ETV Bharat / bharat

ಹುಷಾರ್! ನಿಮ್ಮ ಆರೋಗ್ಯಕ್ಕೆ ಬಲು ಮಾರಕ ಚೀನಾ ವಸ್ತುಗಳು..

author img

By

Published : Jul 3, 2020, 7:10 PM IST

ಹಲವಾರು ಮನರಂಜನಾ ಫೀಚರ್​ಗಳನ್ನು ಹೊಂದಿರುವ ಅನೇಕ ಚೀನಿ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಕ್ಕಳಿಗೆ ಈ ಆಟಿಕೆಗಳೆಂದರೆ ಬಲು ಪ್ರೀತಿ. ಆದರೆ ಈ ಆಟಿಕೆಗಳಲ್ಲಿ ವಿಷಕಾರಿ ಕ್ಯಾಡ್ಮಿಯಂ ರಾಸಾಯನಿಕ ಇರುತ್ತದೆ! ಕ್ಯಾಡ್ಮಿಯಂ ರಾಸಾಯನಿಕವು ಕಿಡ್ನಿ, ಮೂಳೆಗಳು ಹಾಗೂ ಶ್ವಾಸಕೋಶಗಳ ಆರೋಗ್ಯಕ್ಕೆ ಮಾರಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಬಹಿರಂಗವಾಗಿದೆ. ಇನ್ನು ಈ ಅಗ್ಗದ ವಸ್ತುಗಳು ನಿಮ್ಮ ಹೃದಯದ ಆರೋಗ್ಯಕ್ಕೂ ಅಪಾಯ ತರಬಲ್ಲವು. ಜೊತೆಗೆ ಕ್ಯಾನ್ಸರ್​ ಉಚಿತವಾಗಿ ಸಿಗುತ್ತದೆ!

Harmful Effects Of Chinese Products On Human Body

ಕಡಿಮೆ ಬೆಲೆಯಲ್ಲಿ ಸಿಗುವ ಆದರೆ ಇತ್ತೀಚಿನ ಸೌಲಭ್ಯಗಳನ್ನು ಹೊಂದಿರುವ ವಸ್ತುಗಳು ಎಲ್ಲರಿಗೂ ಇಷ್ಟ. ಬಹುಶಃ ಇದೇ ಕಾರಣದಿಂದಲೇ ಚೀನಾ ವಸ್ತುಗಳು ಭಾರತದಲ್ಲಿ ಅಷ್ಟೊಂದು ಜನಪ್ರಿಯವಾದವೇ? ಅಕ್ಷರಶಃ ಹೌದು.. ಫೀಚರ್​ಗಳು ಹೆಚ್ಚು, ಬೆಲೆಯೂ ಕಡಿಮೆ ... ಇಷ್ಟು ಸಾಕಲ್ಲ, ವಸ್ತುವೊಂದು ಜನಪ್ರಿಯವಾಗಲು!

ಆದರೆ ಅಗ್ಗದ ಈ ಚೀನಾ ವಸ್ತುಗಳು ನಿಮ್ಮ ಶರೀರ ಹಾಗೂ ಆರೋಗ್ಯದ ಮೇಲೆ ಎಷ್ಟು ದುಷ್ಪರಿಣಾಮವನ್ನುಂಟು ಮಾಡುತ್ತಿವೆ ಎಂಬುದು ಮಾತ್ರ ನಿಮಗೆ ತಿಳಿದಿಲ್ಲ. ಅವುಗಳಿಂದ ನಿಮ್ಮ ಆರೋಗ್ಯದ ಮೇಲಾಗುತ್ತಿರುವ ಅಗಾಧ ದುಷ್ಪರಿಣಾಮಗಳು ತಿಳಿದಲ್ಲಿ ಖಂಡಿತವಾಗಲೂ ನಿಮಗೆ ಆತಂಕವಾಗುವುದು.

ಹಲವಾರು ಮನರಂಜನಾ ಫೀಚರ್​ಗಳನ್ನು ಹೊಂದಿರುವ ಅನೇಕ ಚೀನಿ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಕ್ಕಳಿಗೆ ಈ ಆಟಿಕೆಗಳೆಂದರೆ ಬಲು ಪ್ರೀತಿ. ಆದರೆ ಈ ಆಟಿಕೆಗಳಲ್ಲಿ ವಿಷಕಾರಿ ಕ್ಯಾಡ್ಮಿಯಂ ರಾಸಾಯನಿಕ ಇರುತ್ತದೆ! ಕ್ಯಾಡ್ಮಿಯಂ ರಾಸಾಯನಿಕವು ಕಿಡ್ನಿ, ಮೂಳೆಗಳು ಹಾಗೂ ಶ್ವಾಸಕೋಶಗಳ ಆರೋಗ್ಯಕ್ಕೆ ಮಾರಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಬಹಿರಂಗವಾಗಿದೆ. ಇನ್ನು ಈ ಅಗ್ಗದ ವಸ್ತುಗಳು ನಿಮ್ಮ ಹೃದಯದ ಆರೋಗ್ಯಕ್ಕೂ ಅಪಾಯ ತರಬಲ್ಲವು. ಜೊತೆಗೆ ಕ್ಯಾನ್ಸರ್​ ಉಚಿತವಾಗಿ ಸಿಗುತ್ತದೆ!

