ETV Bharat / bharat

ಹಥ್ರಾಸ್ ಪ್ರಕರಣ: ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಸಿಬಿಐ ತಂಡ ಭೇಟಿ

author img

By

Published : Oct 19, 2020, 12:41 PM IST

ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ತಂಡ ಅಲಿಗಢದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಭೇಟಿ ನಿಡಿದೆ.

5-member CBI team reaches JN Medical College
ಹಥ್ರಾಸ್ ಅತ್ಯಾಚಾರ ಪ್ರಕರಣ

ಅಲಿಗಢ (ಉತ್ತರ ಪ್ರದೇಶ): ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಐದು ಸದಸ್ಯರ ಸಿಬಿಐ ತಂಡ ಸೋಮವಾರ ಅಲಿಗಢದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಭೇಟಿ ನಿಡಿದೆ.

ಘಟನೆ ನಡೆದ ನಂತರ ದಾಖಲಾದ ಹಥ್ರಾಸ್​ ಸಂತ್ರಸ್ತೆಗೆ ಚುಕಿತ್ಸೆ ನೀಡಿದ ವೈದ್ಯರನ್ನು ಸಿಬಿಐ ತಂಡ ಪ್ರಶ್ನಿಸಲಿದೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿದ ನಂತರ ಆಕೆಯನ್ನು ದೆಹಲಿಯ ಸಫ್ದರ್‌ಗಂಜ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಅಲಿಗಢ ಜಿಲ್ಲಾ ಜೈಲಿನಲ್ಲಿರುವ ನಾಲ್ವರು ಶಂಕಿತರ ವಿಚಾರಣೆ ನಡೆಸಲು ಸಿಬಿಐ ತಂಡ ನಿರ್ಧರಿಸಿದೆ. ಸಂತ್ರಸ್ತೆಯ ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ವಿಧಿ ವಿಜ್ಞಾನ ವರದಿಗಳೊಂದಿಗೆ ತನಿಖೆ ನಡೆಸಲು ಸಿಬಿಐ ತಂಡ ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.