ETV Bharat / bharat

ವಿಶಾಖಪಟ್ಟಣದಲ್ಲಿ ಹಲ್ಲೆಗೊಳಗಾದ ವೈದ್ಯರ ಹೇಳಿಕೆ ದಾಖಲಿಸುವಂತೆ ಹೈಕೋರ್ಟ್ ನಿರ್ದೇಶನ

ಪೊಲೀಸರಿಂದ ಹಲ್ಲೆಗೊಳಗಾದ ಸರ್ಕಾರಿ ವೈದ್ಯರ ಹೇಳಿಕೆಯನ್ನು, ಸರ್ಕಾರಿ ಆಸ್ಪತ್ರೆಗೆ ವೈಯಕ್ತಿಕವಾಗಿ ಭೇಟಿ ನೀಡಿ ದಾಖಲಿಸುವಂತೆ ಹೈಕೋರ್ಟ್ ಸೆಷನ್ಸ್ ನ್ಯಾಯಾಧೀಶರಿಗೆ ಸೂಚಿಸಿದೆ.

ವಿಶಾಖಪಟ್ಟಣಂನಲ್ಲಿ ಹಲ್ಲೆಗೊಳಗಾದ ವೈದ್ಯ
ವಿಶಾಖಪಟ್ಟಣಂನಲ್ಲಿ ಹಲ್ಲೆಗೊಳಗಾದ ವೈದ್ಯ
author img

By

Published : May 20, 2020, 5:20 PM IST

ಅಮರಾವತಿ (ಆಂಧ್ರಪ್ರದೇಶ): ಕಳೆದ ವಾರ ವಿಶಾಖಪಟ್ಟಣದಲ್ಲಿ ಪೊಲೀಸರಿಂದ ಹಲ್ಲೆಗೊಳಗಾದ ಸರ್ಕಾರಿ ವೈದ್ಯರ ಹೇಳಿಕೆಯನ್ನು ದಾಖಲಿಸುವಂತೆ ಆಂಧ್ರ ಪ್ರದೇಶ ಹೈಕೋರ್ಟ್ ವಿಶಾಖಪಟ್ಟಣಂ ಸೆಷನ್ಸ್ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದೆ.

ಡಾ. ಕೆ. ಸುಧಾಕರ್ ರಾವ್ ದಾಖಲಾಗಿರುವ ಸರ್ಕಾರಿ ಆಸ್ಪತ್ರೆಗೆ ವೈಯಕ್ತಿಕವಾಗಿ ಭೇಟಿ ನೀಡಿ ಅವರ ಹೇಳಿಕೆಯನ್ನು ದಾಖಲಿಸುವಂತೆ ಹೈಕೋರ್ಟ್ ಸೆಷನ್ಸ್ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತು. ವೈದ್ಯರ ಹೇಳಿಕೆಯನ್ನು ಗುರುವಾರ ಸಂಜೆ ವೇಳೆಗೆ ಸಲ್ಲಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಎನ್-95 ಮಾಸ್ಕ್​ ನೀಡಲು ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಎರಡು ತಿಂಗಳ ಹಿಂದೆ ಅಮಾನತುಗೊಂಡಿದ್ದ, ನರಸಿಪಟ್ನಂನ ಏರಿಯಾ ಆಸ್ಪತ್ರೆಯ ಸಿವಿಲ್ ಅಸಿಸ್ಟೆಂಟ್ ಸರ್ಜನ್ ಸುಧಾಕರ್ ರಾವ್ ಅವರನ್ನು ವಿಶಾಖಪಟ್ಟಣಂನಲ್ಲಿ ಪೊಲೀಸರು ಮೇ 16 ರಂದು ಬಂಧಿಸಿದ್ದರು.

ಶರ್ಟ್​ಲೆಸ್​ ಆಗಿ ಕಾಣಿಸಿಕೊಂಡಿದ್ದ ವೈದ್ಯರನ್ನು ಪೊಲೀಸರು ಮ್ಯಾನ್​ಹ್ಯಾಂಡ್ಲಿಂಗ್​ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವೈದ್ಯರನ್ನು ಎಳೆದುಕೊಂಡು ಆಟೋರಿಕ್ಷಾದಲ್ಲಿ ಕಟ್ಟಿಹಾಕಿದರು. ಅವರನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಅಸ್ವಸ್ಥರಾಗಿದ್ದ ವೈದ್ಯರನ್ನು ಮಾನಸಿಕ ಆರೋಗ್ಯಕ್ಕಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ತೀವ್ರ ಮತ್ತು ಅಸ್ಥಿರ ಮನೋರೋಗದ ಚಿಕಿತ್ಸೆಯಲ್ಲಿದ್ದರು.

ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್‌ನೊಂದಿಗೆ ವೈದ್ಯರು ಅಸಭ್ಯವಾಗಿ ವರ್ತಿಸಿದ್ದಾರೆ. ಮೊಬೈಲ್ ಫೋನ್ ಕಿತ್ತು ಅದನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆಟೋರಿಕ್ಷಾ ಚಾಲಕ ಮತ್ತು ಇತರರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ ಮತ್ತು ಟ್ರಾಫಿಕ್ ಜಾಮ್​ಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ವೈದ್ಯರು ತಮ್ಮ ಪ್ರಾಣಕ್ಕೆ ಅಪಾಯವನ್ನುಂಟು ಮಾಡಬಹುದಾಗಿರುವುದರಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರನ್ನು ಆಲ್ಕೋಹಾಲ್ ಪರೀಕ್ಷೆಗಾಗಿ ಕೆಜಿಎಚ್‌ಗೆ ವರ್ಗಾಯಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಪೋಲಿಸರು ವೈದ್ಯರ ಕೈಗಳನ್ನು ಅವರ ಹಿಂದೆ ಕಟ್ಟಿ, ಎಳೆದೊಯ್ಯುವ ವಿಡಿಯೋ ತುಣುಕುಗಳಿಗೆ ವಿರೋಧ ಪಕ್ಷಗಳು, ವೈದ್ಯರ ಸಂಘಗಳು ಮತ್ತು ದಲಿತ ಗುಂಪುಗಳ ಆಕ್ರೋಶಕ್ಕೆ ಕಾರಣವಾಯಿತು.

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರವು ವೈದ್ಯರಿಗೆ ಮಾಸ್ಕ್​ಗಳನ್ನು ಸರಬರಾಜು ಮಾಡದಿರುವ ಬಗ್ಗೆ ಟೀಕಿಸಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಂಡಿದೆ ಎಂದು ಪ್ರತಿಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದರು.

ಅರಿವಳಿಕೆ ತಜ್ಞ ಡಾ.ಸುಧಾಕರ್ ಅವರ ಜತೆ ಪೊಲೀಸರು ಅನುಚಿತವಾಗಿ ವರ್ತಿಸಿದ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಂಧ್ರಪ್ರದೇಶ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.