ETV Bharat / bharat

ಹೊಸ ಯೋಜನೆಗೆ ಕೈ ಹಾಕಿದ ಹೆಚ್​ಎಎಲ್​​: ವಾಯುಸೇನೆಗೆ ಸೇರಲಿದೆ ಈ ಹೆಲಿಕಾಪ್ಟರ್​​​

ಹಿಂದೂಸ್ತಾನ್​​ ಏರೋನಾಟಿಕ್ಸ್​​ ಲಿಮಿಟೆಡ್​​ 10 ರಿಂದ 12 ಟನ್​ನಷ್ಟು ಶಸ್ತ್ರಾಸ್ತ್ರ ಹೊತ್ತೊಯ್ದು ದಾಳಿ ಮಾಡುವ ಹೆಲಿಕಾಪ್ಟರ್​​ನ್ನು ಉತ್ಪಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ.

author img

By

Published : Mar 1, 2020, 9:11 PM IST

HAL finalises plan to produce military helicopter
ಹೊಸದೊಂದು ಯೋಜನೆಗೆ ಕೈ ಹಾಕಿದ ಎಚ್​ಎಎಲ್

ದೆಹಲಿ: ಹಿಂದೂಸ್ತಾನ್​​ ಏರೋನಾಟಿಕ್ಸ್​​ ಲಿಮಿಟೆಡ್​​ 2027 ರ ವೇಳೆಗೆ 10 ರಿಂದ 12 ಟನ್​ನಷ್ಟು ಶಸ್ತ್ರಾಸ್ತ್ರ ಹೊತ್ತೊಯ್ದು ದಾಳಿ ಮಾಡುವ ಹೆಲಿಕಾಪ್ಟರ್​​ನ್ನು ಉತ್ಪಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ.

ಮುಂಬರುವ ವರ್ಷಗಳಲ್ಲಿ 4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವುದು ಈ ಮೆಗಾ ಯೋಜನೆಯ ಉದ್ದೇಶವೆಂದು ಹೆಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್​ ತಿಳಿಸಿದ್ದಾರೆ.

ಹೆಚ್‌ಎಎಲ್ ಹೆಲಿಕಾಪ್ಟರ್‌ನ ಪ್ರಾಥಮಿಕ ವಿನ್ಯಾಸವನ್ನು ಪೂರ್ಣಗೊಳಿಸಲಾಗಿದೆ. ಕನಿಷ್ಠ 500 ಘಟಕಗಳನ್ನು ಉತ್ಪಾದಿಸುವ ಮೊದಲ ಮೂಲ ಮಾದರಿಯೊಂದಿಗೆ 2023 ರ ವೇಳೆಗೆ ಸಿದ್ಧವಾಗಲಿದೆ ಎಂದು ಸಂದರ್ಶನವೊಂದರಲ್ಲಿ ಮಾಧವನ್ ತಿಳಿಸಿದ್ದಾರೆ.

"ನಾವು ಗಮನ ಹರಿಸುತ್ತಿರುವ ಒಂದು ಪ್ರಮುಖ ಯೋಜನೆಯೆಂದರೆ ಮಿ -17 ಫ್ಲೀಟ್ ಅನ್ನು ಬದಲಿಸಿ 10 ರಿಂದ 12 ಟನ್ ಅಷ್ಟು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದು ದಾಳಿ ಮಾಡಬಲ್ಲ ಹೆಲಿಕಾಪ್ಟರ್ ಉತ್ಪಾದಿಸುವುದು. ಇದು ಸುಮಾರು ನಾಲ್ಕು ಲಕ್ಷ ಕೋಟಿ ರೂ. ವೆಚ್ಚದ ಹೆಲಿಕಾಪ್ಟ್​​ರ್​ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದೆ.

ಹೆಲಿಕಾಪ್ಟರ್​​ನ ವಿನ್ಯಾಸಕ್ಕಾಗಿ ಮತ್ತು ಮೂಲ ಮಾದರಿಯನ್ನು ತಯಾರಿಸಲು ಸುಮಾರು 9,600 ಕೋಟಿ ರೂ.ವೆಚ್ಚವಾಗಲಿದೆ. ಇದನ್ನು ತಯಾರಿಸಲು 2020 ರಲ್ಲಿ ಅನುಮೋದನೆ ದೊರೆತಿದೆ. ನಾವು 2027 ರ ವೇಳೆಗೆ ಮೊದಲ ಚಾಪರ್ ತಯಾರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೇನಾ ತಜ್ಞರು ಈ ಯೋಜನೆಯನ್ನು ತೇಜಸ್ ಮಿಲಿಟರಿ ವಿಮಾನದ ಅಭಿವೃದ್ಧಿ ನಂತರ ಹೆಚ್‌ಎಎಲ್ ಮಾಡುತ್ತಿರುವ ದೊಡ್ಡ ಯೋಜನೆ ಇದು ಎಂದು ಬಣ್ಣಿಸಿದ್ದಾರೆ. ಈ ಹೆಲಿಕಾಪ್ಟರ್ ಅವಳಿ ಇಂಜಿನ್‌ಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಹಡಗು ಡೆಕ್ ಕಾರ್ಯಾಚರಣೆಗಾಗಿ ಬ್ಲೇಡ್ ಫೋಲ್ಡಿಂಗ್ ಆಯ್ಕೆಯನ್ನು ಹೊಂದಿರುತ್ತದೆ. ಇದನ್ನು ವಾಯು ದಾಳಿ, ವಾಯು ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಯುದ್ಧದ ಸಂದರ್ಭದಲ್ಲಿ ಬಳಸಬಹುದಾಗಿದೆ. ಚಾಪರ್ ಅತ್ಯಂತ ಉತ್ತಮವಾದ ಶಸ್ತ್ರಾಸ್ತ್ರಗಳ ಪ್ಯಾಕೇಜ್​​ನ್ನು ಸಹ ಹೊಂದಿರುತ್ತದೆ.

ಮಿ -17 ಹೆಲಿಕಾಪ್ಟರ್‌ಗಳು ಐಎಎಫ್‌ನ ಬೆನ್ನೆಲುಬಾಗಲಿದೆ ಮತ್ತು ಇವನ್ನು 2032 ರ ವೇಳೆಗೆ ವಾಯುಸೇನೆಯಿಂದ ಹೊರಹಾಕಲು ಯೋಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.