ಗುರುಗ್ರಾಮ್(ಅಸ್ಸೋಂ): ಅಪಾರ್ಟ್ಮೆಂಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಳ್ಳತನ ಮಾಡಿದ್ದಾಳೆಂಬ ಆರೋಪದ ಮೇಲೆ ಬಂಧನವಾಗಿದ್ದ ವೇಳೆ ಆಕೆಯ ಮೇಲೆ ಪೊಲೀಸರು ರಾಕ್ಷಸಿ ವರ್ತನೆ ತೋರಿರುವ ಘಟನೆ ಅಸ್ಸೋಂನ ಗುರುಗ್ರಾಮ್ನಲ್ಲಿ ನಡೆದಿದೆ.
30 ವರ್ಷದ ಮಹಿಳೆ ಮೇಲೆ ಕಳ್ಳತನದ ಆರೋಪ ಮಾಡಲಾಗಿದ್ದು, ಈ ವೇಳೆ ಬಂಧನ ಮಾಡಿರುವ ಪೊಲೀಸರು ಆಕೆಯನ್ನ ಬೆತ್ತಲೆಗೊಳಿಸಿ ಥಳಿಸಿದ್ದು, ಆಕೆಯ ಖಾಸಗಿ ಅಂಗಗಳಿಗೂ ಹಾನಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಮಹಿಳೆಯನ್ನ ಬಂಧನ ಮಾಡಿ ಠಾಣೆಗೆ ಕರೆದುಕೊಂಡು ಬಂದಿರುವ ಪೊಲೀಸ್ ಅಧಿಕಾರಿ, ಪ್ರತ್ಯೇಕ ರೂಂನಲ್ಲಿ ಕೂಡಿ ಹಾಕಿ ಆಕೆಯ ಬಟ್ಟೆ ಬಿಚ್ಚಿ, ಬೆಲ್ಟ್ನಿಂದ ಹಲ್ಲೆ ಮಾಡಿದ್ದು, ಆಕೆ ಜತೆ ಅಮಾನವೀಯ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಈ ವೇಳೆ ಇತರೆ ಪೊಲೀಸರು ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆ ಪೊಲೀಸ್ ಕಮಿಷನರ್ ಪ್ರಕರಣವನ್ನ ತನಿಖೆಗೆ ಆದೇಶ ನೀಡಿದ್ದು, ನಾಲ್ವರು ಪೊಲೀಸರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇನ್ನು ಕೆಲ ಸಂಘಟನೆಗಳು ಗುರುಗ್ರಾಮ್ ಪೊಲೀಸ್ ಕಮಿಷನರ್ ಆಫೀಸ್ ಮುಂದೆ ಪ್ರತಿಭಟನೆ ಸಹ ನಡೆಸಿದ್ದಾಗಿ ವರದಿಯಾಗಿದೆ.