ದಾಖಲೆಗಳು ಮತ್ತು ಸಾಕ್ಷಿಯನ್ನು ಕರೆಸಿಕೊಳ್ಳಬೇಕೆಂದು ಕೋರಿ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸಂಬಂಧಿತ ನಿಬಂಧನೆಗಳ ಅಡಿ ಸಲ್ಲಿಸಲಾಗಿಲ್ಲ ಎಂದು ಆರೋಪಿಸಿ ವಜಾಗೊಳಿಸಲು ಕೋರಿದ್ದಾರೆ.
ಪ್ರಸ್ತುತ ಸಲ್ಲಿಕೆಯಾಗಿರುವ ಅರ್ಜಿ ಸಂಪೂರ್ಣವಾಗಿ ಅಸ್ಪಷ್ಟವಾಗಿದೆ. ಹಾಗಾಗಿ ಪ್ರಕರಣದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದೇ ಕಾರಣದಿಂದಾಗಿ ವಿಚಾರಣೆಯು ವಿಳಂಬವಾಗುತ್ತಿದೆ ಎಂದು ಆರೋಪಿಗಳಿಗೆ ವಕೀಲರು ತಿಳಿಸಿದ್ದಾರೆ.
ಸಾಕ್ಷಿಗಳ ಪಟ್ಟಿಯನ್ನು ಮತ್ತು ಇತರ ನಿರ್ದಿಷ್ಟ ವಿವರಗಳೊಂದಿಗೆ ಸೂಕ್ತ ನಿಬಂಧನೆಯಡಿ ಅರ್ಜಿ ಸಲ್ಲಿಸುವುದು ಸ್ವಾಮಿ ಅವರ ಕರ್ತವ್ಯ. ಆದರೆ ಅವರು ಸರಿಯಾಗಿ ಸಲ್ಲಿಸಿಲ್ಲ ಎಂದು ವಕೀಲರು ಪುನರುಚ್ಚರಿಸಿದರು.
ಇದನ್ನೂ ಓದಿ: 'ಸಂಸ್ಕೃತಿಯ ಸೇತುವೆಯಾದ ಹಿಂದಿ ಭಾಷೆ ಉಳಿಸಿ': ನಮೋಗೆ ಕೊರಿಯಾ ವಿದ್ಯಾರ್ಥಿಗಳ ಮನವಿ
ಪ್ರಸ್ತುತ ಅರ್ಜಿಗೆ ಸಂಬಂಧಿತ ನಿಬಂಧನೆಗೆ ಅನುಗುಣವಾಗಿಲ್ಲದ ಕಾರಣ ಅರ್ಜಿ ವಜಾಗೊಳಿಸಲಾಗುವುದು, ಎಂದು ವಕೀಲರು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಚಿನ್ ಗುಪ್ತಾ ಅವರಿಗೆ ತಿಳಿಸಿದರು.
ದೂರುದಾರನು ಕಾನೂನಿನ ಪ್ರಕಾರ ಸಾಬೀತುಪಡಿಸಬೇಕಾದ ದಾಖಲೆಗಳನ್ನು ನೀಡುತ್ತಾನೆಯೇ ಅಥವಾ ತನ್ನ ಪ್ರಕರಣವನ್ನು ಸಾಬೀತುಪಡಿಸಲು ಸಾಕ್ಷಿಯನ್ನು ಕರೆಸಿಕೊಳ್ಳುತ್ತಾನೆಯೇ ಎಂಬುದು ಸರಿಯಾಗಿ ಸ್ಪಷ್ಟವಾಗಿಲ್ಲ. ಹಾಗಾಗಿ ನ್ಯಾಯಾಲಯವು ರೋವಿಂಗ್ ವಿಚಾರಣೆ ನಡೆಸುತ್ತಿಲ್ಲ. ಸಮನ್ಸ್ ಆದೇಶದಲ್ಲಿ ಆರೋಪವನ್ನು ದೃಢೀಕರಿಸಲು ಮಾತ್ರ ಸಾಕ್ಷ್ಯ ಕರೆಯಬಹುದು, ಎಂದು ನ್ಯಾಯಾಲಯ ತಿಳಿಸಿದೆ.
ಈ ಕುರಿತ ಹೆಚ್ಚಿನ ವಿಚಾರಣೆಯನ್ನು ನ್ಯಾಯಾಲಯವು ಜನವರಿ 12 ರಂದು ನಡೆಸಲಿದೆ.