ಕಾಶಿಪುರ (ಉತ್ತರಾಖಂಡ) : ಸಾಮಾನ್ಯವಾಗಿ ಮದುವೆಗಳಲ್ಲಿ ಮಧುಮಕ್ಕಳು ಕಾರಲ್ಲಿ, ಬೈಕ್ನಲ್ಲಿ, ಕುದುರೆ ಮೇಲೆ ಬರೋದನ್ನು ನೋಡಿದ್ದೀವಿ. ಆದರೆ, ಇಲ್ಲೊಂದು ಕಡೆ ನವ ಜೋಡಿ ಟ್ರ್ಯಾಕ್ಟರ್ ಏರಿ ಬಂದಿದೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಕಾಶಿಪುರದಲ್ಲಿ ವಧುವರರು ಟ್ರ್ಯಾಕ್ಟರ್ ಏರಿ ಬಂದು ಜನರ ಗಮನ ಸೆಳೆದಿದ್ದಾರೆ. ಅಲ್ಲದೆ, ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವಿವಿಧ ಬಗೆಯ ಹೂಗಳಿಂದ ಅಲಂಕರಿಸಿರುವ ಟ್ರ್ಯಾಕ್ಟರ್ನಲ್ಲಿ ವರ ಶಿವಾಲ್ಜಿತ್ ಸಿಂಗ್ ಹಾಗೂ ವಧು ಸಂದೀಪ್ಕೌರ್ ರೈತ ಆಂದೋಲನಕ್ಕೆ ಬೆಂಬಲಿಸಿ ಧ್ವಜ ಹಿಡಿದು ಆಗಮಿಸಿದರು.
ಈ ವೇಳೆ ಮಾತನಾಡಿದ ವರ ಶಿವಾಲ್ಜಿತ್ ಸಿಂಗ್, ಕಳೆದ ಹಲವು ದಿನಗಳಿಂದ ನಾನು ಗಾಜಿಪುರದ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಸರ್ಕಾರವು ರೈತರ ಬಗ್ಗೆ ಕಾಳಜಿವಹಿಸುತ್ತಿಲ್ಲ. ಕೃಷಿ ಕಾನೂನುಗಳನ್ನೂ ಹಿಂಪಡೆದುಕೊಳ್ತಿಲ್ಲ ಎಂದು ಕಿಡಿಕಾರಿದರು.
ವಧು ಸಂದೀಪ್ ಕೌರ್ ಮಾತನಾಡಿ, ನಾನು ರೈತನ ಮಗಳು. ಕೇಂದ್ರ ಸರ್ಕಾರದ ಜಾರಿಗೊಳಿಸಿರುವ ಹೊಸ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು. ನನ್ನ ಪತಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ ಎಂದರು.