ಗುಜರಾತ್: ಇಲ್ಲಿನ ವಡೋದರಾ, ಭರೂಚ್ ದಕ್ಷಿಣದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರೈಲು ಸಂಚಾರ ಹಾಗೂ ವಿಮಾನ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಬುಧವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ಕೆಲವು ಕಡೆಯಲ್ಲಿ ಎನ್ಡಿಆರ್ಎಫ್ ರಕ್ಷಣಾ ಕಾರ್ಯಕ್ಕಿಳಿದು ಹಲವರನ್ನು ಆಪತ್ತಿನಿಂದ ಪಾರು ಮಾಡಿತ್ತು. ಭಾರಿ ವರ್ಷಧಾರೆಯಿಂದ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆವೆ.
ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೆ ಸುರಿದ ಮಳೆಯ ಪರಿಣಾಮ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರತಿಕೂಲ ಹವಾಮಾನದಿಂದ ವಿಮಾನಗಳು ಸಹ ಹಾರಾಟ ನಡೆಸಿಲ್ಲ.
-
Gujarat: Water-logging in Vadodara due to heavy rainfall in city. pic.twitter.com/2zkojITYPn
— ANI (@ANI) July 31, 2019 " class="align-text-top noRightClick twitterSection" data="
">Gujarat: Water-logging in Vadodara due to heavy rainfall in city. pic.twitter.com/2zkojITYPn
— ANI (@ANI) July 31, 2019Gujarat: Water-logging in Vadodara due to heavy rainfall in city. pic.twitter.com/2zkojITYPn
— ANI (@ANI) July 31, 2019
ಮಳೆಯಿಂದಾದ ಅವಾಂತರವನ್ನು ನಿಭಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದು, ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಗುಜರಾತ್ನ ವಿವಿಧೆಡೆಗಳಲ್ಲಿ ಶನಿವಾರದ ತನಕ ಮಳೆ ಮುಂದುವರೆಯುವ ಸಾಧ್ಯತೆ ಇದೆ.