ನವದೆಹಲಿ - ಯುಪಿ ಬಾರ್ಡರ್: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಚಲೋ ನಡೆಸಲು ದೇಶದ ಮೂಲೆ ಮೂಲೆಗಳಿಂದ ರೈತರು ದೆಹಲಿಯತ್ತ ಹೆಜ್ಜೆ ಹಾಕಿದ್ದಾರೆ.
ಆದರೆ, ರೈತರ ಆಂದೋಲನ ತಡೆಯಲು ಸರ್ಕಾರ ಅವರಿಗೆ ರಾಜ್ಯದ ಗಡಿಗಳಲ್ಲೇ ಘೇರಾವ್ ಹಾಕಿದೆ. ದೆಹಲಿಯ ಹೃದಯ ಭಾಗದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲು ನಿರಾಕರಿಸಿದೆ. ಆದರೆ, ರೈತರು ಇದ್ದಲ್ಲಿಯೇ ತಮ್ಮ ಐತಿಹಾಸಿಕ ಹೋರಾಟ ಮುಂದುವರಿಸಿದ್ದಾರೆ.
ಘಾಜಿಪುರ ಗಡಿಯಲ್ಲಿ ಉಳಿದಿರುವ ರೈತರೆಲ್ಲ ಹಾಡುಗಳನ್ನು ಹಾಡುತ್ತಾ, ಸಂಗೀತ ವಾದ್ಯಗಳನ್ನು ನುಡಿಸುತ್ತಾ ಚಳಿಯಲ್ಲಿ ನಡುಗುತ್ತಲೇ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರು ರಸ್ತೆಯಲ್ಲಿ ಮಲಗಿದ್ದು ಕಂಡು ಬಂತು. ಏನೇ ಆಗಲಿ ಕೇಂದ್ರದ ಷರತ್ತುಬದ್ದ ಮಾತುಕತೆಗೆ ಒಪ್ಪದಿರಲು ರೈತ ನಾಯಕರು ನಿರ್ಧರಿಸಿದ್ದಾರೆ.