ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಕುಟುಂಬ ಕೊರೊನಾ ವೈರಸ್ನಿಂದ ಪಾರಾಗಿದ್ದು, ಅಭಿಷೇಕ್ ಬಚ್ಚನ್ ಐಸೋಲೇಷನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗಲೆಲ್ಲ ಸಿನಿಮಾ ಸೆಟ್ನಲ್ಲಿ ಇದ್ದಂತೆಯೇ ಸಕಾರಾತ್ಮವಾಗಿಯೇ ಮಾತನಾಡುತ್ತಾರೆ ಎಂದು ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಹೇಳಿದ್ದಾರೆ.
ಸದ್ಯಕ್ಕೆ ಅಭಿಷೇಕ್ ಬಚ್ಚನ್ ಅವರು ಆನಂದ್ ಪಂಡಿತ್ ನಿರ್ಮಾಪಕರಾಗಿ ಬಿಗ್ ಬುಲ್ ಚಿತ್ರದಲ್ಲಿ ನಟಿಸಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
- View this post on Instagram
Hospital day :26 Discharge plan: NO! 😡 Come on Bachchan, you can do it!! 💪🏽 #believe
">
ಇಡೀ ಸಿನಿಮಾ ಉದ್ಯಮ ಹಾಗೂ ಅವರ ಅಭಿಮಾನಿಗಳು ಅಭಿಷೇಕ್ ಗುಣಮುಖರಾಗಿ ಬರುವುದನ್ನೇ ಕಾಯುತ್ತಿದ್ದಾರೆ. ಅವರು ಶೀಘ್ರವಾಗಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಾರೆ ಎಂದು ನಿರ್ಮಾಪಕ ಆನಂದ್ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬುಲ್ ಸಿನಿಮಾ ಒಟಿಟಿ ಫ್ಲಾಟ್ಫಾರ್ಮ್ನಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಕೂಕಿ ಗುಲ್ಟಿ ನಿರ್ದೇಶಿಸಿದ್ದಾರೆ. ಈ ಚಿತ್ರ 1992ರ ಭಾರತೀಯ ಭದ್ರತಾ ಹಗರಣದ ಕತೆ ಆಧರಿಸಿದೆ.
ಬಚ್ಚನ್ ಕುಟುಂಬದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಹಾಗೂ ಆರಾಧ್ಯಾಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ಹಿಂದೆ ಅಭಿಷೇಕ್ ಹೊರತುಪಡಿಸಿ ಉಳಿದೆಲ್ಲರೂ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಈಗ ಸದ್ಯಕ್ಕೆ ಅಭಿಷೇಕ್ ಬಚ್ಚನ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.