ಅಹಮದಾಬಾದ್(ಗುಜರಾತ್): ಗುಜರಾತ್‌ನಲ್ಲಿ ಭಾನುವಾರ 374 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜೊತೆಗೆ ಅತಿ ಹೆಚ್ಚು ಏಕದಿನ ಸಾವುಗಳು ಅಂದರೆ ಒಂದೇ ದಿನದಲ್ಲಿ 28 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ 23 ಮಂದಿ ಅಹಮದಾಬಾದ್ ನಿವಾಸಿಗಳಾಗಿದ್ದಾರೆ.
ಕೊರೊನಾದಿಂದ ಹೆಚ್ಚು ಹಾನಿಗೊಳಗಾಗಿರುವ ಅಹಮದಾಬಾದ್‌ನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,817 ತರುಪಿದೆ. ಹಾಗೆಯೇ ನಗರದಲ್ಲಿ ಕೋವಿಡ್ಗೆ 208 ಮಂದಿ ಬಲಿಯಾಗಿದ್ದಾರೆ. ಇನ್ನು, ಸೂರತ್ ಮತ್ತು ವಡೋದರಾದಲ್ಲಿ ಸೋಂಕಿತರ ಸಂಖ್ಯೆ ಕ್ರಮವಾಗಿ 686 ಮತ್ತು 350 ಇದೆ. ಸಾವಿನ ಸಂಖ್ಯೆ ಕ್ರಮವಾಗಿ 30 ಮತ್ತು 25 ಎಂದು ವರದಿಯಾಗಿದೆ.
ರಾಜ್ಯದಲ್ಲಿ ಈವರೆಗೆ 1,042 ರೋಗಿಗಳು ಚೇತರಿಸಿಕೊಂಡಿದ್ದು, ಭಾನುವಾರ 146 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಡಿಸ್ಚಾರ್ಜ್ ಆಗಿ ಮನೆಗೆ ಮರಳಿದವರಲ್ಲಿ ಅಹಮದಾಬಾದ್ ನ 71 ಮತ್ತು ಸೂರತ್ ನ 57 ಜನರಿದ್ದಾರೆ.
ಗುಜರಾತ್‌ನಲ್ಲಿ ಸದ್ಯ 4,096 ಸಕ್ರೀಯ ಪ್ರಕರಣಗಳಿದ್ದು, ಅವುಗಳಲ್ಲಿ 31 ಮಂದಿ ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಕಳೆ 24 ಗಂಟೆಗಳಲ್ಲಿ 5,944 ಪ್ರಕರಣಗಳು ಸೇರಿದಂತೆ 80,060 ಮಾದರಿಗಳನ್ನು ರಾಜ್ಯ ಇದುವರೆಗೆ ಪರೀಕ್ಷೆಗೊಳಪಡಿಸಿದೆ.