ದೆಹಲಿ ಎನ್​ಸಿಆರ್ ಹಾಗೂ ನವದೆಹಲಿ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಚೀನಾ ಆಟಿಕೆಗಳ ಮೇಲೆ ಕ್ವಾಲಿಟಿ ಕೌನ್ಸಿಲ್ ಆಫ್​ ಇಂಡಿಯಾ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿಗಳು ಬಹಿರಂಗವಾಗಿವೆ. ಶೇ 67 ರಷ್ಟು ಚೀನಾ ಅಮದು ಆಟಿಕೆಗಳು ಮಕ್ಕಳ ಬಳಕೆಗೆ ಯೋಗ್ಯವಲ್ಲ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಕಡಿಮೆ ದರದಲ್ಲಿ ಸಿಗುವ ಸೌಂದರ್ಯವರ್ಧಕ ಸಾಧನಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸಹ ಈ ಸಂದರ್ಭದಲ್ಲಿ ಮೂಡುವುದು ಸಹಜ. ಕಡಿಮೆ ಬೆಲೆಯ ಈ ಸೌಂದರ್ಯವರ್ಧಕ ವಸ್ತುಗಳ ಬಳಕೆ ಅವಧಿ ಕೇವಲ 6 ಅಥವಾ 12 ತಿಂಗಳು ಮಾತ್ರವೇ ಆಗಿರುತ್ತದೆ. ಇವುಗಳಲ್ಲಿ ಕಾರ್ಸಿನೊಜೆನಿಕ್ ಅಂಟು, ಪಿವಿಸಿ ಹಾಗೂ ಫಾರ್ಮಾಲ್ಡಿಹೈಡ್​ಗಳನ್ನು ಬಳಸಲಾಗಿರುವುದರಿಂದ ಇವುಗಳ ಎಕ್ಸ್​ಪೈರಿ ದಿನಾಂಕ ಕಡಿಮೆ ಅವಧಿಯದಾಗಿರುತ್ತದೆ. ದಿನಗಳೆದಂತೆ ಇವುಗಳಲ್ಲಿನ ರಾಸಾಯನಿಕಗಳು ಅಪಾಯಕಾರಿಯಾಗುತ್ತ ಹೋಗುವುದರಿಂದ ನಿಮ್ಮ ಆರೋಗ್ಯಕ್ಕೆ ಸಂಚಕಾರ ಖಂಡಿತ.

ಹಾಗೆಯೇ ಔಷಧ ಮಾರುಕಟ್ಟೆಯನ್ನು ಸಹ ಚೀನಾ ಬಹುತೇಕ ಆಕ್ರಮಿಸಿಕೊಂಡಿದೆ. ಸಾಂಪ್ರದಾಯಿಕ ಚೀನಿ ಔಷಧಗಳು ಇತ್ತೀಚೆಗೆ ಜಗತ್ತಿನಾದ್ಯಂತ ಭಾರಿ ಜನಪ್ರಿಯವಾಗುತ್ತಿವೆ. ಆದರೆ ಇವುಗಳ ಅಡ್ಡ ಪರಿಣಾಮಗಳ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲದಿರುವುದು ದುರ್ದೈವ.

ಬಾಯಲ್ಲಿ ನೀರೂರಿಸುವ ಚೀನಿ ಖಾದ್ಯಗಳ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಬಹುತೇಕ ಎಲ್ಲ ವಯೋಮಾನದವರಿಗೂ ಚೀನಿ ತಿಂಡಿಗಳು ಬಲು ಅಚ್ಚುಮೆಚ್ಚು. ಇವುಗಳಲ್ಲಿ ಬಳಸಲಾಗುವ ಅಜಿನೊಮೊಟೊ ಹಾಗೂ ಸೋಯಾ ಸಾಸ್​ಗಳು ದಂತಕ್ಷಯಕ್ಕೆ ಕಾರಣವಾಗುತ್ತವೆ. ಬಹುಕಾಲ ಅಜಿನೊಮೊಟೊ ಸೇವನೆಯಿಂದ ನರಮಂಡಲ ಹಾಗೂ ಮೆದುಳಿಗೆ ಹಾನಿಯಾಗಬಹುದು. ಅಧಿಕ ರಕ್ತದೊತ್ತಡ ಹಾಗೂ ತಲೆನೋವಿನ ಸಮಸ್ಯೆಗಳು ಸಹ ಉದ್ಭವಿಸಬಹುದು. ಜೊತೆಗೆ ಕೀಲು ನೋವು ಬಾಧೆ ಅನುಭವಿಸಬೇಕಾಗಬಹುದು ಹಾಗೂ ಕ್ಯಾನ್ಸರ್​ ಸಹ ಬರಬಹುದು.

ಚೀನಾ ವಸ್ತುಗಳ ಮೇಲಿನ ವ್ಯಾಮೋಹ ಆರೋಗ್ಯವನ್ನು ಹಾಳು ಮಾಡುವ ಜೊತೆಗೆ ನಮ್ಮ ಸಂಸ್ಕೃತಿ ಹಾಗೂ ಉತ್ತಮ ಜೀವನಶೈಲಿಗೂ ಕುತ್ತು ತಂದಿದೆ. ಈಗಲೂ ಸಮಯ ಮೀರಿಲ್ಲ. ಚೀನಾ ವಸ್ತುಗಳನ್ನು ಬಳಸುವ ಮುನ್ನ ಎಚ್ಚರದಿಂದಿರುವುದು ಕ್ಷೇಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.