ಆಗ್ರಾ (ಉ.ಪ್ರ): ಇಲ್ಲಿನ ನಾಗ್ಲಾ ಕಿಶನ್ ಲಾಲ್ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತರನ್ನು ರಾಮ್ವೀರ್, ಆತನ ಪತ್ನಿ ಮೀರಾ ಹಾಗೂ ಆತನ 23 ವರ್ಷದ ಪುತ್ರ ಬಬ್ಲು ಎಂದು ಗುರುತಿಸಲಾಗಿದೆ. ಪಾಲಿಥಿನ್ ಟೇಪ್ ಬಳಸಿ ಮೂವರ ಬಾಯಿ ಹಾಗೂ ಕುತ್ತಿಗೆಗೆ ಕಟ್ಟಿರುವುದು ಕಂಡು ಬಂದಿದೆ. ಕೊಲೆ ಮಾಡಿದ ಬಳಿಕ ಮನೆಯಲ್ಲಿನ ಗ್ಯಾಸ್ ಬಳಸಿ ಮೃತದೇಹಗಳನ್ನು ಸುಡಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ರಾಮ್ವೀರ್ ಮನೆಯಲ್ಲಿಯೇ ಕಿರಾಣಿ ಅಂಗಡಿ ನಡೆಸುತ್ತಿದ್ದ. ಆದರೆ ಪ್ರತಿನಿತ್ಯ ತೆರೆಯುತ್ತಿದ್ದ ಅಂಗಡಿ ಬೆಳಗ್ಗೆ ತೆರೆಯದೆ ಇರುವುದನ್ನು ನಿವಾಸಿಗಳು ಗಮನಿಸಿದ್ದಾರೆ. ಒಬ್ಬರು ಮನೆ ಬಳಿ ಬಂದು ನೋಡಿದಾಗ ಮೂರು ದೇಹಗಳು ನೆಲದ ಮೇಲೆ ಬಿದ್ದಿರುವ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ವಿಚಾರಣೆಗಾಗಿ ರಾಮ್ವೀರ್ ಸಹೋದರನಿಗೆ ಸಮನ್ಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.