ಚಂಡೀಗಢ: ಕ್ರೀಡಾ ಕ್ಷೇತ್ರ ಬಿಟ್ಟು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದ ಕುಸ್ತಿಪಟುಗಳಿಗೆ ಹರಿಯಾಣದ ಜನತೆ ಹೀನಾಯ ಸೋಲಿನ ರುಚಿ ತೋರಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮೂವರು ಕ್ರೀಡಾಪಟುಗಳ ಪೈಕಿ ಇಬ್ಬರು ಸೋಲು ಕಂಡಿದ್ದರೆ, ಮತ್ತೊಬ್ಬರು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಪಕ್ಷ ಸೇರಿಕೊಂಡು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಕುಸ್ತಿಪಟಗಳಾದ ಯೋಗೇಶ್ವರ್ ದತ್ 4840 ಮತಗಳಿಂದ ಪರಾಭವ ಹೊಂದಿದರೆ ಬಬಿತಾ ಪೋಗಟ್ 14,272 ವೋಟುಗಳಿಂದ ಹೀನಾಯ ಸೋಲು ಕಂಡಿದ್ದಾರೆ. ಇನ್ನು ಹಾಕಿಪಟು ಸಂದೀಪ ಸಿಂಗ್ ಮಾತ್ರ 5314 ಗೆಲುವಿನ ನಗೆ ಬೀರಿದ್ದಾರೆ.
ಬರೋಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕುಸ್ತಿಪಟು ಪದ್ಮಶ್ರೀ ಪುರಸ್ಕೃತ ಯೋಗೇಶ್ವರ್ ದತ್ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಾ ಹೂಡಾ ವಿರುದ್ದ, ಬಾದ್ರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಬಿತಾ ಪೋಗಟ್ ಪಕ್ಷೇತರ ಅಭ್ಯರ್ಥಿ ಸೋಮವೀರ್ ವಿರುದ್ದ ಸೋಲು ಕಂಡಿದ್ದಾರೆ. ಇದರ ಮಧ್ಯೆ ಬಿಜೆಪಿಯ ಅಭ್ಯರ್ಥಿ ಹಾಗೂ ಹಾಕಿ ಆಟಗಾರ ಸಂದೀಪ್ ಸಿಂಗ್ ಪೆಹೋವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮದೀಪ್ ಸಿಂಗ್ ವಿರುದ್ಧ ಗೆಲುವು ಕಂಡಿದ್ದಾರೆ.